Advertisement
ಗುಜ್ಜಾಡಿ ಗ್ರಾ.ಪಂ.ನ 14ನೇ ಹಣಕಾಸು ನಿಧಿಯಡಿ 3 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿನ ಮೀನುಗಾರ ಮಹಿಳೆಯರಿಗೆ ಮೀನು ಮಾರಾಟಕ್ಕೆ ಅನುಕೂಲವಾಗಲೆಂದು ಈ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಗ್ರಾ.ಪಂ. ಹೊಸ ಆಡಳಿತವು ಅಸ್ತಿತ್ವಕ್ಕೆ ಬಂದಿಲ್ಲದ ಕಾರಣ ಹೊಸ ಮಾರುಕಟ್ಟೆ ಉದ್ಘಾಟನೆ ವಿಳಂಬಗೊಂಡಿತ್ತು. ಈಗ ಪಂಚಾಯತ್‌ನ ಹೊಸ ಅಧ್ಯಕ್ಷ- ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದು, ಮೀನು ಮಾರುಕಟ್ಟೆಯು ಆರಂಭಗೊಂಡಿದೆ.
ಹೊಸದಾಗಿ ನಿರ್ಮಾಣಗೊಂಡಿರುವ ಮೀನು ಮಾರುಕಟ್ಟೆಯ ಸುತ್ತಮುತ್ತ ಈಗ ಹುಲ್ಲು, ಪೊದೆಗಳ ರಾಶಿಯೇ ಬೆಳೆದಿದ್ದು, ಇದರಿಂದ ಮೀನು ಮಾರುಕಟ್ಟೆಯೇ ಸರಿಯಾಗಿ ಕಾಣಿಸದ ಸ್ಥಿತಿ ಇಲ್ಲಿ ನಿರ್ಮಾಣಗೊಂಡಿತ್ತು. ಈಗ ಮೀನು ಮಾರುಕಟ್ಟೆಯ ಸುತ್ತಮುತ್ತ ಸ್ವತ್ಛಗೊಳಿಸ ಲಾಗಿದ್ದು, ರಸ್ತೆ ಸಂಪರ್ಕವನ್ನು ಕಲ್ಪಿಸಲಾಗಿದೆ.
Related Articles
ಗುಜ್ಜಾಡಿಯ ಹೊಸ ಮೀನು ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡಿದ್ದರೂ, ಉದ್ಘಾಟನೆಯಾಗದ ಬಗ್ಗೆ, ಈ ಮಾರುಕಟ್ಟೆಗೆ ಸಂಪರ್ಕ ರಸ್ತೆ ಇಲ್ಲದ ಬಗ್ಗೆ “ಉದಯವಾಣಿ ಸುದಿನ’ವು ಫೆ. 19ರಂದು “ಪೂರ್ಣಗೊಂಡು 2 ತಿಂಗಳಾದರೂ ಉದ್ಘಾಟನೆಗೆ ಕೂಡಿ ಬಂದಿಲ್ಲ ಕಾಲ’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿತ್ತು.
Advertisement