Advertisement

ಕೃಷ್ಣನ ‘ದಿಲ್ ಪಸಂದ್’; ಜೂ.12ಕ್ಕೆ ಚಿತ್ರದ ಫ‌ಸ್ಟ್‌ ಗ್ಲಿಂಪ್ಸ್

11:43 AM Jun 11, 2022 | Team Udayavani |

ನಟ ಡಾರ್ಲಿಂಗ್‌ ಕೃಷ್ಣ ಅಭಿನಯದ “ದಿಲ್‌ ಪಸಂದ್‌’ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ನಿಧಾನವಾಗಿ “ದಿಲ್‌ ಪಸಂದ್‌’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಚಿತ್ರದ ನಾಯಕ ನಟ ಡಾರ್ಲಿಂಗ್‌ ಕೃಷ್ಣ ಅವರ ಬರ್ತ್‌ಡೇ ಸಲುವಾಗಿ ಸಿನಿಮಾದ ಗ್ಲಿಂಪ್ಸ್‌ ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಂಡಿದೆ.

Advertisement

ಜೂನ್‌ 12ರಂದು ನಾಯಕ ನಟ ಕೃಷ್ಣ ಅವರ ಹುಟ್ಟುಹಬ್ಬವಿದ್ದು, ಅಂದು ಚಿತ್ರತಂಡದ ಕಡೆಯಿಂದ ಕೃಷ್ಣ ಅವರಿಗೆ ವಿಶೇಷ ಉಡುಗೊರೆಯಾಗಿ, ಬೆಳಿಗ್ಗೆ 11.14ಕ್ಕೆ “ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನಲ್‌ನಲ್ಲಿ “ದಿಲ್‌ ಪಸಂದ್‌’ ಸಿನಿಮಾದ ಫ‌ಸ್ಟ್‌ ಗ್ಲಿಂಪ್ಸ್‌ ಬಿಡುಗಡೆಯಾಗಲಿದೆ.

ಇನ್ನು ಈಗಾಗಲೇ “ದಿಲ್‌ ಪಸಂದ್‌’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಬಾಕಿಯಿದೆ. “ರಶ್ಮಿ ಫಿಲಂಸ್‌’ ಬ್ಯಾನರ್‌ನಲ್ಲಿ ಸುಮಂತ್‌ ಕ್ರಾಂತಿ ನಿರ್ಮಿಸುತ್ತಿರುವ “ದಿಲ್‌ ಪಸಂದ್‌’ ಚಿತ್ರಕ್ಕೆ ಶಿವ ತೇಜಸ್‌ ನಿರ್ದೇಶನವಿದೆ.

ಇದನ್ನೂ ಓದಿ:ಮಲಯಾಳಂನತ್ತ ಹೊಂಬಾಳೆ: ಪೃಥ್ವಿರಾಜ್‌ ಜೊತೆ ಪ್ಯಾನ್‌ ಇಂಡಿಯಾ ‘ಟೈಸನ್’

ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ಶೇಖರ್‌ ಚಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್‌ ಸಂಕಲನವಿದೆ. ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಅವರಿಗೆ ನಾಯಕಿಯಾಗಿ ನಿಶ್ವಿ‌ಕಾ ನಾಯ್ಡು ನಟಿಸುತ್ತಿದ್ದಾರೆ.

Advertisement

ಉಳಿದಂತೆ ಮೇಘಾ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಹರೀಶ್‌ ದೇವಿತಂದ್ರೆ, ಚಿತ್ಕಲಾ ಬಿರಾದಾರ್‌, ಅರುಣಾ ಬಾಲರಾಜ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next