Advertisement
ಮಂಗಳೂರು ತಾಲೂಕಿನ ತೆಂಕ ಎಡಪದವು ಬ್ರಿಂಡೇಲ್‌ನಲ್ಲಿ 2.50 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಎಂಆರ್‌ಎಫ್ ಘಟಕದ ಶೇ.90ರಷ್ಟು ಕಾಮಗಾರಿ ಪೂರ್ಣ ಗೊಂಡಿದೆ. ಯಂತ್ರೋಪಕರಣ ಅಳವಡಿಕೆಗೆ ಸಂಬಂಧಿಸಿದ ಹಾಗೂ ಸಂಪರ್ಕ ರಸ್ತೆ ಕಾಮಗಾರಿ ಪ್ರಕ್ರಿಯೆ ನಡೆಯುತ್ತಿದ್ದು, ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
Related Articles
Advertisement
ಇದರಲ್ಲಿ ಉಡುಪಿ ಜಿಲ್ಲೆಯಘಟಕ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿದೆ. ದಕ್ಷಿಣ ಕನಡ ಜಿಲ್ಲೆಯ ಘಟಕ ಸ್ಥಳಾವಕಾಶದ ಸಮಸ್ಯೆಯಿಂದ ಅನುಷ್ಠಾನ ವಿಳಂಬವಾಗಿತ್ತು.
ಜಿಲ್ಲೆಯಲ್ಲಿ ಇತರ 3 ಮಿನಿ ಘಟಕಗಳು
ತೆಂಕ ಎಡಪದವು ಘಟಕವಲ್ಲದೆ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ, ಪುತ್ತೂರು ತಾಲೂಕಿನ ಕೆದಂಬಾಡಿ ಹಾಗೂ ಬಂಟ್ವಾಳ ತಾಲೂ ಕಿನ ನರಿಕೊಂಬುನಲ್ಲಿ ಹೊಸದಾಗಿ ಎಂಆರ್‌ಎಫ್ ಮಿನಿ ಘಟಕಗಳು ಅನುಷ್ಠಾನಗೊಳ್ಳುತ್ತಿದೆ.
ಈ ಘಟಕಗಳು ದಿನವೊಂದಕ್ಕೆ ತಲಾ 5 ಟನ್ ಒಣತ್ಯಾಜ್ಯ ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ. ಪ್ರತಿಯೊಂದು ಘಟಕದ ಅಂದಾಜು ವೆಚ್ಚ 1.95 ಕೋ. ರೂ. ಆಗಿದ್ದು, ಇದರಲ್ಲಿ ತಲಾ 30 ಲಕ್ಷ ರೂ.ಅನುದಾನವನ್ನು ಜಿಲ್ಲಾ ಪಂಚಾಯತ್ ನಿಂದ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯತ್ ಗಳು ನೀಡಬೇಕಾಗುತ್ತದೆ. ಇದನ್ನು 15ನೇ ಹಣಕಾಸಿನ ಅನುದಾನದ ಕ್ರಿಯಾ ಯೋಜನೆ ತಯಾರಿಯಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣಕ್ಕೆ ಗ್ರಾ.ಪಂ.ವಂತಿಗೆ ಎಂದು ಕಾಯ್ದಿರಿಸಿ ಹೊಂದಿಸಿಕೊಳ್ಳಲಾಗುತ್ತದೆ.
ಶೇ.90 ಕಾರ್ಯ ಪೂರ್ಣ :ಮಂಗಳೂರು ತಾಲೂಕಿನ ತೆಂಕಪದವು ಎಂಆರ್‌ಎಫ್ ಘಟಕದ ಸಿವಿಲ್ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ಯಂತ್ರೋಪಕರಣಗಳ ಅಳವಡಿಕೆಗೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಎಲ್ಲ ಕೆಲಸಗಳನ್ನು ಪೂರ್ತಿಗೊಳಿಸಿ ಅಕ್ಟೋಬರ್‌ನಲ್ಲಿ ಘಟಕವನ್ನು ಕಾರ್ಯಾರಂಭಿಸಲು ನಿರ್ಧರಿಸಲಾಗಿದೆ. ಇದರ ಜತೆಗೆ ವ್ಯವಸ್ಥಿತ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇದರ ಕಾಮಗಾರಿಯೂ ಪ್ರಗತಿಯಲ್ಲಿದೆ. – ಡಾ| ಕುಮಾರ್, ದ.ಕ.ಜಿ.ಪಂ. ಸಿಇಒ