Advertisement

ಮೊದಲು ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿ… : ಶಾ ಗೆ ಮಮತಾ ಚಾಲೆಂಜ್

06:34 PM Feb 18, 2021 | Team Udayavani |

ಪಶ್ಚಿಮ ಬಂಗಾಳ : ತೃಣ ಮೂಲ ಕಾಂಗ್ರೆಸ್ ನ ನಾಯಕಿ ಹಾಗೂ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಚುನಾವಣಾ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದಾರೆ.

Advertisement

ಪೈಲಾನ್ ನಲ್ಲಿ ಚುನಾವಣಾ ಮತ ಪ್ರಚಾರವನ್ನುದ್ದೇಶಿ ಮಾತಾಡಿದ ಬ್ಯಾನರ್ಜಿ, ಶಾ ವಿರುದ್ದ ತೀವ್ರ ವಾಗ್ದಾಳಿ ಮಾಡಿದ್ದಾರೆ. ಮೊದಲು ನನ್ನ ಅಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಎದುರಿಸಿ, ಆಮೇಲೆ ನನ್ನನ್ನು ಎದುರಿಸುವ ಯೋಚನೆ ಮಾಡಿ ಎಂದು ಖಡಕ್ ಸವಾಲು ಹಾಕಿದ್ದಾರೆ.

ಓದಿ : ಬೆಳ್ಳಿ ಇಟ್ಟಿಗೆಗಳನ್ನು ಕಳುಹಿಸಬೇಡಿ : ಭಕ್ತರಿಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಮನವಿ

ಅಭಿಷೇಕ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಂಸದಾರಗಲು ಸುಲಭವಾದ ಹಾದಿಯನ್ನು ಹಿಡಿಯಬಹುದಿತ್ತು. ಆದರೇ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನಾದೇಶವನ್ನು ಪಡೆದಿದ್ದಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

“ನಾನು ಈ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲು ಹಾಕುತ್ತೇನೆ. ಮೊದಲು ಅಭಿಷೇಕ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ, ಆಮೇಲೆ ನನ್ನೊಂದಿಗೆ ಸ್ಪರ್ಧಿಸಲು ಯೋಚನೆ ಮಾಡಿ” ಎಂದು ನೆರೆದ ಪಕ್ಷದ ಬೆಂಬಲಿಗರ ಚೀರಾಟದ ಸದ್ದುಗಳ ನಡುವೆ ಮಮತಾ ನುಡಿದರು.

Advertisement

ಈ ಬಾರಿಯ ಚುನಾವಣೆಯಲ್ಲಿ ಟಿ ಎಮ್ ಸಿ ಬಹುಮತದಲ್ಲಿ ಗೆಲ್ಲುತ್ತದೆ ಎನ್ನುವುದಕ್ಕೆ ಸಂಶಯವಿಲ್ಲ. ಈ ಹಿಂದಿನ ಚುನಾವಣೆಯಲ್ಲಿನ ತನ್ನದೇ ದಾಖಲೆಗಳನ್ನು ಮುರಿದು ಮತ್ತೆ ಟಿ ಎಮ್ ಸಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತ ಪಡಿಸಿದರು.

ಈ ಹಿಂದೆ ಅಮಿತ್  ಶಾ ಸೇರಿ ಹಲವು ಬಿಜೆಪಿ ನಾಯಕರು ಮಮತಾ  ಬ್ಯಾನರ್ಜಿಯವರದ್ದು ವಂಶಪಾರಂಪರ್ಯ ಕಾರಕೀಯ ಎಂದು ಆರೋಪಿಸಿದ್ದರು. ಮಮತಾ ಅವರ ‘Bhaipo’ ಅಥವಾ  ಸೋದರಳಿಯ ಇಲ್ಲಿ ಆಧ್ಯತೆಯನ್ನು ಪಡೆದಿದ್ದಾರೆ. ನಿಮ್ಮ ಮತ ಟಿ ಎಮ್ ಸಿಗೆ ಚಲಾವಣೆಯಾದರೆ, ಅಂತಿಮವಾಗಿ ರಾಜ್ಯದ ಮುಖ್ಯಮಂತ್ರಿಯ ಸ್ಥಾನವನ್ನೂ ಮಮತಾ ತಮ್ಮ ಅಳಿಯನಿಗೆ  ಕೊಡುತ್ತಾರೆ ಎಂದು ಆರೋಪಿಸಿದ್ದರು.

ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?

 

 

 

 

Advertisement

Udayavani is now on Telegram. Click here to join our channel and stay updated with the latest news.

Next