Advertisement

ಮೊದಲ ಟೆಸ್ಟ್‌ ರೋಚಕ ಹಂತಕ್ಕೆ; ಇಂಗ್ಲೆಂಡ್‌ ವಿರುದ್ದ ಗೆಲುವಿನ ನಿರೀಕ್ಷೆಯಲ್ಲಿ ಪಾಕ್

10:08 PM Dec 04, 2022 | Team Udayavani |

ರಾವಲ್ಪಿಂಡಿ: ಪ್ರವಾಸಿ ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ನಡುವೆ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ರೋಚಕ ಹಂತ ತಲುಪಿದೆ. ಈ ಟೆಸ್ಟ್‌ನಲ್ಲಿ ಪಾಕಿಸ್ತಾನ ಗೆಲುವಿಗೆ 343 ರನ್‌ ತೆಗೆಯುವ ಸವಾಲನ್ನು ಇಂಗ್ಲೆಂಡ್‌ ನೀಡುವ ಧೈರ್ಯ ಮಾಡಿದೆ.

Advertisement

ನಾಲ್ಕನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಕಳೆದುಕೊಂಡಿದ್ದು 80 ರನ್‌ ಗಳಿಸಿದೆ. ಅಂತಿಮ ದಿನವಾದ ಸೋಮವಾರ ಇನ್ನುಳಿದ 90 ಓವರ್‌ಗಳಲ್ಲಿ ಗೆಲ್ಲಲು ಪಾಕಿಸ್ತಾನ 263 ರನ್‌ ಗಳಿಸಬೇಕಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಇಮಾಮ್‌ ಉಲ್‌ ಹಕ್‌ 43 ರನ್ನುಗಳಿಂದ ಆಡುತ್ತಿದ್ದಾರೆ.

ದಿನದಾಟ ಅಂತ್ಯಗೊಳ್ಳಲು ಎರಡು ಓವರ್‌ ಇರುವಾಗ ಜೀವದಾನ ಪಡೆದ ಸೌದ್‌ ಶಕೀಲ್‌ 24 ರನ್ನುಗಳಿಂದ ಆಡುತ್ತಿದ್ದಾರೆ. ವಿಕೆಟ್‌ನ ಹತ್ತಿರ ಕೀಟನ್‌ ಜೆನ್ನಿಂಗ್ಸ್‌ ಎರಡು ಕೈಯಲ್ಲಿ ಹಿಡಿಯಬಹುದಾದ ಕ್ಯಾಚನ್ನು ಕೈಚೆಲ್ಲಿದ್ದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌ 657 ಮತ್ತು ದ್ವಿತೀಯ ಇನ್ನಿಂಗ್ಸ್‌ 264ಕ್ಕೆ 7 ಡಿಕ್ಲೇರ್‌
ಪಾಕಿಸ್ತಾನ 579 ಮತ್ತು 2 ವಿಕೆಟಿಗೆ 80.

Advertisement

Udayavani is now on Telegram. Click here to join our channel and stay updated with the latest news.

Next