Advertisement
ಕೊಳಲಗಿರಿ ಪೇಟೆ ಬಳಿ ಹಸಿಮೀನು ಮಾರುಕಟ್ಟೆಯಿದೆ. ಮೀನು ಮಾರಾಟಕ್ಕೆ ಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಮೂರು ಮಂದಿ ಬಡ ಮಹಿಳೆಯರು ಕಟ್ಟೆಯಲ್ಲಿ ಕುಳಿತು ಮೀನು ಮಾರಾಟ ನಡೆಸುತ್ತಿದ್ದರು. ಗ್ರಾಹಕರು ಮಾರುಕಟ್ಟೆಗೆ ಬಂದು ಇವರ ಬಳಿಯಿಂದ ಮೀನು ಖರೀದಿಸುತ್ತಿದ್ದರು. ವ್ಯಾಪಾರ ಉತ್ತಮವಾಗಿತ್ತು.
ಕಳೆದ ಮಳೆಗಾಲ ಸುರಿದ ಭಾರಿ ಗಾಳಿಮಳೆಗೆ ಕುಸಿದಿದೆ. ಛಾವಣಿಯ ಹೆಂಚುಗಳು ಬಿದ್ದು ಪುಡಿಪುಡಿಯಾಗಿವೆ. ಕಟ್ಟಡದ ಗೋಡೆಗಳು ನೆಲಕ್ಕೆ ಉರುಳಿ ಬಿದ್ದಿದೆ. ಪೀಠೊಪಕರಣಗಳು ಒಂದೊಂದೇ ನೆಲಕ್ಕೆ ಉರುಳು ಬೀಳುತ್ತಿವೆ. ಮಾರುಕಟ್ಟೆ ಒಳಗೆ ಕುಳಿತು ವ್ಯಾಪಾರ ನಡೆಸಲು ಅಸಾಧ್ಯ ಸ್ಥಿತಿಯಿದೆ. ವ್ಯಾಪಾರಕ್ಕೆ ಯೋಗ್ಯವಿಲ್ಲದ ಮತ್ತು ಅಭದ್ರತೆಯ ಕಟ್ಟೆಯಲ್ಲಿ ವ್ಯಾಪಾರ ನಡೆಸಲಾಗದೆ ಮೂರು ಮಂದಿ ಮಹಿಳೆಯರು ಕಟ್ಟಡದಿಂದ ಹೊರ ಬಂದರು.
Related Articles
Advertisement
ಜಾಗ ಗುರುತಿಸಲಾಗಿದೆಶೌಚಾಲಯ ನಿರ್ಮಿಸಲೆಂದು ಪಂಚಾಯತು ಬಸ್ ತಂಗುದಾಣದ ಹಿಂಭಾಗ ಸ್ಥಳ ಗುರುತಿಸಿದೆ. ಆದರೆ ಶೌಚಾಲಯ ನಿರ್ಮಿಸುವಲ್ಲಿ ಹಿಂದೆ ಬಿದ್ದಿದೆ. ಪೇಟೆಯಲ್ಲಿ ಸಮಸ್ಯೆ ತಾಂಡವಾಡುತ್ತಿದೆ. ಮೀನುಗಾರರ ಅಭಿವೃದ್ಧಿಗಾಗಿ ಲಕ್ಷಗಟ್ಟಲೆ ಖರ್ಚು ಮಾಡುವ ಸರಕಾರ ಬಡ ಮೀನುಗಾರರನ್ನು ನಿರ್ಲಕ್ಷಿಸುತ್ತಿದೆ. ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಅಲಕ್ಷ್ಯ ವಹಿಸುತ್ತಿದೆ ಎನ್ನುವುದಕ್ಕೆ ನಮ್ಮ ಸ್ಥಿತಿಯೇ ನಿದರ್ಶನ ಎಂದು ಹಸಿ ಮೀನು ವ್ಯಾಪಾರ ನಿರತ ಬೇಬಿ ಪುತ್ರನ್ ಮತ್ತು ಗೋದನ್ ಮೈನಾ ಅಳಲು ತೋಡಿಕೊಳ್ಳುತ್ತಿದ್ದಾರೆ. ವ್ಯಾಪಾರಕ್ಕೆ ತೊಂದರೆ
ಅನೇಕ ವರ್ಷಗಳಿಂದ ಮೀನು ವ್ಯಾಪಾರ ನಡೆಸುತ್ತಿದ್ದೇವೆ. ಮೊದಲು ಮೀನು ಮಾರುಕಟ್ಟೆ ಒಳಗೆ ಕುಳಿತುಕೊಳ್ಳುತ್ತಿದ್ದೆವು. ಕಟ್ಟಡ ಬಿದ್ದು ಅನೇಕ ಸಮಯಗಳಾಗಿವೆ. ಬಳಿಕ ರಸ್ತೆ ಬಿದಿ ಕುಳಿತು ವ್ಯಾಪಾರ ಮಾಡುತ್ತಿದ್ದೇವೆ. ದುರಸ್ತಿಗಾಗಿ ಪಂಚಾಯತಿಗೆ ದೂರು ನೀಡಿದ್ದೇವೆ. ಇದುವರೆಗೆ ದುರಸ್ತಿ ಮಾಡಿಕೊಟ್ಟಿಲ್ಲ. ಮೀನು ಖರೀದಿಸಲು ಬರುವವರಿಗೆ ಮತ್ತು ವ್ಯಾಪಾರ ನಡೆಸುವ ನಮಗೆ ತೊಂದರೆಯಾಗಿದೆ ಎನ್ನುವುದು ಹಸಿ ಮೀನು ಮಾರಾಟ ಮಹಿಳೆ ಶಾರದಾ ಅವರ ಅಂಬೋಣ. ಕ್ರಿಯ ಯೋಜನೆ
ಮಾರುಕಟ್ಟೆ ದುರಸ್ತಿ ಹಾಗೂ ಶೌಚಾಲಯ ನಿರ್ಮಾಣ ಎರಡಕ್ಕೂ ಕ್ರಿಯಾಯೋಜನೆ ಸಿದ್ದಪಡಿಸಿದ್ದೇವೆ. ಶೀಘ್ರದಲ್ಲಿ ದುರಸ್ತಿ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ಎರಡು ಆರಂಭವಾಗುತ್ತದೆ. ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ಉಪ್ಪೂರು ಗ್ರಾಪಂನ ಅಧ್ಯಕ್ಷೆ ಆರತಿ ಅವರು ಹೇಳಿದರು. ಇದುವೆರೆಗೆ ಪ್ರಯೋಜವಾಗಿಲ್ಲ
ಪೇಟೆಯಲ್ಲಿ ಮಾರುಕಟ್ಟೆ ಮತ್ತು ಶೌಚಾಲಯ ಎರಡು ಇಲ್ಲದೆ ಸಮಸ್ಯೆ ಗಳಾಗುತ್ತಿವೆ. ಈ ಕುರಿತು ಪಂಚಾಯತು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಲೇಬಂದಿದ್ದೇವೆ. ಇದುವರೆಗೆ ಪ್ರಯೋಜನವಾಗಿಲ್ಲ ಎಂದು ಕೊಳಲಗಿರಿ ವ್ಯಾಪಾರಸ್ಥರಾದ ಅರುಣ್ ಅವರ ಅಭಿಪ್ರಾಯ. ಮೂಗಿಗೆ ಬಡಿತಿದೆ ವಾಸನೆ
ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯವೂ ಇಲ್ಲ. ಅಂಗಡಿ-ಮುಂಗಟ್ಟುಗಳ ಮಂದಿ, ಮಹಿಳೆಯರು, ಮಕ್ಕಳು ಹೀಗೆ ಎಲ್ಲರೂ ರಸ್ತೆ ಬದಿಯ ಪೊದೆಗಳಲ್ಲಿ ಶೌಚ ಮಾಡುತ್ತಿದ್ದಾರೆ. ಪರಿಸರ ದುರ್ನಾತ ಬೀರುತ್ತಿದೆ. ಇದರಿಂದ ಮಹಿಳೆಯರಿಗೆ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲಿ ತೆರಳುವವರ ಮೂಗಿಗೂ ವಾಸನೆ ಬಡಿಯುತ್ತಿದೆ.