Advertisement

‘ಹೊಂದಿಸಿ ಬರೆಯಿರಿ’ಚಿತ್ರದ ಮೊದಲ ಹಾಡು ಬಿಡುಗಡೆ

03:54 PM Aug 08, 2022 | Team Udayavani |

ಇತ್ತೀಚೆಗಷ್ಟೇ “ಸೈಕಲ್‌ ಜಾಥಾ’ ಮೂಲಕ ಗಮನ ಸೆಳೆದಿದ್ದ ಹೊಂದಿಸಿ ಬರೆಯಿರಿ ಚಿತ್ರತಂಡ ಈಗ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಬದುಕಿ ಸುಮ್ಮನೆ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದ್ದು, ರಾಮೇನಹಳ್ಳಿ ಜಗನ್ನಾಥ್‌ ಅವರು ಪದಪುಂಜಗಳನ್ನು ಪೊಣಿಸಿ ರಚಿಸಿರುವ ಹಾಡಿಗೆ ಜೋ ಕೋಸ್ಟ ಸಂಗೀತ ನೀಡುವುದರ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ.

Advertisement

ಗುಳ್ಟು ಖ್ಯಾತಿಯ ನವೀನ್‌ ಹಾಗೂ ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್‌ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್‌ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪರಿಸ್ಥಿತಿಗಳಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣದ ಜೊತೆಗೆ ಯುವಕ -ಯುವತಿಯರ ಒಂದೊಂದು ಕಥೆ, ಪ್ರೀತಿ ಈ ಚಿತ್ರದಲ್ಲಿ ತುಂಬಿದೆ.

ಇದನ್ನೂ ಓದಿ:ಬಿಜೆಪಿಗನ ಮನೆ ಬುಲ್ಡೋಜ್ ಕೇವಲ ಪ್ರದರ್ಶನ: ಪ್ರಿಯಾಂಕಾ ಗಾಂಧಿ

ಚಿತ್ರದಲ್ಲಿ ಪ್ರವೀಣ್‌ ತೇಜ್‌, ನವೀನ್‌ ಶಂಕರ್‌, ಶ್ರೀ ಮಹಾದೇವ್‌, ನಾಯಕಿಯರಾದ ಐಶಾನಿ ಶೆಟ್ಟಿ, ಸಂಯುಕ್ತಾ ಹೊರನಾಡು, ಭಾವನಾ ರಾವ್‌, ಅರ್ಚನಾ ಜೋಯಿಸ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ರಾಮೇನಹಳ್ಳಿ ಜಗನ್ನಾಥ್‌ ನಿರ್ದೇಶಿಸಿದ್ದು, ಸಂಡೇ ಸಿನಿಮಾಸ್‌ ನಿರ್ಮಾಣ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next