Advertisement
ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ಎಕರೆಗಳಷ್ಟು ಅರಣ್ಯ ಸುಟ್ಟು ಭಸ್ಮವಾಗಿದೆ. ಇನ್ನು ಇಲ್ಲಿನ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸುವ ಪ್ರಮಾಣ ತೀರಾ ಕಡಿಮೆ. ಆದರೂ, ಬೇಸಿಗೆಯಲ್ಲಿ ತಾಲೂಕಿನ ಅರಣ್ಯ ಪ್ರದೇಶಗಳಿಗೆ ಪ್ರತಿವರ್ಷ ಬೆಂಕಿ ಬೀಳುವುದು ಹೆಚ್ಚು ಕಂಡುಬರುತ್ತಿದೆ.
Related Articles
- ಅರಣ್ಯದ ಮಧ್ಯೆಯೇ ಫೈಯರ್ ಕಂಟ್ರೋಲಿಂಗ್ ರೂಮ್‌ಗಳನ್ನು ನಿರ್ಮಿಸಿ ಇಲಾಖೆ ಸಿಬ್ಬಂದಿ ಮುಂಜಾಗೃತವಾಗಿ ಅರಣ್ಯದಲ್ಲಿ ತಂಗಿದರೆ, ಬೆಂಕಿ ಕಂಡ ಕೂಡಲೇ ನಿಯಂತ್ರಿಸಲು ಸಹಕಾರಿ ಆಗುತ್ತದೆ.
- ಬೆಂಕಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಹರಡುವುದನ್ನು ತಡೆಯಲು ಹಾಗೂ ಜನ ಧೂಮಪಾನ ಮಾಡಿ ಬಿಸಾಡುವ ಸಿಗರೇಟ್, ಬೀಡಿ ಕಿಡಿಹೊತ್ತಿ ಬೆಂಕಿ ತಗಲುವ ಸಾಧ್ಯತೆಗಳೇ ಹೆಚ್ಚಿದೆ. ಹೀಗಾಗಿ ಅರಣ್ಯದಲ್ಲಿ ಏಕಾಏಕಿ ಉಂಟಾಗುವ ಬೆಂಕಿ ತಡೆಯಲು ಅಥವಾ ದೂರದವರೆಗೆ ವ್ಯಾಪಿಸದಂತೆ ಬೆಂಕಿ ರೇಖೆ (ಫೈರ್ ಲೈನ್) ತಂತ್ರ ಬಳಕೆ ಅವಶ್ಯ
- ಅರಣ್ಯ ಪ್ರದೇಶದ ಮೂಲಕ ಸಾಗುವ ರಸ್ತೆಗಳ ಅಕ್ಕ-ಪಕ್ಕ, ಕಾಡಿನ ಕಾಲು ದಾರಿ, ಬೆಂಕಿ ಸ್ಥಳ ಗುರುತಿಸಿ ನಂತರ ಮೂರು ಮೀಟರ್ ಅಗಲದ ಅಂತರದಲ್ಲಿ ಅರಣ್ಯ ಸಿಬ್ಬಂದಿಯೇ ಬೆಂಕಿ ಹಚ್ಚಿ ಒಣಗಿದ ಹುಲ್ಲು, ತರಗು ಗಿಡಗಳನ್ನು ಸುಟ್ಟು ನಾಶಪಡಿಸಬೇಕಿದೆ.
- ಅರಣ್ಯದ ವಿಸ್ತೀರ್ಣಕ್ಕೆ ತಕ್ಕಂತೆ ಇರಬೇಕಾದ ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳನ್ನು ನೇಮಿಸಬೇಕು. ಇನ್ನು ಸ್ವಯಂಸೇವಕರಾಗಿ ಸ್ಥಳೀಯರು ಭಾಗವಹಿಸುವ ಅಗತ್ಯವಿದೆ.
- ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಯಿದೆ. ಹೀಗಾಗಿ ಅಗ್ನಿಶಾಮಕ ಸಾಧನಗಳ ಜತೆಗೆ ಮಾನವನ ಶಕ್ತಿಯೂ ತುಂಬಾ ಮುಖ್ಯ ನಮ್ಮ ತಾಲೂಕಿನ ಅರಣ್ಯವು ಹೆಚ್ಚಾಗಿ ನೀಲಗಿರಿ, ಅಕೇಶಿಯಾ, ಲಂಟನಾ ಆದಂತಹ ಬೇಲಿ ಗಿಡಗಳು ಆವರಿಸಿದೆ.
Advertisement
ಬೆಂಕಿ ಬಿದ್ದರೆ ಕ್ಷಣ ಮಾತ್ರದಲ್ಲಿ ಸುಟ್ಟುಹೋಗುತ್ತದೆ. ಅರಣ್ಯ ಇಲಾಖೆ ತಮ್ಮ ಪ್ರಯತ್ನದೊಂದಿಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. – ಚಿದಾನಂದ್, ಯುವ ಸಂಚಲನದ ಅಧ್ಯಕ್ಷ
-ಡಿ.ಶ್ರೀಕಾಂತ