ಉಡುಪಿ: ಇಲ್ಲಿನ ಇಂದ್ರಾಳಿ ರೈಲ್ವೇ ಗೋಡೌನ್ ನ ಹಿಂಬದಿಯಲ್ಲಿ ದಾಸ್ತಾನು ಇರಿಸಲಾಗಿದ್ದ ರೈಲ್ವೇ ಹಳಿಗೆ ಬಳಸಾಗುವ ರಬ್ಬರ್ ಗೆ ಬೆಂಕಿ ಹತ್ತಿಕೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಪರಿಣಾಮ ಇಂದ್ರಾಳಿ ಪರಿಸರದಲ್ಲಿ ದಟ್ಟ ಹೊಗೆ ಎದಿದ್ದು ಆತಂಕ ಮೂಡಿಸಿದೆ. ಗೋಡೌನ್ ನ ಹಿಂಬದಿಯಲ್ಲಿ ದಾಸ್ತಾನು ಇರಿಸಲಾಗಿದ್ದ ಲಕ್ಷಾಂತರ ರೂ ಮೌಲ್ಯದ ರಬ್ಬರ್ ಬೆಂಕಿಗಾಹುತಿಯಾಗಿದೆ.
ಇದನ್ನೂ ಓದಿ:ರಾಜಕೀಯ ಹಿತಾಸಕ್ತಿಗಾಗಿ ರಾಷ್ಟ್ರೀಯ ಪಕ್ಷಗಳು ಗೋವಾದ ಜನತೆಗೆ ಪದೇ ಪದೇ ದ್ರೋಹ ಬಗೆಯುತ್ತಿವೆ
Related Articles
ಎರಡು ಅಗ್ನಿಶಾಮಕ ದಳದ ವಾಹನಗಳು, ಹತ್ತಕ್ಕೂ ಹೆಚ್ಚು ಮಂದಿ ಬೆಂಕಿ ನಂದಿಸಲು ಶ್ರಮಿಸಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.