Advertisement
ಪುರಾತನ ಅಥವಾ ಐತಿಹಾಸಿಕ ಹಿನ್ನೆಲೆಯ ಊರೊಂದರಲ್ಲಿ ಪ್ರಾಚೀನ ಕಾಲದ್ದು ಎನ್ನಬಹುದಾದ ಅಸ್ಥಿಪಂಜರವೋ, ಶಿಲಾಶಾಸನವೋ ಸಿಕ್ಕಿತು ಎಂದುಕೊಳ್ಳಿ. ಅದು ಸಹಜವಾಗಿಯೇ ಸುದ್ದಿಯಾಗುತ್ತದೆ. ಆ ಅಸ್ಥಿಪಂಜರ/ ಶಿಲಾಶಾಸನವನ್ನು ಜೋಪಾನ ಮಾಡುವಂತೆ ಸರ್ಕಾರಗಳಿಂದ ಆದೇಶ ಬರುತ್ತದೆ. ಅದರ ಬೆನ್ನಿಗೇ ಒಂದಿಷ್ಟು ಅಧಿಕಾರಿಗಳ ತಂಡವೂ ಆಗಮಿಸುತ್ತದೆ. ಹೀಗೆ ಬಂದವರು, ಆ ಅಸ್ಥಿಪಂಜರ/ ಶಿಲಾಶಾಸನವನ್ನು ಹತ್ತಾರು ಕೋನಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಾರೆ. ಆನಂತರ ಅದರ ಕಾಲ ಮತ್ತು ಮಹತ್ವದ ಕುರಿತು ಟಿಪ್ಪಣಿ ಬರೆಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ಮಾತುಗಳು ಪಫೆìಕ್ಟ್ ಆಗಿರುತ್ತವೆ. ತೀರಾ ಆಕಸ್ಮಿಕವಾಗಿ ಸಿಕ್ಕಿದ ಒಂದು ವಸ್ತುವನ್ನು ನಿಕಷಕ್ಕೆ ಒಳಪಡಿಸಿ ಅದು ಇಂತಿಷ್ಟೇ ವರ್ಷ ಹಳೆಯದು, ಅದು ಇಂಥದೇ ಜನಾಂಗಕ್ಕೆ ಸೇರಿದಂಥದು ಎಂದು ಹೇಳುತ್ತಾರಲ್ಲ ಅವರನ್ನು ಆಂಥ್ರೋಪಾಲಜಿಸ್ಟ್ ಎಂದು ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ಮಾನವ ಶಾಸ್ತ್ರಜ್ಞರು ಎನ್ನುತ್ತಾರೆ.
ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶದ ಬಳಿಕ ಪಿಯುಸಿಯಲ್ಲಿ ವಿಜ್ಞಾನದ ಪಿಸಿಬಿ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ, ಬಿಎಸ್ಸಿ ಮತ್ತು ಎಂಎಸ್ಸಿಯಲ್ಲಿ ಆಂಥ್ರೋಪಾಲಜಿ ವಿಷಯವನ್ನು ತೆಗೆದುಕೊಂಡು ಮಾನವ ಶಾಸ್ತ್ರಜ್ಞರಾಗಬಹುದು. ಮತ್ತೂಂದು ಮಾರ್ಗದಲ್ಲಿ ಪಿಯುಸಿಯಲ್ಲಿ ಹ್ಯೂಮಾನಿಟೀಸ್ ವಿಷಯ ಅಭ್ಯಸಿಸಿ, ಬಿಎ, ಎಂಎಯಲ್ಲಿ ಆಂಥ್ರೋಪಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೂ ಮಾನವ ಶಾಸ್ತ್ರಜ್ಞರಾಗಬಹುದು. ಇದರಲ್ಲಿ ಫಿಜಿಕಲ…, ಆರ್ಕಿಯಾಲಾಜಿಕಲ…, ಸೋಷಿಯೋ- ಕಲ್ಚರಲ್, ಲಿಂಗ್ವಿಸ್ಟಿಕ್, ಅಪ್ಲೆ„ಡ್ ಆಂಥ್ರೋಪಾಲಸ್ಟ್ ಎಂಬ ವಿವಿಧ ಬಗೆಗಳಿವೆ. ಆಸಕ್ತಿಗೆ ಅನುಗುಣವಾಗಿ ಅಧ್ಯಯನ ಮಾಡಬಹುದು.
Related Articles
- ಇತಿಹಾಸ, ವಿವಿಧ ಸಂಸ್ಕೃತಿ, ಸಮುದಾಯ, ಬಡಕಟ್ಟುಗಳ ಬಗೆಗೆ ಜ್ಞಾನ.
– ತಾತ್ವಿಕ ಚಿಂತನೆ, ತುಲನಾತ್ಮಕ ಜ್ಞಾನ ಮತ್ತು ಭಾಷಿಕ ಆಧ್ಯಯನ ನಡೆಸುವ ಸಾಮರ್ಥ್ಯ.
– ಕಾಡಿನಲ್ಲಿ ಅಲೆಯುವ, ಬುಡಕಟ್ಟಿನೊಂದಿಗೆ ಬದುಕುವ, ಭೂಮಿಯ ಅಂತರಾಳದ ಪುರಾತನ ಅಸ್ಥಿಪಂಜರ, ವಾಸ್ತುಶಿಲ್ಪ ಇತ್ಯಾದಿಗಳ ಅಧ್ಯಯನಕ್ಕೆ ತೆರೆದುಕೊಳ್ಳುವ ಪ್ರವೃತ್ತಿ.
– ಸಾಕ್ಷ್ಯಗಳನ್ನು ಸಂಗ್ರಹಿಸುವ, ಅವಸ್ಥಾಂತರಗಳನ್ನು ಕಲ್ಪಿಸಿಕೊಳ್ಳುವ ಚಾಣಾಕ್ಷತೆ
– ಮಾನವನ ಜೀವನ ಪದ್ಧತಿ, ರೂಢಿಪದ್ದತಿ, ಆಚಾರವಿಚಾರಗಳ ತಿಳಿವಳಿಕೆ
– ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವ ಭಾಷೆ, ವ್ಯಕ್ತಿ, ಉಡುಪು ಆಲೋಚನೆಗಳ ಕುರಿತ ಸಾಮಾನ್ಯಜ್ಞಾನ
ಸಂಬಳ ಎಷ್ಟ್ ಸಿಗುತ್ತೆ?
ಮಾನವಶಾಸ್ತ್ರಜ್ಞ ಹುದ್ದೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೇಡಿಕೆಯಿದೆ. ಹೀಗಾಗಿ ಪ್ರಾರಂಭ ಹಂತದಲ್ಲಿಯೇ ಮಾನವ ಶಾಸ್ತ್ರಜ್ಞರಿಗೆ 3-5 ಲಕ್ಷ ರೂ. ವಾರ್ಷಿಕ ವೇತನ ನೀಡುವುದುಂಟು. ಅನುಭವೀ ಮಾನವಶಾಸ್ತ್ರಜ್ಞರು ಹೆಚ್ಚು ಗಳಿಕೆ ಮಾಡುತ್ತಾರೆ.
Advertisement
ಅವಕಾಶಗಳು ಎಲ್ಲೆಲ್ಲಿ?– ಅಂತಾರಾಷ್ಟ್ರೀಯ ಸಂಘಟನೆಗಳಾದ ಡಬ್ಲೂಎಚ್‌ಒ, ಯೂನಿಸೆಫ್, ಯುನೆಸ್ಕೋ
– ವೈದ್ಯಕೀಯ ಸಂಶೋಧನಾಲಯ
– ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳ ಸಾಂಸ್ಕೃತಿಕ ಅಧ್ಯಯನ
– ವಿಶ್ವವಿದ್ಯಾಲಯಗಳು
– ಮ್ಯೂಜಿಯಂ ಮತ್ತು ಆರ್ಟ್ ಗ್ಯಾಲರಿ
– ಪುರಾತತ್ವ ಇಲಾಖೆ ಸರ್ವೆ ಕಾರ್ಯ
– ಜೈವಿಕ ಸಮೀಕ್ಷಾ ಸಂಸ್ಥೆ ಓದೋದು ಎಲ್ಲಿ?
– ಮೈಸೂರು ವಿವಿ, ಮೈಸೂರು
– ಕರ್ನಾಟಕ ವಿವಿ, ಧಾರವಾಡ
– ರಾಜಸ್ಥಾನ್ ವಿವಿ, ರಾಜಸ್ಥಾನ್
– ಹೈದರಾಬಾದ್ ವಿವಿ, ಹೈದರಾಬಾದ್
– ಮದ್ರಾಸ್ ವಿವಿ, ಮದ್ರಾಸ್
– ವಿನೋಬಾ ಭಾವೆ ವಿವಿ, ಜಾರ್ಖಂಡ್ ಅನಂತನಾಗ್ ಎನ್.