ಬೆಂಗಳೂರು : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಬಳಿಕ ಬಸವರಾಜ ಬೊಮ್ಮಾಯಿ ಮೊದಲ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ. ರಾಜ್ಯದ ಪ್ರಮುಖ ಅಧಿಕಾರಿಗಳ ಜೊತೆ ಸಭೆ ಮಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಬೊಮ್ಮಾಯಿ, ಆಡಳಿತದಲ್ಲಿ ತೊಂದರೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸರ್ಕಾರದ ದಿಕ್ಸೂಚಿ ಯಾವ ರೀತಿ ಇದೆ ಎಂದು ನಾನು ಹೇಳಿದ್ದೇನೆ. ದಕ್ಷ ಪ್ರಾಮಾಣಿಕವಾಗಿ ಸರ್ಕಾರ ಇರಬೇಕು. ಪ್ರತಿಯೊಂದು ಸಮಾಜದ ಪರವಾಗಿ ನಮ್ಮ ಸರ್ಕಾರ ಇದೆ ಎಂದರು.
ನಮ್ಮ ಆಡಳಿತ ಮ್ಯಾಕ್ರೋ ಅಲ್ಲ, ಮೈಕ್ರೋ ಲೆವೆಲ್ ಗೆ ಹೋಗಬೇಕು. ಒಟ್ಟಾರೆ ಕಾರ್ಯಕ್ರಮ ಯಶಸ್ವಿಯಾಗುವ ರೀತಿ ಕೆಲಸ ಮಾಡಬೇಕು. ಯಾವುದೇ ಕೆಲಸ ವಿಳಂಬ ಆಗಬಾರದು. ನಾನೂ ಕೂಡ ನಿಮ್ಮ ಜೊತೆ ಒಬ್ಬ ಟೀಂ ಮೆಂಬರ್ ಎಂದು ಹೇಳುವ ಮೂಲಕ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಅಧಿಕಾರಿಗಳು ಏನೇ ಮಾಡಿದ್ರು ನಡೆಯುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅಲ್ಲದೆ ಅಧಿಕಾರಿಗಳು ಯಾವುದೇ ಸಮಯದಲ್ಲೂ ನನ್ನ ಜೊತೆ ಸಲಹೆ ಸೂಚನೆಗಳನ್ನು ಚರ್ಚಿಸಬಹುದು. ಕೋವಿಡ್ ವೇಳೆ ಹಣಕಾಣಿಸಿನ ಶಿಸ್ತು ಮುಖ್ಯವಾಗಿದೆ. ಪ್ರತೀ ಇಲಾಖೆಯಲ್ಲಿ ಶೇ ಕನಿಷ್ಟ 5 ಖರ್ಚು ರಷ್ಟು ಕಡಿಮೆ ಮಾಡಬೇಕು ಎಂದು ಹೇಳುವ ಮೂಲಕ ಅನಗತ್ಯ ಖರ್ಚಿಗೆ ಕಡಿವಾಣದ ಸೂತ್ರವನ್ನು ಬೊಮ್ಮಾಯಿ ಹೇಳಿದ್ದಾರೆ.
ಬೊಮ್ಮಾಯಿ ಸಂಪುಟ ಸಭೆಯ ನಿರ್ಣಯಗಳು :
- ರೈತ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶಿಷ್ಯ ವೇತನ.. ಈ ಯೋಜನೆಗೆ ಒಂದು ಸಾವಿರ ಕೋಟಿ
- ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 1000 ರೂ ಇಂದ 1200ಕ್ಕೆ ಹೆಚ್ಚಳ.. ಇದರಿಂದ 862 ಕೋಟಿ ಹೆಚ್ಚಳವಾಗಲಿದೆ
- ವಿಧವಾ ವೇತನ 600 ರಿಂದ 800ಕ್ಕೆ ಏರಿಕೆ.. ಇದರಿಂದ 400 ಕೋಟಿ ಹೆಚ್ಚುವರಿ ಹೊರೆ
- ಅಂಗವಿಕಲರಿಗೆ ನೀಡುತ್ತಿದ್ದ 600 ರೂ ಬದಲು ಇನ್ನುಮುಂದೆ 800 ರೂ