Advertisement

ಹುಣಸೂರು: ಆಕಸ್ಮಿಕ ಬೆಂಕಿ; ಬೆಂಕಿ ನಂದಿಸಲು ರಾತ್ರಿಯಿಡಿ ಹರ ಸಾಹಸ ಪಟ್ಟ ಅಗ್ನಿಶಾಮಕ ದಳ

12:44 PM Feb 26, 2023 | Team Udayavani |

ಹುಣಸೂರು: ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕಾಯರ್ (ತೆಂಗಿನ ನಾರು) ಭಸ್ಮವಾಗಿರುವ ಘಟನೆ ತಾಲೂಕಿನ ತೆಂಕನಕೊಪ್ಪಲಿನಲ್ಲಿ ನಡೆದಿದೆ.

Advertisement

ತಾಲೂಕಿನ ಬಿಳಿಕೆರೆ ಹೋಬಳಿಯ ತೆಂಕನಕೊಪ್ಪಲಿನ ಶ್ರೀನಿವಾಸೇ ಗೌಡರ ಕಾಯರ್ ಫ್ಯಾಕ್ಟರಿಯಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.

ಶನಿವಾರ ಮಧ್ಯಾಹ್ನ ಬಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ದಳದ 7 ವಾಹನ, ಮೂರು ಜೆಸಿಬಿ ಯಂತ್ರ ಹಾಗೂ ಸ್ಥಳಿಯ ನಿವಾಸಿಗಳ ಸಹಕಾರದಿಂದ ಭಾನುವಾರ ಬೆಳಗ್ಗೆ ಕೊನೆಗೂ ಯಶಸ್ವಿಯಾದರು.

3 ಎಕರೆ ಪ್ರದೇಶದಲ್ಲಿ ದಾಸ್ತಾನು ಮಾಡಿದ್ದ ತೆಂಗಿನ ನಾರು ಸಂಪೂರ್ಣ ಭಸ್ಮವಾಗಿದೆ. ಶನಿವಾರ ಮಧ್ಯಾಹ್ನದ ಸಮಯ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ದೌಡಾಯಿಸಿದರೂ ಬೆಂಕಿಯ ರೌದ್ರಾವತಾರ ಕಂಡು ಮೈಸೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಮೈಸೂರು, ಕೆ.ಆರ್.ನಗರ, ಬನ್ನಿಮಂಟಪ, ಹೆಬ್ಬಾಳ ಅಗ್ನಿಶಾಮಕ ಠಾಣೆಗಳಿಂದ 7 ಅಗ್ನಿಶಾಮಕ ವಾಹನಗಳೊಂದಿಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ರಾಜು ಹೆಚ್ಚಿನ ಸಿಬ್ಬಂದಿಗಳು  ಆಗಮಿಸಿದರು.

Advertisement

ಅಷ್ಟರಲ್ಲಾಗಲೇ ಸುತ್ತಮುತ್ತಲಿನಲ್ಲಿ ಭಾರೀ ಪ್ರಮಾಣದ ದಟ್ಟ ಹೊಗೆ ಕಾಣಿಸಿಕೊಂಡಿರುವುದರೊಂದಿಗೆ ಬೆಂಕಿ ಆವರಿಸಿದ್ದರಿಂದ ಪಕ್ಕದ‌ ಕೆರೆಯಿಂದ ವಾಹನಗಳ ಮೂಲಕ ಸುಮಾರು 600 ಕ್ಕೂ ಹೆಚ್ಚು ಟ್ಯಾಂಕ್‌ ನೀರು ಹಾಯಿಸಿ ಬೆಂಕಿಯನ್ನು ತಹ ಬದಿಗೆ ತಂದರೂ ತಡರಾತ್ರಿಯಾಗಿದ್ದರಿಂದ ಗಾಳಿ ಬೀಸಿದ್ದರಿಂದ ಒಂದು ಕಡೆ ಆರಿಸುತ್ತಿದ್ದಂತೆ ಮತ್ತೊಂದು ಕಡೆಯಿಂದ‌ ಬೆಂಕಿ ಕಾಣಿಸಿಕೊಳ್ಳಲಾರಂಬಿಸಿತು. ಬೆಳಗಿನವರೆಗೂ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಸುಮಾರು 3 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದ್ದು, ಘಟನೆ ಕುರಿತು ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ:

ಸಂಜೆಯಿಂದ ರಾತ್ರಿ ಊಟ, ನಿದ್ರೆಯನ್ನೇ ಮರೆತು‌ ರಾತ್ರಿಯಿಡಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next