Advertisement
2008ರ ಚೊಚ್ಚಲ ಕೂಟದಿಂದಲೂ ಐಪಿಎಲ್ ಭರ್ಜರಿ ಉದ್ಘಾಟನ ಸಮಾರಂಭಕ್ಕೆ ಸಾಕ್ಷಿಯಾಗುತ್ತ ಬಂದಿತ್ತು. ಸಲ್ಮಾನ್ ಖಾನ್, ಪಿಟ್‌ಬುಲ್, ಶಾರೂಖ್ ಖಾನ್, ಶ್ರೀಯಾ ಶರಣ್, ಕತ್ರಿನಾ ಕೈಫ್ ಮೊದಲಾದ ಸೆಲಿಬ್ರಿಟಿಗಳಿಂದ ರಂಗೇರಿಸಿಕೊಂಡಿತ್ತು. ಆದರೆ 2019ರಿಂದ 2022ರ ತನಕ ಐಪಿಎಲ್ ಉದ್ಘಾಟನ ಸಮಾರಂಭವನ್ನು ಕೈಬಿಡಲಾಯಿತು.2019ರಂದು ಉದ್ಘಾಟನೆಯನ್ನು ಕೈಬಿಡಲು ಮುಖ್ಯ ಕಾರಣ ಪುಲ್ವಾಮ ದಾಳಿ. ಅಂದಿನ ಉದ್ಘಾಟನ ಸಮಾರಂಭದ ದೊಡ್ಡ ಮೊತ್ತವನ್ನು ಮೃತಪಟ್ಟ ಸಿಆರ್‌ಪಿಎಫ್ ಯೋಧರ ಕುಟುಂಬದವರಿಗೆ ನೀಡಲಾಯಿತು. ಬಳಿಕ ಕೊರೊನಾ ದಾಳಿ ನಡೆಸಿತು. ಐಪಿಎಲ್ ವೇಳಾಪಟ್ಟಿ, ಸ್ಥಳ, ಮಾದರಿ… ಎಲ್ಲವೂ ಅಸ್ತವ್ಯಸ್ತಗೊಂಡಿತು.
ಇದೀಗ 4 ವರ್ಷಗಳ ಬಳಿಕ ಐಪಿಎಲ್ ಅದ್ಧೂರಿಯ ಹಾಗೂ ರಂಗುರಂಗಿನ ಉದ್ಘಾಟನ ಸಮಾರಂಭವನ್ನು ಕಾಣಲಿದೆ. ಶುಕ್ರವಾರದ ಆರಂಭಿಕ ಪಂದ್ಯಕ್ಕೂ ಒಂದು ಗಂಟೆ ಮೊದಲು ಅಹ್ಮದಾಬಾದ್‌ನಲ್ಲಿ ಈ ಸಮಾರಂಭ ಕಳೆಗಟ್ಟಲಿದೆ. ಐಪಿಎಲ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದಂತೆ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಮುಖ್ಯ ಆಕರ್ಷಣೆ ಆಗಲಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಹೆಸರು ಕೂಡ ಕೇಳಿಬರುತ್ತಿದೆ. ಆದರೆ ಬಿಸಿಸಿಐ ಮಾತ್ರ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಎಲ್ಲ ನಾಯಕರಿಲ್ಲ
ಕೂಟದಲ್ಲಿ 10 ತಂಡಗಳು ಭಾಗವಹಿಸುತ್ತಿವೆಯಾದರೂ ಉದ್ಘಾಟನ ಸಮಾ ರಂಭದಲ್ಲಿ ಕೆಲವು ನಾಯಕರಿಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.
ಈಗಿನ ಸ್ಥಿತಿಯಂತೆ ಪಂಜಾಬ್ ಕಿಂಗ್ಸ್, ಕೆಕೆಆರ್, ಲಕ್ನೋ ಮತ್ತು ಡೆಲ್ಲಿ ತಂಡಗಳ ನಾಯಕರು ಭಾಗವಹಿಸುವುದು ಅನುಮಾನ. ಇವರೆಲ್ಲ ಮರುದಿನ ಮೊಹಾಲಿ ಮತ್ತು ಲಕ್ನೋದಲ್ಲಿ ನಡೆಯುವ ಪಂದ್ಯದಲ್ಲಿ ಪಾಲ್ಗೊಳ್ಳಬೇಕಿದೆ.