Advertisement

ಕುಮಟಾ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಮನೆ; ಅಪಾರ ನಷ್ಟ

03:39 PM Jun 28, 2022 | Team Udayavani |

ಕುಮಟಾ: ತಾಲೂಕಿನ ದೀವಗಿ ಗ್ರಾ.ಪಂ ವ್ಯಾಪ್ತಿಯ ನವಗ್ರಾಮದ ಮನೆಯೊಂದಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಸಂಪೂರ್ಣ ಮನೆ ಸುಟ್ಟು ಕರಕಲಾದ ಘಟನೆ ಮಂಗಳವಾರ ನಡೆದಿದೆ.

Advertisement

ನವಗ್ರಾಮದ ಗೌರಿ ಗಜಾನನ ಅಂಬಿಗ ಎನ್ನುವವರ ಮನೆಯು ಬೆಂಕಿಗೆ ಆಹುತಿಯಾಗಿದ್ದು, ಸುಮಾರು 3 – 4 ಲಕ್ಷ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.

ಘಟನೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುರ್ಘಟನೆ ನಡೆದಿದ್ದು ಮನೆಯಲ್ಲಿದ್ದ ಎರಡು ಫ್ಯಾನ್, ಗೋದ್ರೆಜ್ ಕಪಾಟು, ಮೂರು ಹೊಲಿಗೆ ಯಂತ್ರ, ಅಡುಗೆ ಪಾತ್ರೆ, ಹಾಗೂ ವಿದ್ಯುತ್ ಮೀಟರ್,ಟ್ಯುಬ್ ಲೈಟ್ ಹಾಗೂ ಮನೆಯ ಮೇಲ್ಬಾಗ ಸಂಪೂರ್ಣ ಸುಟ್ಟು ಹೋಗಿದೆ.

ತಕ್ಷಣ ಸ್ಥಳಕ್ಕಾಗಮಸಿದ ಅಗ್ನಿಶಾಮಕ ಸಿಬ್ಬಂದಿಗಳ ಸುಮಾರು ಒಂದು ಗಂಟೆಗಳ ಕಾಲದ ಪ್ರಯತ್ನದಿಂದಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸ್ಥಳಕ್ಕೆ ಮಿರ್ಜಾನ್ ಕಂದಾಯ ನಿರೀಕ್ಷಕರಾದ ಗಾಣಗೀರ್,ಪಿಡಿಓ  ರೇಖಾ ನಾಯಕ, ವಿದ್ಯುತ್ ಇಲಾಖೆಯ ಪ್ರವೀಣ, ಡೆಪ್ಯುಟಿ ಅರ್ ಎಫ್ ಓ ಹೂವಣ್ಣ ಗೌಡರ್, ಗ್ರಾ.ಪಂ ಸಸದಸ್ಯರಾದ ಪ್ರವೀಣ ಅಂಬಿಗ, ಜಗದೀಶ ಭಟ್ಟ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಗ್ನಿಶಾಮಕ ಠಾಣಾಧಿಕಾರಿ ತಮ್ಮಯ್ಯ ಗೌಡ, ಕುಮಾರ ಗೌಡ, ಮಂಜುನಾಥ ಹೆಗಡೆ,ನಾಗರಾಜ ನಾಯಕ, ಮಹಬಲೇಶ್ವರ ಹರಿಕಂತ್ರ,ಗುರುನಾಥ ನಾಯ್ಕ, ದಿನೇಶ ಕುಮಾರ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next