Advertisement

83ನೇ ವಯಸ್ಸಿನಲ್ಲಿ ಪ್ರಥಮ ಮತದಾನ :ಮಾದರಿಯಾದ ಅಸ್ಸಿಯಮ್ಮ

02:16 AM Apr 25, 2019 | sudhir |

ಕಾಸರಗೋಡು: ಇಳಿ ವಯಸ್ಸಿನಲ್ಲಿ ಪ್ರಥಮ ಬಾರಿಯ ಮತದಾನ ನಡೆಸಿ ಮತದಾನ ಜಾಗೃತಿಗೆ ಮಹಿಳೆಯೊಬ್ಬರು ಜ್ವಲಂತ ನಿದರ್ಶನವಾದುದು ನಾಡಿಗೆ ಅಭಿಮಾನವಾಗಿದೆ.

Advertisement

ವಾರ್ಧಕ್ಯದ ಜತೆಗೆ ಅಂಗವಿಕಲರಾಗಿ ದ್ದರೂ, ಮತದಾನ ನಡೆಸುವಲ್ಲಿ ಯಾವ ಹಿಂಜರಿಕೆಯೂ ಇಲ್ಲದೆ ಆ್ಯಂಬುಲೆನ್ಸ್‌ ನಲ್ಲಿ ಆಗಮಿಸಿ ಮೊದಲ ಬಾರಿಗೆ ಮತ ಚಲಾಯಿಸಿ ಅಸ್ಸಿಯಮ್ಮ ನಾಡಿಗೆ ಮಾದರಿಯಾಗಿದ್ದಾರೆ.

ತಮ್ಮ 83ನೇ ವಯಸ್ಸಿನಲ್ಲಿ ವಯೋ ಸಹಜ ದೌರ್ಬಲ್ಯಗಳೊಂದಿಗೆ, ಅಂಗ ವಿಕಲರಾಗಿರುವ ಎಣ್ಮಕಜೆ ಗ್ರಾಮ ಪಂಚಾಯತ್‌ನ ಶೇಣಿ ಗ್ರಾಮದ ಏಳಾRನ ಶೇಣಿಮೂಲೆ ನಿವಾಸಿ ಅಸ್ಸಿಯಮ್ಮ ಅವರು ಅಂಗನವಾಡಿ ಟೀಚರ್‌ ಯಶೋದಾ ಅವರ ಸಹಾಯದೊಂದಿಗೆ ಆಗಮಿಸಿದ್ದರು. ಇಲ್ಲಿನ 189ನೇ ನಂಬ್ರ ಮತಗಟ್ಟೆಯಲ್ಲಿ ಅವರು ಮತಚಲಾಯಿಸಿದ್ದಾರೆ.

ಪತಿಯಿಂದ ವಿಚ್ಛೇದನಗೊಂಡು ಬದುಕು ತ್ತಿರುವ ಅಸ್ಸಿಯಮ್ಮ ಅವರ ಪುತ್ರ ಜುನೈದ್‌ ಕೂಡ ಅಂಗವಿಕಲರಾಗಿದ್ದಾರೆ. ಅಂಗನವಾಡಿ ಟೀಚರ್‌ ಯಶೋದಾ ಅವರ ಬಗೆಗಿನ ವಿಶ್ವಾಸ ಮತ್ತು ಸೊಸೆ ನೀಡುತ್ತಿರುವ ಬೆಂಬಲದಿಂದ ಮತ ಚಲಾಯಿಸಲು ಸಾಧ್ಯವಾಗಿತ್ತು ಎಂದು ಅಸ್ಸಿಯಮ್ಮ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next