Advertisement
ಇಂಗ್ಲಿಷ್ ದಡ್ಡನಿಗೆ ಇಂಗ್ಲೆಂಡ್ ಕರೆದಾಗ…- ಡಾ. ರಾಮಪ್ಪ ಶಾನಭಾಗ್, ಲಿವರ್‌ಪೂಲ್, ಇಂಗ್ಲೆಂಡ್
ರಾಮಪ್ಪ ಎಂಬ ಹೆಸರಿನವನಾದ ನಾನು… ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆ ಮುಗಿಸಿ, ಹೈಸ್ಕೂಲ್‌ಗೆ ಇಂಗ್ಲಿಷ್ ಮೀಡಿಯಂ ಓದಲು ಹೋಗಿದ್ದೆ. ಅವತ್ತು ಮೂರನೇ ದಿನವೋ, ನಾಲ್ಕನೇ ದಿನವೋ. ಅದಾಗಲೇ ನನ್ನ ಹೆಸರು ಬಹಳ ಓಲು, ಪಂಪನ ಕಾಲದ್ದೆಂದು, “ಯಾವ ಪುಣ್ಯಾತ್ಮ ಗುರು, ನಿಂಗೆ ಹೆಸರಿಟ್ಟಿದ್ದು?’ ಎಂದು ಆಗಷ್ಟೇ ಪರಿಚಿತರಾದ ಮಾಡರ್ನ್ ಹೆಸರಿನ ಗೆಳೆಯರಿಂದ, ಕಾಲೆಳೆಸಿಕೊಂಡಿದ್ದೆ. “ಹೆಸರಿನಲ್ಲೇನಿದೆ, ಎಲ್ಲ ಇರೋದು ಉಸಿರಿನಲ್ಲಿರೋದು ಕಣೊ’ ಅಂದರೆ, “ನೋಡ್ರೋ ಶುರುಮಾಡª, ಚಂಪೂ ಕಾವ್ಯ… ಎಸ್ಕೇಪ್ ಆಗ್ರೋ ಇಲ್ಲಿಂದ’ ಅನ್ನೋರು.
Related Articles
Advertisement
ಇವತ್ತು ವೈದ್ಯನಾಗಿ ಇಂಗ್ಲೆಂಡಿನಲ್ಲಿ ನಿಂತು, ಆ ದಿನಗಳನ್ನು ನೆನೆದಾಗ, ಅವತ್ತಿನ ಅವಮಾನಗಳೆಲ್ಲ, ಇವತ್ತಿನ ಸನ್ಮಾನದಂತೆ ಕಾಣಿಸುತ್ತಿವೆ.
ಕನಸಲ್ಲೂ “ಬಾಟನಿ’ಯ ನರ್ತನ– ಪ್ರಶಾಂತ್ ಜೋಶಿ, ಮಿನ್ನೆಪೊಲೀಸ್, ಅಮೆರಿಕ
ಹೈಸ್ಕೂಲಿನಲ್ಲಿ ನನಗೆ ವಿಜ್ಞಾನ, ಗಣಿತ ಬಹಳ ಅಚ್ಚುಮೆಚ್ಚು. ಪತ್ರ ಹರಿತ್ತು, ದ್ಯುತಿ ಸಂಶ್ಲೇಷಣೆ, ಪ್ರಣಾಳ, ಬೀಜಗಣಿತ, ವಾಹಕಗಳು, ಸಂಭವನೀಯತೆ, ತ್ರಿಜ್ಯ- ಎಂಥ ಒಳ್ಳೊಳ್ಳೆ ರೊಮ್ಯಾಂಟಿಕ್ ಪದಗಳು ಅವು! ಎಲ್ಲ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ ನಾನು, ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಸೇರಿದಂತೆ, ಎಲ್ಲ ಸಬೆjಕುrಗಳಲ್ಲಿ ಒಳ್ಳೆಯ ಅಂಕ ಗಳಿಸಿ ಶಾಲೆಗಷ್ಟೇ ಅಲ್ಲದೆ, ಇಡೀ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿ ಬೀಗುತ್ತಿ¨ªೆ. ನನ್ನ ಈ ಖುಷಿಯನ್ನು ಒಂದೇ ಏಟಿಗೆ ಧುತ್ ಎಂದು ಹೊಡೆದು ಹಾಕಿದ್ದು ಪಿಯು ಕಾಲೇಜಿನ ಇಂಗ್ಲಿಷ್ ಮಾಧ್ಯಮದ ಶಿಕ್ಷಣ. ಗಣಿತದ ಮೇಲಿದ್ದಿದ್ದ ಲವ್ವು, ದ್ವೇಷವಾಗಿ ಬದಲಾಗಿತ್ತು. ವಿಜ್ಞಾನದಲ್ಲಿ ಫೋಕಸ್ ಇರದೇ- ಫಿಸಿಕ್ಸ್…, ಬಾಟನಿ, ಝುವಾಲಾಜಿ, ಫಿಸಿಕಲ್ ಕೆಮಿಸ್ಟ್ರಿ, ಆರ್ಗಾನಿಕ್ ಕೆಮಿಸ್ಟ್ರಿ – ಅಂತೆಲ್ಲ ಹರಿದು ಹಂಚಿಹೋಗಿತ್ತು. ಪ್ರೊಫೆಸರ್‌ಗಳು ಪಾಠ ಮಾಡಿದ್ದು ಯಾವುದೂ ತಲೆಗೆ ಹೋಗುತ್ತಿರಲಿಲ್ಲ. ಅವರೆಲ್ಲರೂ ಕಾಯಂ ವೈರಿಗಳಾಗಿದ್ದರು. ಆ ಬಾಟನಿ ಲೆಕ್ಚರರ್ ಅಂತೂ ರಾತ್ರಿ ಕನಸಿನಲ್ಲಿ ಬಂದು “ಕಿಂಗ್ಡಮ್ ಮೊನೆರ, ಡೈಕಾಟ ಸ್ಟೆಮ…, ಸ್ಟಿಗ್ಮಾ, ಜೆಲಮ್’ ಅಂತೆಲ್ಲ, ಅತ್ಯಂತ ಜಟಿಲ ಪದಗಳಲ್ಲಿ ಪಾಠ ಹೇಳುತ್ತಿದ್ದ. ಅಕ್ಷರಗಳು ಕಣ್ಣ ಮುಂದೆ ಡ್ಯಾನ್ಸ್ ಮಾಡುತ್ತಿರುವ “ತಾರೇ ಜಮೀನ್ ಪರ್’ ಚಿತ್ರದ ದರ್ಶಿಲ್‌ನಂತಾಗಿತ್ತು ನನ್ನ ಸ್ಥಿತಿ. ಪರೀಕ್ಷೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ಗೊತ್ತಿಲ್ಲದೆ, ಸ್ನೇಹಿತನನ್ನು ಕೇಳಲು ಹೋಗಿ ಸಿಕ್ಕಿಬಿದ್ದು ಒಳ್ಳೆಯ ಫಜೀತಿಯಾಗಿತ್ತು. ಪಿಯುಸಿ ಕಷ್ಟವಾಗಿದ್ದರೂ, ಜೀವನಕ್ಕೆ ಇಂಗ್ಲಿಷ್ ಅನಿವಾರ್ಯ ಎಂಬ ಗುಟ್ಟನ್ನು ಕಂಡುಕೊಂಡೆ. ಬೆಂಗಳೂರಿನ ಪರಿಸರ, ಹಾಸ್ಟೆಲ್ ಸಹವಾಸ, ಗೆಳೆಯರೊಡನೆ ಒಡನಾಟ ನಿಧಾನವಾಗಿ ಇಂಗ್ಲಿಷ್ ತಕ್ಕ ಮಟ್ಟಿಗೆ ಹಿಡಿತಕ್ಕೆ ಬಂತು. ಕೀಳರಿಮೆ ಹೊರಟು ಹೋಗಿ, ಪಿಯು ಕಾಲೇಜಿನಲ್ಲಿ ಕಳೆದುಕೊಂಡ ಆತ್ಮವಿಶ್ವಾಸ, ಎಂಜಿನಿಯರಿಂಗ್‌ನಲ್ಲಿ ಮರಳಿ ಪಡೆದುಕೊಂಡೆ. ಈ ಹೊತ್ತಿನಲ್ಲಿ, ಸಂಪೂರ್ಣವಾಗಿ ಇಂಗ್ಲಿಷಿನಲ್ಲೇ ವ್ಯವಹಾರವಿರುವ ಐ.ಟಿ. ಕ್ಷೇತ್ರದಲ್ಲಿ ಉದ್ಯೋಗಿಯಾಗಿ, ಸದ್ಯ ಅಮೆರಿಕದಲ್ಲಿ ನೆಲೆಸಿದ್ದೇನೆ. ಒರ್ಜಿನಲ್ ಹೋಗಿ, “ವರ್ಜಿನಲ್’ ಆದ ಕತೆ
– ಮಹೇಶ್ವರಪ್ಪ ಎನ್., ಮ್ಯಾಡ್ರಿಡ್, ಸ್ಪೇನ್
ಬಾಲ್ಯದಲ್ಲಿ ಎಬಿಸಿಡಿ ಗ್ಯಾಂಗ್‌ನ ದಾಳಿಗೆ ಒಳಗಾದವರಲ್ಲಿ ನಾನೂ ಒಬ್ಬ. ಇವುಗಳ ಕಣ್ತಪ್ಪಿಸಿಕೊಂಡು, ರಜೆಯಲ್ಲಿ ತಾತನ ಮನೆಗೆ ಹೋದರೂ, ಊರಿನವರ ಮುಂದೆ ಅಲ್ಲೂ ತಾತನ ಬಿಲ್ಡಪ್ಪು… “ನೋಡು, ನನ್ನ ಮೊಮ್ಮಗ ಹೇಗೆ ಓದ್ತಾನೆ ಅಂತ… ಎಲ್ಲಿ ಜೋರಾಗಿ ಓದ್ಲಾ ಈ ಪೊಯೆಮ್ಮು’ ಅಂತೆಳಿ, ನಾನು ನಿಂತ ನೆಲವನ್ನೇ ಕುಸಿಯುವ ಹಾಗೆ ಮಾಡಿರುತ್ತಿದ್ದ. ತಾತನ ಕಾಟ ತಾಳಲಾರದೇ, ಓದಲು ಸುಲಭವಾದ ಕನ್ನಡದ ಪುಸ್ತಕವನ್ನು ಕೈಗೆತ್ತಿಕೊಂಡರೆ, ಅದಕ್ಕೂ ಅಪಸ್ವರ. ಇಂಗ್ಲಿಷ್ ಪೊಯೆಮ್ಮೇ ಓದೆಂದು, ದುಂಬಾಲು ಬೀಳುತ್ತಿದ್ದ. ತಪ್ಪೋ- ಒಪ್ಪೋ, ಹೇಗೋ ದಬದಬ ಅಂತ ಪೊಯೆಮ್ಮು ಓದೋಣ ಅಂದ್ರೆ, ಇಂಗ್ಲಿಷನ್ನು ಅರೆದು ಕುಡಿದು, ರಾಣಿ ಎಲಿಜೆಬೆತ್ ರೀತಿ ನಿಂತಿರುತ್ತಿದ್ದ, ನನ್ನ ಇಬ್ಬರು ಅಕ್ಕಂದಿರಿಗೆ ಚಳ್ಳೇಫೂಟು ತಿನ್ನಿಸಲು ಸಾಧ್ಯವೇ ಆಗುತ್ತಿರಲಿಲ್ಲ. ನನ್ನ ಓದಿನಲ್ಲಿ ತಪ್ಪುಗಳನ್ನು ಹೆಕ್ಕಿ ಹೆಕ್ಕಿ, ಊರಿನವರ ಮುಂದೆ ನನ್ನ ಮರ್ಯಾದೆಯನ್ನು ಹರಾಜಿಗಿಡುತ್ತಿದ್ದರು. ತಮ್ಮ ಎನ್ನುವ ಕರುಣೆ ಸ್ವಲ್ಪವೂ ಬೇಡವೇ ಅಂತನ್ನಿಸಿ, ಅವರನ್ನೇ ನೋಡುತ್ತಿದ್ದೆ. ನಂತರ ಹೈಸ್ಕೂಲ್‌ಗೆ ಬಂದೆ. ಅಲ್ಲಂತೂ ಇಂಗ್ಲಿಷ್ ಮಾತಾಡುವವರದ್ದೇ ಒಂದು ಪ್ರತ್ಯೇಕ ಗುಂಪು. ಇಂಗ್ಲಿಷ್ ಮಾತಾಡುವ, ಭಾಷಣ ಮಾಡುವ ಹುಡುಗರಿಗೆ ಸಿಗುವ ಗೌರವದ ಜೊತೆಗೆ ಅವರ ಹಿಂದೆ ಮುಗಿಬೀಳುವ ಹುಡುಗಿಯರನ್ನು ನೋಡಿ, ಎಷ್ಟೋ ಸಲ ಹೊಟ್ಟೆ ಉರಿದುಕೊಂಡಿದ್ದೂ ಉಂಟು. ಅವರಂತಾಗಲು ಪ್ರಯತ್ನಿಸಿದ್ದೇನೋ ನಿಜ. ಆದರೆ, ಹಾಗೆ ಪ್ರಯತ್ನಿಸಿದಷ್ಟು ನಗೆಪಾಟಲಿಗೀಡಾಗಿದ್ದೂ ಹೆಚ್ಚು. ಒಂದು ಸಲ ನಮ್ಮ ಇಂಗ್ಲಿಷ್ ಮೇಷ್ಟ್ರು, “ಪಾಠವನ್ನು ಯಾರು ಜೋರಾಗಿ ಓದಿರ?’ ಅಂತ ಕೇಳಿದರು. ಅವತ್ತು ಅದೆಲ್ಲಿಂದ ಧೈರ್ಯ ಬಂದಿತ್ತೋ ಗೊತ್ತಿಲ್ಲ. ಕೈ ಎತ್ತಿ, ಓದಲಾರಂಭಿಸಿದ್ದೆ. ಆರಂಭದ ಪ್ಯಾರಾ ಓದಿದ್ದು ಸರಿಯಾಗಿಯೇ ಇತ್ತು. ಆದರೆ, ಎರಡನೇ ಪ್ಯಾರಾದಲ್ಲಿ ನನ್ನ ಕಾನ್ಫಿಡೆನ್ಸ್ ತುಂಬಾ ಹೆಚ್ಚಿ, ಒರಿಜಿನಲ್ (original) ಅಂತ ಹೇಳುವ ಬದಲಿಗೆ ನಾಲಿಗೆ ಹೊರಳದೇ, ವರ್ಜಿನಲ್ (virgninal) ಅಂತ ಉಚ್ಚರಿಸಿ, ಶಾಲೆಯಲೆಲ್ಲಾ ಸಿಕ್ಕಾಪಟ್ಟೆ ಹಾಸ್ಯಕ್ಕೊಳಗಾಗಿಬಿಟ್ಟೆ. ಅವತ್ತು ಇಡೀ ನನ್ನನ್ನು ನೋಡಿ, ಹುಡುಗಿಯರೆಲ್ಲ ಮುಸಿ ಮುಸಿ ನಗೋರು. ಈ ಮುಖಭಂಗದಿಂದ ಒಂದು ವಾರ ಶಾಲೆಯ ಕಡೆಗೆ ತಲೆಯೇ ಹಾಕಲಿಲ್ಲ. ಅಂದೇ ಕೊನೆ ಕ್ಲಾಸ್‌ನಲ್ಲಿ ಓದುವ ದುಸ್ಸಾಹಸಕ್ಕೂ ಇಳಿಯಲಿಲ್ಲ. ಆದರೆ, ಇಂಗ್ಲಿಷ್ ಮಾತಾಡಲು ನನಗೆ ಸುಲಭವಾಗಿದ್ದು ಎಂಜಿನಿಯರಿಂಗ್ ಕಾಲೇಜು ಸೇರಿದ ಮೇಲೆ. ಅಲ್ಲಿಯ ಗೆಳೆಯರ ಜೊತೆ ಸ್ವಲ್ಪ- ಸ್ವಲ್ಪವಾಗಿ ತಪ್ಪೋ-ನೆಪ್ಪೋ, ಬಾಯಿಗೆ ಬಂದಿದ್ದನ್ನು ಮಾತಾಡುತ್ತಾ, ಇಂಗ್ಲಿಷ್ ಸಿನಿಮಾ- ಹಾಡುಗಳು, ದಿನಪತ್ರಿಕೆಗಳನ್ನು ಓದುತ್ತಾ, ಜ್ಞಾನಭಂಡಾರ ಹೆಚ್ಚಿಸಿಕೊಂಡೆ. ಇಂದು ಇಂಗ್ಲಿಷ್ ಜನರೊಂದಿಗೆ ಇಂಗ್ಲಿಷ್ ದೇಶದಲ್ಲೇ ಕೆಲಸ ಮಾಡುತ್ತಿದ್ದೇನೆ.