Advertisement

ಇಂದು ಆಮ್‌ ಆದ್ಮಿ ಪಕ್ಷದ ಮೊದಲ ಪಟ್ಟಿ ಪ್ರಕಟ

10:10 PM Mar 19, 2023 | Team Udayavani |

ಬೆಂಗಳೂರು: ಆಮ್‌ ಆದ್ಮಿ ಪಕ್ಷ (ಆಪ್‌)ವು ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಲಿದೆ.

Advertisement

ಭಾನುವಾರ ಬೆಂಗಳೂರಿನ ಪುಲಕೇಶಿ ನಗರದ ಆಪ್‌ ಅಭ್ಯರ್ಥಿ ಸುರೇಶ್‌ ರಾಥೋಡ್‌ ಅವರ ಪರವಾಗಿ ನಡೆಸಲಾದ ಬೃಹತ್‌ ಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಆಪ್‌ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಜೆಸಿಬಿ (ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಪಕ್ಷಗಳ ದುರಾಡಳಿತದಿಂದ ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಆಪ್‌ ತನ್ನ ಕ್ರಾಂತಿಕಾರಿ ಜನಪರ ನಿರ್ಧಾರಗಳಿಂದ ಜನಸಾಮಾನ್ಯರ ಗಮನ ಸೆಳೆದಿದ್ದು, ಜನರು ಆಪ್‌ಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪುಲಕೇಶಿ ನಗರ ಕ್ಷೇತ್ರದ ಅವ್ಯವಸ್ಥೆಗೆ ಪರಿಹಾರವಾಗಿ ಅಭ್ಯರ್ಥಿ ಸುರೇಶ್‌ ರಾಥೋಡ್‌ ಜನರಿಂದ ಆಯ್ಕೆಯಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿದ್ದು ಮಾರ್ಚ್‌ 20 ರಂದು ಪಟ್ಟಿ ಪ್ರಕಟಿಸಲಿದ್ದೇವೆ. ಎರಡನೇ ಹಂತದ ಪಟ್ಟಿಯನ್ನ ಮಾರ್ಚ್‌ 27ರಂದು ಬಿಡುಗಡೆಗೊಳಿಸಲು ಚಿಂತಿಸಿದ್ದೇವೆ ಎಂದು ತಿಳಿಸಿದರು.

120-125 ಅಭ್ಯರ್ಥಿಗಳ ಹೆಸರು ಪ್ರಕಟ?
ಆಮ್‌ ಆದ್ಮಿ ಪಕ್ಷವು ತನ್ನ ಮೊದಲ ಪಟ್ಟಿಯಲ್ಲಿ 120 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಾಧ್ಯತೆಯಿದೆ. ಚಿಕ್ಕಪೇಟೆಯಿಂದ ಬ್ರಿಜೇಶ್‌ ಕಾಳಪ್ಪ, ಸಿ. ವಿ. ರಾಮನ್‌ ನಗರದಿಂದ ಮೋಹನ್‌ ದಾಸರಿ, ಶಾಂತಿನಗರದದಿಂದ ಮಥಾಯ್‌, ರೋಣದಿಂದ ಆನೇಕಲ್‌ ದೊಡ್ಡಯ್ಯ, ಹಾಸನದಿಂದ ಅಗಿಲೆ ಯೋಗೀಶ್‌ ಮುಂತಾದವರ ಹೆಸರು ಮೊದಲ ಪಟ್ಟಿಯಲ್ಲಿರುವ ಸಂಭವ ಹೆಚ್ಚಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next