ಹುಣಸೂರು: ಪುರಿಬಟ್ಟಿಗೆ ಬೆಂಕಿ ಬಿದ್ದು ಎರಡು ಮೋಟಾರ್, ಮೇಲ್ಚಾವಣಿ ಸೇರಿದಂತೆ ಪುರಿ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಗುರುಪುರದಲ್ಲಿ ನಡೆದಿದೆ.
ಗುರುಪುರದ ಪುರುಷೋತ್ತಮರಿಗೆ ಸೇರಿದ ಪುರಿ ಬಟ್ಟಿ ಇದಾಗಿದ್ದು, ಕಳೆದ ನ.೧೮ರ ಮಧ್ಯ ರಾತ್ರಿ ಘಟನೆ ನಡೆದಿದ್ದು, ಸುಮಾರು ಮೂರು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಈ ಸಂಬಂಧ ಪುರುಷೋತ್ತಮ್ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಯಾರೋ ಕಿಡಿಗೇಡಿಗಳು ಮೇಲ್ಚಾವಣಿ ಮೇಲೆ ಹತ್ತಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದಾರೆ. ಇದರಿಂದಾಗಿ ಎರಡು ಮೋಟಾರ್, ಪುರಿ ಮೂಟೆ ಸೇರಿದಂತೆ ಮೇಲ್ಚಾವಣಿ ಸಂಪೂರ್ಣ ಬೆಂದು ಹೋಗಿದೆ. ತಕ್ಷಣವೇ ಅಕ್ಕಪಕ್ಕದ ಜನರು ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.