Advertisement

Chikkodi: 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

11:39 AM Jun 20, 2024 | Team Udayavani |

ಚಿಕ್ಕೋಡಿ: ನೀರಿಲ್ಲದ 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ಚಿಕ್ಕೋಡಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ಜೀವದಾನ ನಿಡಿದ್ದಾರೆ.

Advertisement

ಚಿಕ್ಕೋಡಿ ನಗರದ ವಾಡ ಗಲ್ಲಿಯ ಶ್ರೀನಿವಾಸ್ ದೊಡಮನಿ ಅವರ ಸುಮಾರು 40 ಅಡಿ ಆಳದ ಬಾವಿಯಲ್ಲಿ ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಬೆಕ್ಕು ಕಾಲು ಜಾರಿ ಬಿದ್ದಿದೆ. ಹೀಗಾಗಿ ದೊಡಮನಿ ಮನೆಯವರು ಚಿಕ್ಕೋಡಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬೆಕ್ಕನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗೆ ಇಳಿದು ಬೆಕ್ಕನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಇದರಿಂದ ಅಗ್ನಿಶಾಮಕ ದಳದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ದೊಡಮನಿ ಕುಟುಂಬ ಹಾಗೂ ಚಿಕ್ಕೋಡಿ ಅಗ್ನಿಶಾಮಕ ಠಾಣಾಧಿಕಾರಿ ಅನುರಾಗ್ ಬಿ.ಎಲ್., ಅಗ್ನಿಶಾಮಕ ಪ್ರಾಮುಖ ರಾಚಯ್ಯ ಮಠಪತಿ, ಎಸ್.ಎನ್.ನಾಗ ಊರಿ, ರಾಜೇಂದ್ರ ಪಾಟೀಲ್, ಧೀರ ಗವಿ, ಬಸು ಹಿರೇಗೌಡರ್, ಹೈದರ್ ಅಲಿ ಮುಲ್ತಾನಿ.ಮಂಜು ಸನದಿ ಉಪಸ್ಥಿತರಿದ್ದರು.

ಇದನ್ನೂ ಓದಿ: Reasi Attack: ಕಾಶ್ಮೀರ ಯಾತ್ರಿಗಳ ಬಸ್‌ಗೆ ಉಗ್ರ ದಾಳಿ: ಆರೋಪಿ ಹಕಮ್ ಸೆರೆ

Advertisement

Udayavani is now on Telegram. Click here to join our channel and stay updated with the latest news.

Next