Advertisement

20 ವರ್ಷಗಳಲ್ಲೇ ಮೊದಲ ಭೇಟಿ

06:00 AM May 17, 2018 | Team Udayavani |

ಪ್ಯಾಂಗ್ಯಾಂಗ್‌: ಭಾರತದ ವಿದೇ ಶಾಂಗ ಇಲಾಖೆ ಸಹಾಯಕ ಸಚಿವ ವಿ.ಕೆ.ಸಿಂಗ್‌ ಬುಧವಾರ ಉತ್ತರ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ಭಾರತದ ಉನ್ನತ ಮಟ್ಟದ ನಾಯಕ ರೊಬ್ಬರು ಉ.ಕೊರಿಯಾಗೆ ಭೇಟಿ ನೀಡುತ್ತಿರು ವುದು 20 ವರ್ಷಗಳಲ್ಲಿ ಇದೇ ಮೊದಲು.

Advertisement

ಅಣ್ವಸ್ತ್ರ ನಿಶ್ಶಸ್ತ್ರೀಕರಣ ವಿಚಾರದಲ್ಲಿ ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವ ವೇಳೆಯೇ ಸಚಿವ ಸಿಂಗ್‌ ಪ್ಯಾಂಗ್ಯಾಂಗ್‌ಗೆ ತೆರಳಿದ್ದು, ಅಲ್ಲಿನ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ. 

ಪಾಕ್‌ ಜತೆ ಉ.ಕೊರಿಯಾಗೆ ಇರುವ ಅಣ್ವಸ್ತ್ರ ನಂಟಿನ ಅನುಮಾನಗಳ ಕುರಿತು ಭಾರತದ ಕಳವಳದ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉ. ಕೊರಿಯಾ,”ಭಾರತದ ಭದ್ರತೆಗೆ ಅಪಾಯ ಉಂಟುಮಾಡುವಂಥ ಯಾವ ಕ್ರಮಕ್ಕೂ ನಾವು ಅವಕಾಶ ನೀಡುವುದಿಲ್ಲ’ ಎಂದು ಭರವಸೆ ನೀಡಿದೆ. ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗಿನ ಭೇಟಿ ರದ್ದುಗೊಳಿಸುವ ಬೆದರಿಕೆಯನ್ನು ಉತ್ತರ ಕೊರಿಯಾ ಹಾಕುತ್ತಿದ್ದರೂ, ಟ್ರಂಪ್‌ ಅವರು ಭೇಟಿಗೆ ತಯಾರಿ ಮುಂದುವರಿಸಿರುವುದಾಗಿ ಅಮೆರಿಕ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next