Advertisement

ಕಾಫಿ ನಾಡಲ್ಲಿ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ

12:30 AM Mar 03, 2019 | |

ಚಿಕ್ಕಮಗಳೂರು: ರಾಜ್ಯದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಕಾಫಿನಾಡು ಚಿಕ್ಕಮಗಳೂರಲ್ಲಿ ಚಾಲನೆ ದೊರೆಯಿತು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಲಾಗಿರುವ ಸಮ್ಮೇಳನ ಎರಡು ದಿನ ನಡೆಯಲಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬೆಳಗ್ಗೆ 9.00 ಗಂಟೆಗೆ ಆರಂಭವಾಗಬೇಕಿತ್ತಾದರೂ ಕಲಾ ತಂಡಗಳು ಬರುವುದು ವಿಳಂಬವಾಗಿದ್ದು ಹಾಗೂ ಸಾಹಿತ್ಯಾಭಿಮಾನಿಗಳ ಕೊರತೆ ಯಿಂದಾಗಿ ತಡವಾಗಿ 10.15ಕ್ಕೆ ಆರಂಭ ವಾಯಿತು. ನಗರದ ಎಂ.ಜಿ. ರಸ್ತೆಯ ಗಣಪತಿ ದೇವಾಲಯದಿಂದ ಬೆಳಗ್ಗೆ 10-15ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭ ವಾಯಿತು. ಸಮ್ಮೇಳನದ ಸರ್ವಾಧ್ಯಕ್ಷೆ ಡಾ| ಸುಧಾಮೂರ್ತಿ ಅವರನ್ನು ಸಾರೋಟಿನಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

Advertisement

ಮಹಿಳಾ ಸಮ್ಮೇಳನ ಅಗತ್ಯ: ಸಮ್ಮೇಳನಾಧ್ಯಕ್ಷೆ ಡಾ| ಸುಧಾಮೂರ್ತಿ ಮಾತನಾಡಿ, ಮಹಿಳೆಯರು ಮನಸ್ಸಿನಲ್ಲಿ ತಮ್ಮನ್ನು ತಾವು ಬಂಧಿಸಿಕೊಂಡಿರುವುದ ರಿಂದ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ತಮ್ಮನ್ನು ತಾವು ಬಂಧನದಿಂದ ಬಿಡಿಸಿಕೊಂಡು ತಮ್ಮ ಶಕ್ತಿ ಬಳಸಿಕೊಳ್ಳಲು ಮುಂದಾಗಬೇಕೆಂದು ಹೇಳಿದರು.

ಸಾಹಿತ್ಯ ಪರಿಷತ್‌ ವತಿಯಿಂದ ಮಹಿಳಾ ಸಮ್ಮೇಳನಗಳನ್ನು ನಡೆಸುವುದು ಅವಶ್ಯಕ. ಮಹಿಳೆಯರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದು ರಾಜಕೀಯ ಸಮಸ್ಯೆ ಇರಬಹುದು, ಐಟಿ, ಬಿಟಿ ಸಮಸ್ಯೆ ಇರಬಹುದು, ಉದ್ಯೋಗದ ಸಮಸ್ಯೆ ಇರಬಹುದು. ಕೆಲವೊಂದು ಸಮಸ್ಯೆ ಗಳನ್ನು ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಹೇಳಿಕೊಳ್ಳಲು ಸಾಧ್ಯವಾಗುವು ದಿಲ್ಲ. ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸುಲಭವಾಗಿ ಚರ್ಚಿಸಲು ಸಾಧ್ಯವಾಗುತ್ತದೆ. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಯಾದರೂ ಮಹಿಳಾ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಎಂದರು. ನಾನು ಮೊದಲು ಪುಸ್ತಕವನ್ನು ಬರೆದಿದ್ದು ಕನ್ನಡದಲ್ಲಿಯೇ.

ಅದು ನನ್ನ 29ನೇ ವಯಸ್ಸಿನಲ್ಲಿ. ನನ್ನ 52ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಇಂಗ್ಲಿಷ್‌ನಲ್ಲಿ ಪುಸ್ತಕವನ್ನು ಬರೆದೆ. ಅದು ಇಂಗ್ಲಿಷ್‌ ಮೇಲಿನ ವ್ಯಾಮೋಹದಿಂದಲ್ಲ. ಆದರೆ, ಇಂಗ್ಲಿಷ್‌ ಸಾಹಿತ್ಯ ವನ್ನು ಬರೆಯಲಾರಂಭಿಸಿದ ನಂತರ ನನ್ನ ಪುಸ್ತಕವು 22 ವಿವಿಧ ಭಾಷೆಗಳಲ್ಲಿ ಮುದ್ರಣವಾಯಿತು. ಕನ್ನಡದಲ್ಲಿ ಬರೆದಾಗ ಅದು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಅಷ್ಟು ಮಾತ್ರವಲ್ಲದೆ ನಮ್ಮ ರಾಜ್ಯದಲ್ಲಿ ನನ್ನನ್ನು ಎಂದಿಗೂ ಸಾಹಿತಿ ಎಂದು ಪರಿಗಣಿಸಿಲ್ಲ. ಕೇವಲ ಇನ್ಫೋಸಿಸ್‌ ಹಾಗೂ ಸಮಾಜ ಸೇವಕಿ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.

ಆದರೆ ಇಂಗ್ಲಿಷ್‌ನಲ್ಲಿ ನನ್ನನ್ನು ಲೇಖಕಿ ಎಂದು ಗುರುತಿಸಲಾಗುತ್ತದೆ. ಇಂಗ್ಲಿಷ್‌ನಲ್ಲಿ ಕಾದಂಬರಿಯನ್ನು ಬರೆಯುವುದು ಸುಲಭದ ಕೆಲಸವಲ್ಲ ಎಂದರು. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಲವರು ಸಾಹಿತ್ಯ ಪರಿಷತ್‌ನಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಮಾತನಾಡಿದ ಕಸಾಪ ರಾಜ್ಯಾಧ್ಯಕ್ಷ ಡಾ|ಮನು ಬಳಿಗಾರ್‌, ಮಹಿಳಾ ಅಧ್ಯಕ್ಷರ ನೇಮಕಕ್ಕೆ ನಮ್ಮ ವಿರೋಧವಿಲ್ಲ. ಅಧ್ಯಕ್ಷರ ನೇಮಕವಾಗುವುದು ಚುನಾವಣೆ ಮೂಲಕ. ಚುನಾವಣೆಗೆ ಸ್ಪರ್ಧಿಸಿ ಅಧ್ಯಕ್ಷರಾಗ ಬಹುದು ಎಂದರು. ಮಹಿಳಾ ಸಮ್ಮೇಳನಗಳನ್ನು ಹೆಚ್ಚಾಗಿ ನಡೆಸಬೇಕೆಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಭಾನುವಾರ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ತಾವೇ ವಿಷಯವನ್ನು ಮಂಡಿಸಿ ಎರಡು ವರ್ಷಕ್ಕೊಮ್ಮೆ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಲು ಪ್ರಸ್ತಾಪಿಸುತ್ತೇನೆಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಸಮ್ಮೇಳನ ಉದ್ಘಾಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next