ನೆಲಮಂಗಲ: ತಾಲೂಕಿನ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಅಗ್ರ ಗಣ್ಯ ಸ್ಥಾನಪಡೆದಿರುವ ಹಾಗೂ ದಕ್ಷಿಣ ಕಾಶಿ ಎಂದೆ ಪ್ರಖ್ಯಾತಿಯನ್ನು ಹೊಂದಿರುವ ಶ್ರೀಕ್ಷೇತ್ರ ಶಿವಗಂಗೆ ಬೆಟ್ಟದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಅವಘಡದಿಂದಾಗಿ ಬೆಟ್ಟದ ತಪ್ಪಲಿನ ಗ್ರಾಮಸ್ಥರು ಸೇರಿದಂತೆ ಪ್ರವಾಸಿಗರು ಭೀತಿಗೊಳಗಾಗಿದ್ದಾರೆ.
ಬಿಸಿಲಿನ ತಾಪಕ್ಕೆ ಬೆಟ್ಟಕ್ಕೆ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಜೌಷಧಿ ಗಿಡಗಳು ಸೇರಿದಂತೆ ಪ್ರಾಣಿ ಸಂಕುಲಗಳ ತಾಣವಾಗಿದ್ದು, ಬೆಂಕಿ ಮತ್ತಷ್ಟು ವ್ಯಾಪಿಸಿದರೆ ಪೂರ್ತಿ ಬೆಟ್ಟ ಬೆಂಕಿಗಾಹುತಿಯಾಗುವ ಆತಂಕ ಎದುರಾಗಿದೆ.
ಇದನ್ನೂ ಓದಿ:ಸೋತ ಸಿಎಂ ಧಾಮಿಯನ್ನು ಧೋನಿಗೆ ಹೋಲಿಸಿದ ರಾಜನಾಥ್ ಸಿಂಗ್!
ಬೆಂಕಿಯು ಹೆಚ್ಚಾದರೆ, ಬೆಟ್ಟದಲ್ಲಿರುವ ಪ್ರಾಣಿಪಕ್ಷಿಗಳು ಸೇರಿದಂತೆ ನೈಸರ್ಗಿಕ ಸಂಪತ್ತು ಎಲ್ಲಿಬೂದಿಯಾಗಿತ್ತದೆಯೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ರೀತಿಯ ಕ್ರಮವಹಿಸಬೇಕೆಂದು ನಾಗರಿಕರ ಒತ್ತಾಯವಾಗಿದೆ.