Advertisement

ಕಾಪು : ಗೃಹೋಪಯೋಗಿ ಮಾರಾಟ ಮಳಿಗೆಯಲ್ಲಿ‌ ಬೆಂಕಿ, ಅಪಾರ ಸೊತ್ತು‌ಹಾನಿ

05:34 PM Sep 26, 2021 | Team Udayavani |

ಕಾಪು : ಕಾಪು ಪೇಟೆಯ ಉದಯ ಬಜಾರ್ ಮಳಿಗೆಯಲ್ಲಿ ಶನಿವಾರ ರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ  ಸೊತ್ತುಗಳು ನಷ್ಟ ಉಂಟಾಗಿದೆ.

Advertisement

ಶನಿವಾರ ರಾತ್ರಿ ಹೊಗೆ ಕಾಣಿಸಿಕೊಂಡಿದ್ದು, ಅದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿ, ಬಜಾರ್ ಒಳಗೆ ಬೆಂಕಿ ಆವರಿಸಿ ಕೊಂಡಿರುವುದನ್ನು‌ ಗಮನಿಸಿದ್ದರು.

ಕೂಡಲೇ ಸ್ಥಳೀಯರು ಮತ್ತು ಕಟ್ಟಡದ ಮಾಲಕರು ಉಡುಪಿ‌ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು , ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉದಯ ಬಜಾರ್ ನ‌ ಒಳಗಿದ್ದ ಟಿವಿ, ಫ್ರಿಡ್ಜ್ ಸಹಿತ ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳು, ಗ್ರಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಸೊತ್ತು‌ ನಷ್ಟದ ವರದಿ ಇನ್ನಷ್ಟೇ ಅಂದಾಜಿಸಬೇಕಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next