ಕಾರವಾರ: ಭಾರತೀಯ ನೌಕಾಪಡೆಯ ಬೃಹತ್ ಯದ್ದ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ (ಏರ್‌ಕ್ರಾಪ್ಟ್ ಕ್ಯಾರಿಯರ್) ದಲ್ಲಿ ಶನಿವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ.
ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಲ್ಲಿರುವ ನಾವಿಕರು ತಂಗುವ ಕೊಠಡಿಗಳಿರುವ ಭಾಗದಿಂದ ಹೊಗೆ ಬರುತ್ತಿರುವುದನ್ನು ನೌಕಾದಳದ ಸಿಬ್ಬಂದಿ ಗಮನಿಸಿದರು. ಕೂಡಲೇ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳೆಲ್ಲರೂ ಸೇರಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಇದರಿಂದ ಬೃಹತ್ ಯದ್ಧ ನೌಕೆಗೆ ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ.
ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ:ಶನಿವಾರದ ಕೋವಿಡ್ ವರದಿ : ದೇಶದಲ್ಲಿ 4,187 ಮಂದಿ ಸಾವು, 4 ಲಕ್ಷಕ್ಕೂ ಅಧಿಕ ಪ್ರಕರಣ
ಈ ಸಂದರ್ಭದಲ್ಲಿ ನೌಕೆಯಲ್ಲಿದ್ದ ಎಲ್ಲರನ್ನೂ ಸಹ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಘಟನೆಯಿಂದ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ. ಹಾಗೂ ನೌಕೆಯಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ನೌಕಾದಳದ ವಕ್ತಾರರು ತಿಳಿಸಿದ್ದಾರೆ.