Advertisement

ಭಾರತದಲ್ಲಿ ಮಂಕಿಪಾಕ್ಸ್‌ಗೆ ಮೊದಲ ಬಲಿ

09:09 PM Jul 31, 2022 | Team Udayavani |

ತಿರುವನಂತಪುರಂ: ಕೇರಳದ ತ್ರಿಶೂರ್‌ನಲ್ಲಿ ಶನಿವಾರ ಮೃತಪಟ್ಟ 22 ವರ್ಷದ ಯುವಕನಿಗೆ ಮಂಕಿಪಾಕ್ಸ್‌ ಇತ್ತು ಎನ್ನುವುದು ಈಗ ದೃಢಪಟ್ಟಿದ್ದು, ಭಾರತದಲ್ಲಿ ಮಂಕಿಪಾಕ್ಸ್‌ಗೆ ಬಲಿಯಾದ ಮೊದಲ ಪ್ರಕರಣವಿದು ಎಂದು ಹೇಳಲಾಗಿದೆ.

Advertisement

ತ್ರಿಶೂರ್‌ ಜಿಲ್ಲೆಯ ಪುಣ್ಣಿಯೂರ್‌ನ ಯುವಕ ಜು.22ರಂದು ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ)ನಿಂದ ಕೇರಳಕ್ಕೆ ವಾಪಸಾಗಿದ್ದ. ಭಾರತಕ್ಕೆ ಬರುವ ಮುನ್ನಾ ದಿನ ಆತ ಮಂಕಿಪಾಕ್ಸ್‌ ಸೋಂಕು ಪರೀಕ್ಷೆಗೆ ಒಳಗಾಗಿದ್ದ. ಊರಿಗೆ ಮರಳಿದ ಬಳಿಕ ಅವನಿಗೆ ವೈರಲ್‌ ಜ್ವರ ಕಾಣಿಸಿಕೊಂಡಿತ್ತು. ಆದರೆ, ಮಂಕಿಪಾಕ್ಸ್‌ನ ಇತರೆ ಯಾವುದೇ ಬಾಹ್ಯ ಲಕ್ಷಣಗಳು ಗೋಚರಿಸಿರಲಿಲ್ಲ. ನಂತರ ಯುಎಇಯಿಂದ ಬಂದ ವರದಿಯು ಆತನಿಗೆ ಮಂಕಿಪಾಕ್ಸ್‌ ಪಾಸಿಟಿವ್‌ ಆಗಿರುವುದನ್ನು ದೃಢಪಡಿಸಿದೆ. ಆದರೆ, ಶಂಕಿತ ರೋಗಿಯ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ.

ಈ ಸೋಂಕಿನಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆಯಿದ್ದರೂ, ಸೋಂಕು ವ್ಯಾಪಿಸುವಿಕೆ ಹೆಚ್ಚಿರುವ ಕಾರಣ ಆತನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next