Advertisement
ಮೃತರನ್ನು ತುಮಕೂರು ಮೂಲದ ಸ್ವಾಮಿ(23), ಪ್ರಸಾದ್(20), ಮಹೇಶ್ (35), ಹಾಸನದ ಮಂಜುನಾಥ್ (45), ಮಂಡ್ಯದ ಕೀರ್ತಿ(24) ಎಂದು ಗುರುತಿಸಲಾಗಿದೆ. ಕೈಲಾಶ್ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಈ ದುರಂತ ಸಂಭವಿಸಿದೆ. ಅಗ್ನಿಶಾಮಕ ಸಿಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಮೃತ ದೇಹವನ್ನು ಕಟ್ಟಡದಿಂದ ಹೊರ ತೆಗೆದಿದ್ದಾರೆಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಕಿ ಅವಘಡಕ್ಕೆ ಸಂಭವಿಸಿದಂತೆ ಕೈಲಾಶ್ ಬಾರ್ ಮಾಲಿಕ ಆರ್.ವಿ.ದಯಾಶಂಕರ ಮತ್ತು ಅನುಮತಿ ಪಡೆದವರ ವಿರುದ್ಧ ಕಲಾಸಿಪಾಳ್ಯ ಪೊಲೀಸ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬಾರ್ ಐಮಾಲಿಕ ಆರ್.ವಿ.ದಯಾಶಂಕರ ತಲೆ ಮರೆಸಿಕೊಂಡಿದ್ದಾರೆ. ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಮೇಲ್ನೋಟಕ್ಕೆ ಕಂಡು ಬಂದರೂ ಕಾರಣವೇನೆಂದು ಇನ್ನೂ ತಿಳಿದು ಬರಬೇಕಾಗಿದೆ.
Related Articles
ದುರಂತ ನಡೆದ ಸ್ಥಳಕ್ಕೆ ಗೃಹ ಸಚಿವ ರಾಮಲಿಂಗ ರೆಡ್ಡಿ ಭೇಟಿ ನೀಡಿ ನಪರಿಶೀಲನೆನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಘಟನೆಯಲ್ಲಿ ಸುಟ್ಟ ಗಾಯಗಳಿಂದ ಇಬ್ಬರು ಹಾಗೂ ಉಸಿರುಗಟ್ಟಿ ಮೂವರು ಮೃತಪಟ್ಟಿದ್ದಾರೆ. ವಾಣಿಜ್ಯ ಮಳಿಗೆಗಳಲ್ಲಿ ಅಗ್ನಿ ಶಾಮಕ ವ್ಯವಸ್ಥೆ ಕಡ್ಡಾಯ ಆದ್ರೆ ಈ ಕಟ್ಟದಲ್ಲಿ ಅಗ್ನಿ ಶಾಮಕ ವ್ಯವಸ್ಥೆ ಇತ್ತೆ ಇಲ್ಲವೋ ಎಂಬುದನ್ನು ಪಾಲಿಕೆ ಹಾಗೂ ಅಬಕಾರಿ ಇಲಾಖೆ ಸೂಕ್ತವಾದ ತನಿಖೆ ನಡೆಸಲಿದೆ ಎಂದು ಹೇಳಿದರು.
Advertisement
ಬಾರ್ ಮಾಲಿಕರ ಮೇಲೆ ಮೇಯರ್ ಅಸಮಾಧಾನ: ಬಿಬಿಎಂಪಿ ಮೇಯರ್ ಸಂಪತ ರಾಜ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು ಈ ಸಂದರ್ಭದಲ್ಲಿ ಮಾತನಾಡಿ ಬಾರ್ ಮಾಲೀಕ ಮಾನವೀಯತೆ ದೃಷ್ಟಿಯಿಂದಾದರು ಘಟನಾ ಸ್ಥಳಕ್ಕೆ ಬರಬೇಕಿತ್ತು ಆದರೆ ಇದುವರೆ ಬಂದಿಲ್ಲ ಎಂದು ತೀಮ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬೆಂಗಳೂರು ಅಭಿವೃದ್ದಿ ಸಚಿವ ಕೆಜೆ ಜಾರ್ಜ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಮೃತ ಕುಟುಂಬಗಳಿಗೆ ಸೂಕ್ತ ಪರಿಹಹಾರ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.