Advertisement

ದಿ.ಜ.ಬಿಪಿನ್‌ ರಾವತ್‌ ಪೂರ್ವಿಕರ ಗ್ರಾಮಕ್ಕೆ ರಸ್ತೆ ಸಂಪರ್ಕ

05:43 PM Oct 05, 2022 | Team Udayavani |

ನವದೆಹಲಿ: ಉತ್ತರಾಖಂಡದ ಪೌರಿ ಘಡ್ವಾಲ್‌ ಜಿಲ್ಲೆಯ ಸೈನಾ ಎಂಬ ಗ್ರಾಮಕ್ಕೆ ವಿದ್ಯುತ್‌ ಮತ್ತು ರಸ್ತೆ ಸಂಪರ್ಕ ಲಭ್ಯವಾಗಿದೆ.

Advertisement

ಈ ಗ್ರಾಮ ದೇಶದ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥ ದಿ.ಜ.ಬಿಪಿನ್‌ ರಾವತ್‌ ಅವರ ಪೂರ್ವಿಕರ ಗ್ರಾಮವಾಗಿದೆ.

ಮಹಾರಾಷ್ಟ್ರ ಮೂಲದ ಎನ್‌ಜಿಒ ಡಾ.ಹರಿವಂಶರಾಯ್‌ ಬಚ್ಚನ್‌ ಪ್ರಬೋಧನ್‌ ಪ್ರತಿಷ್ಠಾನ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಂಚೂಣಿಯಲ್ಲಿ ನಿಂತು ಕಾಮಗಾರಿಗಳನ್ನು ನಡೆಸುತ್ತಿದೆ.

ಉತ್ತರಾಖಂಡ ಸರ್ಕಾರದ ನೆರವಿನಿಂದ ಗ್ರಾಮಕ್ಕೆ ನೀರು ಪೂರೈಕೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣವನ್ನು ನಡೆಸಲಾಗುತ್ತಿದೆ ಎಂದು ಎನ್‌ಜಿಒ ಸಂಸ್ಥಾಪಕ ನಿವೃತ್ತಿ ಯಾದವ್‌ ಹೇಳಿದ್ದಾರೆ. ಇದಲ್ಲದೆ ಹೊಸ ಗ್ರಾ.ಪಂ. ಕಚೇರಿ ನಿರ್ಮಾಣಕ್ಕೂ ರಾಜ್ಯ ಸರ್ಕಾರ ಸಮ್ಮತಿಸಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next