ಟೆಹರಾನ್: ರಷ್ಯಾದಿಂದ ಭಾರತಕ್ಕೆ ಸರಕುಗಳನ್ನು ಸಾಗಣೆ ಮಾಡುವ ರೈಲು ಇರಾನ್ ಪ್ರವೇಶ ಮಾಡಿದೆ.
ಆ ದೇಶದ ಸರಾಖ್ ಎಂಬ ಗಡಿ ಪ್ರದೇಶದ ಮೂಲಕ ಪ್ರಯಾಣಿಸುತ್ತಿದೆ. ಅದು ಶೀಘ್ರವೇ ಮುಂಬೈನ ನಹ್ವಾ ಶ್ವೇವಾ ಬಂದರು ಅನ್ನು ಶೀಘ್ರದಲ್ಲಿಯೇ ತಲುಪಲಿದೆ.
ಜು.6ರಂದು ರಷ್ಯಾದ ಚೆಖೋವ್ ನಿಲ್ದಾಣದಿಂದ ಹೊರಟಿದ್ದ ರೈಲು ಕಜಕಿಸ್ತಾನ ಮತ್ತು ತುರ್ಕ್‌ಮೇನಿಸ್ತಾನದ ಮೂಲಕ 3,800 ಕಿಮೀ ದೂರ ಕ್ರಮಿಸಿ ಇರಾನ್‌ಗೆ ಆಗಮಿಸಿದೆ.
ರೈಲು ಒಟ್ಟು 39 ಕಂಟೈನರ್‌ಗಳನ್ನು ಹೊಂದಿದೆ. ಈ ರೈಲು ದಕ್ಷಿಣ ಇರಾನ್‌ನ ಬಂದರ್ ಅಬ್ಟಾಸ್‌ಗೆ ತೆರಳಿ ಅಲ್ಲಿಂದ ಮುಂಬೈಗೆ ಆಗಮಿಸಲಿದೆ. ಇರಾನ್‌ಗೆ ಆಗಮಿಸಿದ ರೈಲನ್ನು ಆ ದೇಶದ ಉಪಾಧ್ಯಕ್ಷ ಮುಹಮ್ಮದ್ ಮೊಕ್‌ಬರ್ ಸೇರಿದಂತೆ ಹಲವು ಗಣ್ಯರು ಸ್ವಾಗತಿಸಿದ್ದಾರೆ.
ಈ ರೈಲಿನಿಂದಾಗಿ ಭಾರತಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ. ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ರಷ್ಯಾದಿಂದ ಕಚ್ಚಾ ತೈಲದ ಖರೀದಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದೆ.
ಈ ಮಾರ್ಗದ ಮೂಲಕ ಇನ್ನಷ್ಟು ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಗೆ ಅನುಕೂಲವಾಗಲಿದೆ.