Advertisement

ಅಂಗಡಿಗೆ ಬೆಂಕಿ: 8 ಲಕ್ಷ ರೂ. ನಷ್ಟ

01:05 PM Feb 23, 2018 | |

ಬಸವಕಲ್ಯಾಣ: ರೆಡಿಯಂ ಸ್ಟಿಕರ್‌ ಅಂಗಡಿಗೆ ಬೆಂಕಿ ತಗುಲಿ ಸುಮಾರು 8 ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮವಾದ ಘಟನೆ ನಗರದ ಟೂರಿಸ್ಟ್‌ ಲಾಡ್ಜ್ ಬಳಿ ಬುಧವಾರ ರಾತ್ರಿ ನಡೆದಿದೆ.

Advertisement

ಮಸ್ತಾನ್‌ ಆರ್ಟ್ಸ್ ಎನ್ನುವ ರೆಡಿಯಂ ಸ್ಟಿಕರ್‌ ಅಂಗಡಿಗೆ ಬೆಂಕಿ ತಗುಲಿದ್ದು, ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ತಗುಲಿದೆ ಎಂದು ಶಂಕಿಸಲಾಗಿದೆ. ಸುದ್ದಿ ತಿಳಿದ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರು ಬರುವ ಮುನ್ನವೆ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು ಎನ್ನಲಾಗಿದೆ.

4 ಲಕ್ಷ ರೂ. ಮೌಲ್ಯದ ಸಿಎನ್‌ಸಿ ಯಂತ್ರ, 80 ಸಾವಿರ ಮೌಲ್ಯದ ರೆಡಿಯಂ ಸ್ಟಿಕರ್‌ ಕಟ್‌ ಮಾಡುವ ಯಂತ್ರ, ಒಂದು ಕಂಪ್ಯೂಟರ್‌, ರೆಡಿಯಂ ಸ್ಟಿಕರ್‌ ರೂಲ್‌ಗ‌ಳು ಸೇರಿದಂತೆ ಇತರ ಯಂತ್ರಗಳು ಹಾಗೂ ಅಂಗಡಿಯಲ್ಲಿಯ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸುಮಾರು 8 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next