Advertisement
38 ಇಲಾಖೆಗಳಿಗಾಗಿ ಮಂಜೂರು ಮಾಡಿರುವ 19,957.66 ಲಕ್ಷ ರೂ.ನಲ್ಲಿ 18,683.96 ಲಕ್ಷ ರೂ. ವೆಚ್ಚಮಾಡಲಾಗಿದ್ದು, ಈ ಸಾಧನೆ ನಡೆಸಿದೆ. ಯೋಜನೆ ಮೊಬಲಗಿನಲ್ಲಿ 15 ಇಲಾಖೆಗಳು ಶೇ.100 ವೆಚ್ಚಮಾಡಿವೆ. 18 ಇಲಾಖೆಗಳು ಶೇ. 18ಕ್ಕಿಂತ ಅಧಿಕ ವೆಚ್ಚಮಾಡಿವೆ. 5 ಇಲಾಖೆಗಳು ಶೇ. 50ಕ್ಕಿಂತ ಅಧಿಕ ವೆಚ್ಚ ಮಾಡಿವೆ.
Related Articles
Advertisement
ಇತರ ಕೇಂದ್ರ ಸರಕಾರಿ ಯೋಜನೆಗಳಲ್ಲಿ ಜಿಲ್ಲೆಯ 13 ಇಲಾಖೆಗಳಿಗೆ ಮಂಜೂರು ಮಾಡಲಾದ 16,998.68 ಲಕ್ಷ ರೂ.ನಲ್ಲಿ 16,968.96 ಲಕ್ಷ ರೂ. ವೆಚ್ಚ ಮಾಡಿ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಯೋಜನೆ ಮೊಬಲಗಿನಲ್ಲಿ ಶೇ.100 ವೆಚ್ಚಮಾಡಿರುವ 9 ಇಲಾಖೆಗಳು, ಶೇ.60ಕ್ಕಿಂತ ಅಧಿಕ ವೆಚ್ಚಮಾಡಿರುವ ಮೂರು ಇಲಾಖೆಗಳು, ಶೇ. 60ಕ್ಕಿಂತ ಕಡಿಮೆ ವೆಚ್ಚ ಮಾಡಿರುವ ಒಂದು ಇಲಾಖೆ ಜಿಲ್ಲೆಯಲ್ಲಿದೆ ಎಂದು ಜಿಲ್ಲಾಕಾರಿ ತಿಳಿಸಿದರು.