ರೋಣ: ನಾಲ್ಕು ತಿಂಗಳಾದ್ಯಂತ ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟ ಬೆಳೆದ ಕಬ್ಬು ಬೆಳೆಗೆ ವಿದ್ಯುತ್ ಅವಘಡದಿಂದ ಸುಟ್ಟು ಕರಕಲಾದ ಘಟನೆ ರವಿವಾರ ಮಧ್ಯಾಹ್ನಾ ತಾಲೂಕಿನ ಬಿ.ಎಸ್.ಬೆಲೇರಿ ಗ್ರಾಮದಲ್ಲಿ ರೈತರ ಕಣ್ಣು ಎದುರೇ ನಡೆದಿದೆ.
ಬಿ.ಎಸ್.ಬೆಲೇರಿ ಗ್ರಾಮದ ಮುತ್ತಪ್ಪ ಖ್ಯಾಡದ,ಹೂವಪ್ಪ ಖ್ಯಾಡದ,ಹನಮಂತ ಖ್ಯಾಡದ ಎಂಬ ಸಹೋದರರಿಗೆ ಸೇರಿದ್ದ ಜಮೀನಿನಲ್ಲಿ ಬೆಳೆಯಲಾದ 8 ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆಗೆ ವಿದ್ಯುತ್ ಅವಘಡದಿಂದ ಬೆಂಕಿ ಬಿದ್ದ ಪರಿಣಾಮ ಕಬ್ಬು ಸುಟ್ಟು ಕರಕಲಾಗಿದೆ.
ಪ್ರತಿ ಎಕರೆ ೪೦ ಸಾವಿರ ರೂಪಾಯಿ ಖರ್ಚು ಮಾಡಿ 8 ಎಕರೆ ಪ್ರದೇಶದಲ್ಲಿ ಒಟ್ಟು 3,20,000 ವೆಚ್ಚದಲ್ಲಿ ಬೆಳೆಯಲಾದ ಪ್ರತಿ ಎಕರೆ ಪ್ರದೇಶಕ್ಕೆ 50ಟನ್ ಇಳುವರಿ ಮಟ್ಟಕ್ಕೆ ಬೆಳೆದಿತ್ತು.10,70,000 ಮೌಲ್ಯ ಬೆಳೆ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.
ಆಗೊಂದು ಈಗೊಂದು ಘಟನೆ ನಡೆದಾಗ ಹೋಗುವ ಅಗ್ನಿಶಾಮಕ ದಳದ ಸಿಬ್ಬಂದಿ ರೈತರು ಜಮೀನಿನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಕಚೇರಿಗೆ ಕರೆ ಮಾಡಿದರೆ,ಅಗ್ನಿಶಾಮಕದಳದ ಸಿಬ್ಬಂದಿ ಅಲ್ಲಿಗೆ ಬಂದರೆ ಚಾರ್ಜ ಅಗುತ್ತೆ ಎಂದು ತಾಸುಗಂಟಲೆ ಕಾದರು ರೈತರ ಹೊಲಕ್ಕೆ ಬಿದ್ದಿರುವ ಬೆಂಕಿಯನ್ನು ನಂದಿಸಲು ಬರಲೆ ಇಲ್ಲ.ಇದರಿಂದ ಬಿ.ಎಸ್.ಬೆಲೇರಿ ಗ್ರಾಮದ ರೈತರು ಅಗ್ನಿಶಾಮಕ ಇಲಾಖೆಗೆ ಹಿಡಿಶಾಪ ಹಾಕಿದರು.
ನಾವು ಮೂರು ಜನ ಅಣ್ಣತಮ್ಮಂದಿರು ಕೂಡಿಕೊಂಡ ೮ಎಕರೆ ಹೊಲದಾಗ ಬೆಳೆದ ಕಬ್ಬಿನ ಬೆಳೆಗೆ ಬೆಂಕಿ ಬಿದ್ದು ನಮ್ಮ ಕಣ್ಣುಮುಂದ ಹಾಳಾಗಿ ಹೋತ್ರಿ.ಏನು ಮಾಡೋದು ಒಂದು ವರ್ಷದಿಂದ ಮೂರು ಜನ ಸಹೋದರರು ಹಗಲಿ,ರಾತ್ರಿ ಕಣ್ಣಿಗೆ ಎಣ್ಣಿಬಿಟ್ಟಗೊಂಡು ನೀರು ಹಾಸಿ ಬೆಳೆಸಿದ್ದು,ಕಬ್ಬು ಕಾಟವಿಗೆ ಬಂದಿತ್ರೀ. ಇದರಿಂದ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲರೀ ಎಂದು ರೈತ ಸಹೋದರರು ತಮ್ಮ ಅಳಿಲನ್ನು ಪತ್ರಿಕೆಯೊಂದಿಗೆ ತೊಂಡಿಕೊಂಡರು.