ಹುಣಸೂರು: ತಂಬಾಕು ಹದಗೊಳಿಸುವ ಬ್ಯಾರನ್ ಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 6 ಲಕ್ಷರೂ ನಷ್ಟ ಸಂಭವಿಸಿದ ಘಟನೆ ಹುಣಸೂರು ತಾಲೂಕಿನ ಗಾವಟಗೆರೆ ಹೋಬಳಿಯ ಲಕ್ಕನಕೊಪ್ಪಲಿನಲ್ಲಿ ನಡೆದಿದೆ.
ಮೊದಲು ದಟ್ಟ ಹೊಗೆ ಕಾಣಿಸಿಕೊಂಡಿದೆ. ಒಮ್ಮೆಲೆ ಮೇಲ್ಚಾವಣಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದು. ಹದಗೊಳಿಸಲು ಡಬ್ಬಲ್ ಬ್ಯಾರನ್ ಗೆ ಏರಿಸಿದ್ದ ಹೊಗೆ ಸೊಪ್ಪು ಹಾಗೂ ಮೇಲ್ಚಾವಣಿ ಸಂಪೂರ್ಣ ಸುಟ್ಟು ಹೋಗಿದೆ.
ಇದನ್ನೂ ಓದಿ: ನೂಪುರ್ ಹೇಳಿಕೆಗೆ ಬೆಂಬಲ:ಮಹಾರಾಷ್ಟ್ರದಲ್ಲೂ ವ್ಯಕ್ತಿಯ ಹತ್ಯೆ: ತಡವಾಗಿ ಬೆಳಕಿಗೆ ಬಂದ ಪ್ರಕರಣ
ಸಹೋದರರಾದ ನಾಗಣ್ಣ ಮತ್ತು ರಾಮಣ್ಣ ಎಂಬುವವರ ಎರಡು ಡಬ್ಬಲ್ ಬ್ಯಾರನ್ ಸುಟ್ಟು ಹೋಗಿದ್ದು ಸುಮಾರು 6 ಲಕ್ಷ ನಷ್ಟ ಉಂಟಾಗಿದೆ.
Related Articles
ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸಿದ್ದಾರೆ. ಅಕ್ಕಪಕ್ಕದ ಬ್ಯಾರನ್ ಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.