Advertisement

ಕೊಪ್ಪಳದಲ್ಲಿ ಮೊದಲ ತ್ರಿವಳಿ ತಲಾಖ್ ಕೇಸ್ ದಾಖಲು

07:25 PM Sep 19, 2022 | Vishnudas Patil |

ಕೊಪ್ಪಳ: ಕೊಪ್ಪಳದಲ್ಲಿ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯರ ಮದುವೆಯ ರಕ್ಷಣೆ ಕಾಯ್ದೆಯಡಿ ಖಾಜೀದಾ ಬೇಗಂ ಅವರು ಗಂಡನ ವಿರುದ್ಧ ತ್ರಿವಳಿ ತಲಾಖ್‌ನಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ಕೊಪ್ಪಳದ ಮರಿಶಾಂತ ನಗರದ ಖಾಜೀದಾ ಬೇಗಂ ಅವರು ಪತಿ ಸೈಯದ್ ವಾಹೀದ್ ಆತ್ತಾರ್ ಹಾಗೂ ಅವರ ಮನೆಯವರ ಕೌಟುಂಬಿಕ ಕಿರುಕುಳ ನೀಡಿದ ವಿಷಯವಾಗಿ 2021 ರಲ್ಲಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಪತಿ ಹಾಗೂ ಅವರ ಮನೆಯವರ ಮೇಲೆ ದೂರು ದಾಖಲಾಗಿ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿತ್ತು.

ಖಾಜೀದಾ ಬೇಗಂ ಅವರು ಕೊಪ್ಪಳದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಗಂಡನ ವಿರುದ್ಧ ಡೊಮೆಸ್ಟಿಕ್ ವೈಲೆನ್ಸ್ ಪ್ರಕರಣದ ದಾಖಲು ಮಾಡಿದ್ದರ ಕುರಿತಂತೆ ಸೆ.15 ರಂದು ಮುದ್ದತ್ತು ಇತ್ತು. ನೊಂದ ಮಹಿಳೆ ತನ್ನ ತಂದೆಯೊಂದಿಗೆ ಕೋರ್ಟ್‌ಗೆ ಆಗಮಿಸಿದ್ದ ವೇಳೆ ಕೋರ್ಟ್ ಗೇಟ್ ಬಳಿ ಪತಿ ಸೈಯದ್ ವಾಹೀದ್ ಆತ್ತಾರ ತಡೆದು ನಿಲ್ಲಿಸಿ ನಾನು ಷರಿಯತ್ ಪ್ರಕಾರ ಬೇರೆ ಮದುವೆಯಾಗುತ್ತೇನೆ. ನಿನಗೆ ತಲಾಖ್‌ ಕೊಡುತ್ತೇನೆ. ನಿನಗೂ ನನಗೂ ಯಾವುದೇ ಸಂಬಂಧವಿಲ್ಲ. ತಂಟೆಗೆ ಬಂದರೆ ಸಾಯಿಸಿ ಬಿಡುತ್ತೇನೆ ಎಂದು ಹೇಳಿ ಮೂರು ಬಾರಿ ತಲಾಖ್ ಶಬ್ದ ಉಚ್ಚಾರ ಮಾಡಿ ಹೋಗಿರುವ ಕುರಿತು ಖಾಲೀದಾ ಬೇಗಂ ಅವರು ಗಂಡ ಸೈಯದ್ ವಾಹೀದ್ ಅವರ ಮೇಲೆ ಮತ್ತೆ ಸೆ.18 ರಂದು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮಹಿಳೆಯರ ಮದುವೆಯ ರಕ್ಷಣೆ ಕಾಯ್ದೆಯಡಿಯಲ್ಲಿ ಗಂಡನ ವಿರುದ್ಧ ಪ್ರಕರಣ ದಾಖಲಾಗಿದ್ದಾರೆ.

ಇದು ಕೊಪ್ಪಳದಲ್ಲಿ ಮೊಟ್ಟ ಮೊದಲ ಬಾರಿಗೆ ತ್ರಿವಳಿ ತಲಾಖ್ ನಡಿ ದಾಖಲಾದ ಪ್ರಕರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next