ಮಲ್ಪೆ: ಕಲ್ಮಾಡಿಯ ಮನೆಯೊಂದರ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
Advertisement
ಕಲ್ಮಾಡಿಯ ವಿಠಲ್ ಕೋಟ್ಯಾನ್ ಎಂಬವರ ಮನೆಯ ಮಹಡಿಗೆ ಬೆಂಕಿ ತಗಲಿದೆ. ಆನಂತರ ಅಗ್ನಿಶಾಮಕ ದಳವವರು ಬೆಂಕಿಯನ್ನು ನಂದಿಸಿದ್ದಾರೆ. ಕಲ್ಮಾಡಿಯ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಮನೆಯ ಮಹಡಿಯ ಮೇಲೆ ಲಕ್ಷಾಂತರ ರೂ. ಸೊತ್ತು ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ. ಅಗ್ನಿಶಾಮಕ ದಳದವರು ಪರಿಶೀಲನೆ ನಡೆಸಿದ್ದಾರೆ.