Advertisement
ಇದನ್ನು ಗಮನಿಸಿದ ಅಣ್ಣಾಮಲೈ ತಮ್ಮ ವಾಹನ ನಿಲ್ಲಿಸಿ ಸ್ಥಳಕ್ಕೆ ತೆರಳಿದರು. ಪಟಾಕಿ ಸಿಡಿಸಲು ಅನುಮತಿ ನೀಡಿದ್ದು ಯಾರು? ಪಟಾಕಿ ಸಿಡಿಸಿ ನೀವು ಹೋಗುತ್ತೀರ, ರಸ್ತೆ ಸ್ವಚ್ಛ ಗೊಳಿಸುವವರು ಯಾರು ಎಂದು ಪ್ರಶ್ನಿಸಿದರು. ಅಭಿಮಾನಿಗಳು ನಾವು ಪಟಾಕಿ ಸಿಡಿಸಿಲ್ಲ ಎಂಬ ಸಮರ್ಥನೆಗೆ ಮುಂದಾದಾಗ ಅಸಮಾಧಾನ ವ್ಯಕ್ತಪಡಿಸಿದ ಅಣ್ಣಾಮಲೈ, ಸ್ಥಳದಲ್ಲಿದ್ದ ಸಂಚಾರಿ ಪೊಲೀಸರನ್ನು ಕರೆದು ಇವರನ್ನು ಠಾಣೆಗೆ ಕರೆದೊಯ್ಯಿರಿ ಎಂದು ಸೂಚಿಸಿದರು. ಆ ನಂತರ ಲೀ ಚಿತ್ರದ ಪೋಸ್ಟರ್‌ಗಳಿರುವ ಟೀ ಶರ್ಟ್ ಧರಿಸಿದ್ದವರನ್ನು ಕರೆದು ಕೂಡಲೇ ರಸ್ತೆ ಸ್ವಚ್ಛಗೊಳಿಸುವಂತೆ ಆದೇಶಿಸಿದರು. ಆ ನಂತರ ಅಭಿಮಾನಿಗಳು ರಸ್ತೆಯನ್ನು ಸ್ವಚ್ಛಗೊಳಿಸಿದರು. Advertisement
ಪಟಾಕಿ ಹೊಡೆದವರಿಂದಲೇ ರಸ್ತೆ ಸ್ವಚ್ಛಗೊಳಿಸಿದ ಎಸ್ಪಿ!
03:45 AM Jan 14, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.