ಪುತ್ತೂರು: ನಗರದ ಪಟಾಕಿ ಗೋಡೌನ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ನಾಶವಾದ ಘಟನೆ ನ.1ರಂದು ರಾತ್ರಿ ಸಂಭವಿಸಿದೆ.
Advertisement
ಪುತ್ತೂರು ದರ್ಬೆಯ ಬಳಿ ನೆಲಮಹಡಿಯಲ್ಲಿದ್ದ ಪಟಾಕಿ ಗೋಡೌನ್‌ನಲ್ಲಿ ಶೇಖರಿಸಿಟ್ಟ ಪಟಾಕಿ ಸಂಜೆ 6 ಗಂಟೆ ಸಮಯಕ್ಕೆ ಸಿಡಿಯಲು ಪ್ರಾರಂಭವಾಯಿತು.
ಪಟಾಕಿ ಸಿಡಿಯುವ ಶಬ್ದದಿಂದ ಕಟ್ಟಡದಲ್ಲಿರುವ ಎಲ್ಲ ಅಂಗಡಿಯವರು ಬಂದ್ ಮಾಡಿ ಹೊರ ಬಂದಿದ್ದಾರೆ. ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಡೆದಿದೆಯೋ ಅಥವಾ ಬೆಂಕಿ ಆಕಸ್ಮಿಕವೂ ಎನ್ನುವ ಬಗ್ಗೆ ತನಿಖೆಯಿಂದ ಹೊರ ಬರಬೇಕಿದೆ.