Advertisement

ವನದಹನ ಪ್ರಸಂಗವು 

06:45 AM Nov 26, 2017 | Harsha Rao |

ಮಲೇಶ್ಯಾ ಪ್ರವಾಸೋದ್ಯಮಕ್ಕೆ ಹೆಸರಾದ ದೇಶ. ಆದರೆ, ಅಲ್ಲಿ ಯಾವುದೇ ಹೊತ್ತಿನಲ್ಲಿ ಆಗಸದ ತುಂಬ ಹೊಗೆ ಹರಡಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ಇದ್ದಕ್ಕಿದ್ದಂತೆ ರದ್ದುಪಡಿಸಬಹುದು. ಯಾಕೆ ಹೀಗೆ ಧೂಮಲೀಲೆ ಕಾಡಲಾರಂಭಿಸುತ್ತದೆ ಎಂಬ ಪ್ರಶ್ನೆಯನ್ನು ಇಡೀ ಜಗತ್ತು ಕೇಳುತ್ತಿದೆ. ಮಲೇಶ್ಯಾ ಅಷ್ಟೇ ಅಲ್ಲ , ಇಂಡೋನೇಷ್ಯಾ, ಸಿಂಗಾಪುರ. ಜಪಾನ್‌, ಆಸ್ಟ್ರೇಲಿಯಾಗಳ ಆಗಸದಲ್ಲಿಯೂ ಹೊಗೆಯದ್ದೇ ಸಮಸ್ಯೆ. 

Advertisement

ಕಾರಣ ಕೇಳಿದರೆ, ಇದೂ ಒಂದು ಕಾರಣವೆ, ಎಂದು ಹುಬ್ಬೇರಿಸಬಹುದು. ಇಂಡೋನೇಷ್ಯಾದ ರೈತರು ಅರಣ್ಯಕ್ಕೆ ಬೆಂಕಿಕೊಟ್ಟು ಅದನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದರೆ ನಂಬುವುದಾದರೂ ಹೇಗೆ? 
ಆದರೆ, ಭಾರತೀಯರೂ ಚಿಂತಿಸಬೇಕಾದದ್ದು ಇಲ್ಲಿಯೇ ಇದೆ. ಪಂಜಾಬ್‌ ಮತ್ತು ಹರಿಯಾಣದ ರೈತರು ಕೂಡ ಇದೇ ವಿಧಾನವನ್ನು ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ, ಹಾಗಿದ್ದರೆ, ದೆಹಲಿಯಲ್ಲಿ ಹೊಗೆ ಮುಸುಕಿ ದೈನಿಕ ವ್ಯವಹಾರ ನಿಂತುಹೋಗುವುದರಲ್ಲಿ ಏನಾದರೂ ಅಚ್ಚರಿ ಇದೆಯೆ? 

ದ್ವೀಪಮಯ ದೇಶಗಳÇÉೇ ಅತಿ ದೊಡ್ಡದು ಎನ್ನುವ ಹೆಗ್ಗಳಿಕೆ ಬಿಟ್ಟರೆ ರಿಪಬ್ಲಿಕ್‌ ಆಫ್ ಇಂಡೋನೇಷ್ಯಾದ ಸಾಧನೆ ಗಣನೀಯವೇನೂ ಅಲ್ಲ, ಗಮನಾರ್ಹವೂ ಅಲ್ಲ. ಈ ದೇಶ ಏನಾದರೂ ಸುದ್ದಿ ಮಾಡಿದರೆ ಅದು ಒಳ್ಳೆಯ ಕಾರಣಗಳಿಗೆ ಆಗಿರುವುದು ತೀರಾ ಅಪರೂಪ. ಪ್ರಳಯಾಂತಕ ಸುನಾಮಿಯಿಂದ, ಭೂಕಂಪದಿಂದ, ಭಯೋತ್ಪಾದನೆಯಿಂದ ಆಗೊಮ್ಮೆ ಈಗೊಮ್ಮೆ ನಾನಿಲ್ಲಿದ್ದೇನೆ ಎಂದು ಜಗತ್ತಿಗೆ ಕೂಗಿ ಹೇಳುವ ಈ ದೇಶ, ತನ್ನ ಗರುಡ ಚಿತ್ರದ ಲಾಂಛನ ಹಾಗೂ ಗರುಡ ಹೆಸರಿನ ವಿಮಾನಯಾನ ಸೇವೆ, ತನ್ನ ಕರೆನ್ಸಿಯಲ್ಲಿ ಅವತರಿಸಿದ ಗಣಪ- ಇವೆಲ್ಲವುಗಳಿಂದ ಭಾರತದ ಹತ್ತಿರದ ಸಂಬಂಧಿ ಅನಿಸಿದರೂ ನಮಗೂ ಆ ದೇಶಕ್ಕೂ ಅಂಥ ಅವಿನಾಭಾವ ಸಂಬಂಧವೇನೂ ಇಲ್ಲ. ನಮ್ಮಲ್ಲಿರುವ ಹಾಗೆ ನೂರಾರು ಜನಾಂಗೀಯ ಗುಂಪುಗಳು, ನೂರಾರು ಭಾಷೆಗಳು ಅಲ್ಲಿವೆ.

ಅಲ್ಲೂ ನಮ್ಮ ಹಾಗೆ ರಾಮಾಯಣ ಇದೆ ಮತ್ತು “ಇದೊಳ್ಳೇ ರಾಮಾಯಣ ಆಯ್ತಲ್ಲ’ ಅನ್ನುವಂಥ ಪ್ರಸಂಗಗಳೂ ಅಲ್ಲಿ ನಡೆಯುತ್ತಿರುತ್ತವೆ! ಹಸಿರು ಮನೆ ಅನಿಲಗಳನ್ನು ಹೊರಸೂಸುವ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಇಂಡೋನೇಷ್ಯಾ ಪಡೆದಿದೆ ಅಂದರೆ ಅಲ್ಲಿ ರಾಮಾಯಣವನ್ನು ನೆನಪಿಸುವಂಥ ಮತ್ತು ಆ ಪುರಾಣದ ಲಂಕಾದಹನವನ್ನು ಮೀರುವಂಥದ್ದೆೇನೋ ನಡೆದಿದೆ ಎಂದು ಊಹಿಸಬಹುದು! ಬೆಂಕಿ ಇಲ್ಲದೆ ಹುಟ್ಟುವ ಹೊಗೆ ಎÇÉಾದರೂ ಇದೆಯೆ? 
ಹೊಗೆ ಎಂದೊಡನೆ ಅದಕ್ಕೆ ಕೈಗಾರಿಕೆ ಅಥವಾ ವಾಹನಗಳು ಕಾರಣವಿರಬಹುದು ಎಂದು ಊಹಿಸುವುದು ಸಹಜ. ಆದರೆ, ಇಲ್ಲಿ ಸಮಸ್ಯೆಯ ಮೂಲ ಕೃಷಿ ಅಂದರೆ ಆಶ್ಚರ್ಯವಾಗಬಹುದು.

ಇದೊಂದು ವಿಷವರ್ತುಲ
ಕೃಷಿಯಲ್ಲಿ ತೊಡಗದ ದೇಶವಿಲ್ಲ ಮತ್ತು ಇಂಡೋನೇಷ್ಯಾ ಇದಕ್ಕೆ ಹೊರತಲ್ಲ. ಕೃಷಿಕರು ತಲತಲಾಂತರದಿಂದ ಅನುಸರಿಸುತ್ತಾ ಬಂದ ಪದ್ಧತಿಯನ್ನು ಆ ದೇಶದಲ್ಲೂ ಪಾಲಿಸಲಾಗಿದೆ. ಇದನ್ನು ಸ್ಲಾಶ್‌ ಬರ್ನ್ (ಕಡಿ ಮತ್ತು ಸುಡು) ಎನ್ನಲಾಗುತ್ತದೆ. ಶತ ಶತಮಾನಗಳ ಹಿಂದೆ ಅರಣ್ಯ ಭೂಮಿಯನ್ನು, ಹುಲ್ಲುಗಾವಲುಗಳನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು, ಅರಣ್ಯವನ್ನು ಕಡಿದು ಉಳಿದದ್ದನ್ನು ಸುಟ್ಟು ಸಾಗುವಳಿಗೆ ಸಿದ್ಧಪಡಿಸುತ್ತಿದ್ದರು. ಇದೇ ಪದ್ಧತಿ ಜಗತ್ತಿನ ಎÇÉೆಡೆ ಇಂದಿಗೂ ಚಾಲ್ತಿಯಲ್ಲಿದೆ ಮತ್ತು ಇಂದು ಇದನ್ನು ಭೂಗಳ್ಳರು ಎಗ್ಗಿಲ್ಲದೆ ಪಾಲಿಸುತ್ತಿ¨ªಾರೆ ಎಂಬುದು ಬೇರೆ ಮಾತು. 

Advertisement

ಸಾವಿರಾರು ಅಗ್ನಿಪರ್ವತಗಳಿಂದಲೇ ಹುತ್ತಗಟ್ಟಿದ ದೇಶ ಈ ಇಂಡೋನೇಷ್ಯಾ! ಈ ದೇಶಕ್ಕೆ ಬೆಂಕಿಯೊಂದಿಗೆ ಸರಸವಾಡುವುದು ಹೊಸತೇನು? ಪ್ರತೀ ವರ್ಷವೂ ಅಲ್ಲಿನ ಪೂರ್ವ ಸುಮಾತ್ರದ ರಿಯವು ಪ್ರಾವಿನ್ಸ್‌ನಲ್ಲಿ, ದಕ್ಷಿಣ ಸುಮಾತ್ರದಲ್ಲಿ, ಇಂಡೋನೇಷಿಯನ್‌ ಬೊರಿ°ಯೋ ಮೇಲಿನ ಕಲಿಮಂಟನ್‌ನ ಕೆಲವು ಭಾಗಗಳಲ್ಲಿ ಈ ರೀತಿಯ ಬೇಸಾಯದ ಬೆಂಕಿ ಕಾಣಿಸುವುದು ಸರ್ವೇಸಾಮಾನ್ಯವಂತೆ! ಸಣ್ಣ ಹಿಡುವಳಿದಾರರಿಂದ ಹಿಡಿದು ಕೃಷಿಯನ್ನು ಅವಲಂಬಿಸಿದ ಕೈಗಾರಿಕೆ (ತಾಳೆ ಎಣ್ಣೆ, ಪಲ್ಪ್, ಹಾಗೂ ಕಾಗದ ತಯಾರಿಕೆ) ವರೆಗೆ ಎಲ್ಲರೂ ಅನುಸರಿಸುವ ವಿಧಾನ-ಕಡಿ ಮತ್ತು ಸುಡು. 

ಇದೊಂದು ವಿಷ ವರ್ತುಲ. ಹೀಗೆ ಸುಟ್ಟ ನೆಲ ಇನ್ನಷ್ಟು ಒಣಗಿರುತ್ತದೆ ಮತ್ತು ಇನ್ನೊಂದು ಬಾರಿ ಕಡಿದು ಸುಡಲು ಹೊರಟಾಗ ಬೆಂಕಿಯ ರುದ್ರ ನರ್ತನಕ್ಕೆ ಇನ್ನೂ ಉತ್ತಮ ವೇದಿಕೆಯಾಗುತ್ತದೆ ಆ ಒಣ ನೆಲ! ಮಾತ್ರವಲ್ಲ, ಅಲ್ಲಿ ಹಬ್ಬಿರುವ ಒಣ ಪಾಚಿಯ ಕಾರಣ, ಭೂಗರ್ಭದಲ್ಲಿ ತಿಂಗಳುಗಟ್ಟಲೆ ಕಾಲ ಆ ಬೆಂಕಿ ಜೀವಂತವಾಗಿರುತ್ತದೆ ಎನ್ನಲಾಗಿದೆ. ಭೂಗರ್ಭದಲ್ಲಿ ಎÇÉೋ ಒಂದೆಡೆ ಹರಡಿದ್ದು, ಇನ್ನೊಂದೆಡೆ ಭುಗಿಲೇಳುತ್ತದಂತೆ! ಹೀಗಾಗಿ ಅದನ್ನು ಆರಿಸುವುದು ಅಷ್ಟು ಸುಲಭವಲ್ಲ. ಹೀಗೆ ಆರಿಸಲು ಹೊರಟರೆ ಭಾರೀ ಪ್ರಮಾಣದ ನೀರು ಪೋಲಾಗುತ್ತದೆ ಎನ್ನುವುದು ಇನ್ನೊಂದು ಆತಂಕಕಾರಿ ಸಂಗತಿ.  

ಕೈಗಾರಿಕೆ ಅಂದರೆ ವಿಸ್ತರಣೆಯ ಮಹತ್ವಾಕಾಂಕ್ಷೆ, ಅದಕ್ಕಾಗಿ ಹೆಚ್ಚಿನ ಲಾಭದ ಗುರಿ ಇವೆÇÉಾ ಸಾಮಾನ್ಯ ಮತ್ತು ಮಾನ್ಯ ಅನಿಸುತ್ತದೆ. ಅಲ್ಲಿನ ತಾಳೆಎಣ್ಣೆ ಕೈಗಾರಿಕೆ ಇಲ್ಲಿಯವರೆಗೆ ಈ ರೀತಿ ನಾಶ ಮಾಡಿದ ಅರಣ್ಯ ಬರೋಬ್ಬರಿ 18 ದಶಲಕ್ಷ ಹೆಕ್ಟೇರ್‌ಎನ್ನಲಾಗಿದೆ! ಪಾಪ, ಅಲ್ಲಿನ ಜಗತøಸಿದ್ಧ ದೈತ್ಯ ಹಲ್ಲಿ (ಡ್ರಾಗನ್‌) ಗಳು, ಉರಾಂಗ್‌ ಉಟಾನ್‌ಗಳು “ಅರಣ್ಯ ಇದ್ದಷ್ಟೇ ಅಲೆದಾಡು’ ಎಂದು ರಾಜಿ ಮಾಡಿಕೊಂಡು ಜೀವಿಸುವಂತಾಯಿತು, ಈ ಕಾಡು-ಬಾಕರ ದೆಸೆಯಿಂದ! ಅಗ್ನಿಯ ಬೇಗೆಯಲ್ಲಿ ಇದ್ದ ಅಷ್ಟಿಷ್ಟು ಕಾಡು, ಜೊತೆಗೆ ಮಾನವೀಯತೆಯು ಬೆಂದು ಹೋಗಲು ಆ ಮೂಕಪ್ರಾಣಿಗಳು ತಾನೇ ಏನು ಮಾಡಬಲ್ಲುವು?      

ಹಾಗಿತ್ತು ಗೊಂಬೆಯಾಟಕ್ಕೆ ಹೆಸರಾದ ದೇಶದಲ್ಲಿ ವಿಧಿಯಾಟ! ತಾಳೆಎಣ್ಣೆ ಉತ್ಪಾದನೆಯಲ್ಲಿ ತೊಡಗಿರುವ ಬೃಹತ್‌ ಕೈಗಾರಿಕೆಯೊಂದು 2015ರಲ್ಲಿ ಈ ರೀತಿ ಇರುವುದನ್ನು ಕಡಿದು, ಉಳಿದದ್ದನ್ನು ಸುಡುತ್ತ ಸಾಗಿತು. ಆ ಬಾರಿ ಮಾತ್ರ ಬೆಂಕಿಯಲೆಗಳು ಛೆಂಗಿಸ್‌ ಖಾನ್‌ನಿಂದ ಸ್ಫೂರ್ತಿ ಪಡೆದ ಹಾಗೆ ಎÇÉೆಮೀರಿ ಸುತ್ತಮುತ್ತ ವ್ಯಾಪಿಸಿದವು. ಅದು ರಾಷ್ಟ್ರೀಯ ಉದ್ಯಾನವನಗಳನ್ನು ಸುಟ್ಟು ಹಾಕಿದ್ದು ಮಾತ್ರವಲ್ಲ, ರಕ್ಷಿತಾರಣ್ಯವನ್ನು ಕೂಡ ಬಿಡಲಿಲ್ಲ!

ಈ ಬೆಂಕಿಯಾಟ ಏನು ಹೊಸತೆ? ಯಾವಾಗಲೂ ಇದ್ದದೇ ಅಂದುಕೊಂಡು ತೆಪ್ಪಗಿದ್ದ ರಿಪಬ್ಲಿಕ್‌ ಆಫ್ ಇಂಡೋನೇಷ್ಯಾ ಸರಕಾರಕ್ಕೆ ಕೊನೆಗೂ ಅದರ ಬಿಸಿ ಮುಟ್ಟಿತು. ಕೆಲವು ವಾರ ಏಕಾಂಗಿಯಾಗಿ ಹೋರಾಡಿ ಸೋಲೊಪ್ಪಿಕೊಂಡ ಬಳಿಕ, ಆ ಬೆಂಕಿಯನ್ನು ಮಣಿಸಲು ಅದು ಅಕ್ಷರಶಃ ಸಮರೋಪಾದಿಯಲ್ಲಿ ಸನ್ನದ್ಧವಾಯಿತು.

ಮನುಕುಲದ ಮೇಲಿನ ಕ್ರೌರ್ಯ ಎಂಬ ಹಣೆಪಟ್ಟಿ ಹಚ್ಚಿಕೊಂಡ ಈ ಅಗ್ನಿ ತಾಂಡವವನ್ನು ಹತೋಟಿಗೆ ತರಲು, ತನ್ನ ಚರಿತ್ರೆಯÇÉೇ ಅತ್ಯಂತ ಬೃಹತ್‌ ಪ್ರಮಾಣದ ಮಿಷನ್‌ಗೆ ವಿದೇಶಿ ನೆರವಿನೊಂದಿಗೆ ಇಂಡೋನೇಷ್ಯಾ ಮುಂದಾಯಿತು. ಸಾವಿರಾರು ಸಂಖ್ಯೆಯಷ್ಟು ಸೇನಾಪಡೆ, ಫೈಟರ್‌ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಯುದ್ಧನೌಕೆಗಳು ಎಲ್ಲವೂ ತಾವೇ ಹುಟ್ಟಿಸಿದ ಈ ಭಸ್ಮಾಸುರನ ವಿರುದ್ಧದ, ಯುದ್ಧವಲ್ಲದ ಯುದ್ಧದಲ್ಲಿ ತೊಡಗಿದವು. ಸಿಂಗಾಪುರ್‌, ಆಸ್ಟ್ರೇಲಿಯಾ ಮತ್ತು ಜಪಾನ್‌ ದೇಶಗಳು ಕೂಡ ವಿಮಾನಗಳು, ಅಗ್ನಿಶಾಮಕ ರಾಸಾಯನಿಕಗಳು ಹಾಗೂ ತಜ್ಞರನ್ನು ರವಾನಿಸಿ ಇಂಡೋನೇಷ್ಯಾದ ನೆರವಿಗೆ ಧಾವಿಸಿದವು. 
 

ಒಟ್ಟು 35 ದಳ್ಳುರಿಗಳನ್ನು ಅಲ್ಲಲ್ಲಿ ಹಾಗೂ ಹೀಗೂ ನಂದಿಸಿ¨ªಾಯಿತು. ಅದು ಮತ್ತೂ ಮತ್ತೂ ಭುಗಿಲೇಳುತ್ತಲೇ ಇತ್ತು ಎನ್ನುವುದು ಬೇರೆ ಮಾತು! 

ಧೂಮಕ್ಕೆ ದೇಶ-ಭಾಷೆಗಳ ಗಡಿಯಿಲ್ಲ !
ಹೊಗೆಗೆ ದೇಶ, ಭಾಷೆ, ಜನಾಂಗಗಳ ಗಡಿ ಇಲ್ಲವಷ್ಟೆ? ಅದು ನೆರೆ ರಾಷ್ಟ್ರಗಳಾದ ಮಲೇಷ್ಯಾ, ಸಿಂಗಾಪುರ ಹಾಗೂ ಥೈಲಾಂಡ್‌ವರೆಗೆ ವ್ಯಾಪಿಸಿತು ಮತ್ತು ಅಲ್ಲೂ ಸಾವಿರಾರು ಮಂದಿ ಉಸಿರಾಟದ ತೊಂದರೆಗೆ ವೈದ್ಯಕೀಯ ನೆರವು ಪಡೆಯುವಂತಾಯಿತು. ಅಂತೂ ಈ ದಟ್ಟ ಹಾಗೂ ಸಾಂದ್ರ ಹೊಗೆ ಆಗ್ನೇಯ ದೇಶಗಳ ಉಸಿರು ಕಟ್ಟಿಸಿತು.
ಹೊಗೆಯಿಂದ ಕೂಡಿದ ಈ ಮಬ್ಬು (ಹೇಜ‚…)ವಿನಿಂದಾಗಿ ಅಲ್ಲಿ ವಿಮಾನಯಾನ ವನ್ನು ಸ್ಥಗಿತಗೊಳಿಸಲಾಯಿತು. ಶಾಲೆಗಳಿಗೆ ರಜೆ ಸಾರಲಾಯಿತು. ಸಭೆ-ಸಮಾರಂಭಗಳು ರ¨ªಾದವು. ಉಸಿರಾಟದ ಸೋಂಕಿನ ಪ್ರಕರಣಗಳು ಐದು ಲಕ್ಷದ ಗಡಿ ದಾಟಿದವು. 

ಮಾಲಿನ್ಯ ಮಾನದಂಡ ಸೂಚ್ಯಂಕ (Pollution Standard Index  ಪಿಎಸ್‌ ಐ) ವನ್ನು 300ರವರೆಗೆ ಸುರಕ್ಷಿತ ಎಂದು ಬಗೆಯಲಾಗುತ್ತದೆ. ಅಲ್ಲಿ ಈ ಧೂಮ ಕಾಂಡ ಶುರುವಾದ ಮೇಲೆ ಅದು ತಲುಪಿದ್ದು 2000ದ ಗೆರೆ! ಉಸಿರಾಟದ ತೀವ್ರ ಸೋಂಕಿನ ಪ್ರಕರಣಗಳು ಸರಿಪಡಿಸಲಾಗದಷ್ಟು ಹದಗೆಟ್ಟಿದ್ದವು! ಹೊಗೆ ಮಾತ್ರವಲ್ಲ, ಪಿ ಎಮ್‌ (ಪರ್ಟಿಕ್ಯೂಲೆಟ್‌ ಮ್ಯಾಟರ್‌) 2.5 ಎಂದು ಗುರುತಿಸಲಾದ ಮಾಲಿನ್ಯಕಾರಕ ಅತಿ ಸೂಕ್ಷ್ಮಕಣಗಳು ಅತ್ಯಂತ ಅಪಾಯಕಾರಿಯಾಗಿದ್ದು, ಇವು ಶ್ವಾಸಕೋಶದ ಆಳಕ್ಕೆ ಇಳಿದು ಉಸಿರಾಟದ ಕಾಯಿಲೆ ಉಂಟುಮಾಡಬಲ್ಲವು ಮತ್ತು ಶ್ವಾಸಕೋಶಕ್ಕೆ ಹಾನಿ ಮಾಡಬಲ್ಲವು. ಸಿಂಗಾಪುರ್‌ನ ಅಧಿಕಾರಿಗಳು ಈ ಕಣಗಳನ್ನು ಸೋಸಬಲ್ಲ ವಿಶೇಷ ಮಾಸ್ಕ್ಗಳನ್ನು ಧರಿಸುವಂತೆ ಅಲ್ಲಿನ ನಿವಾಸಿಗಳಿಗೆ ಸಲಹೆ ನೀಡಿದರು.

ಯುಎಸ್‌ ಮೂಲದ ಪರಿಸರ ಸಂಶೋಧನಾ ಸಂಸ್ಥೆ “ವರ್ಲ್ಡ್ ರಿಸೋರ್ಸ್‌ ಇನ್ಸ್ಟಿಟ್ಯೂಟ್‌’ ಪ್ರಕಾರ, ಅಮೆರಿಕದ ಇಡೀ ಆರ್ಥಿಕತೆ ಪ್ರತಿದಿನ ಹೊರಸೂಸುವ ಸರಾಸರಿ ವಾಯುಮಾಲಿನ್ಯವನ್ನು ಇಂಡೋನೇಷ್ಯಾದ ಈ ಹೊಗೆ ಮೀರಿಸಿದೆಯಂತೆ!  ಬಾಹ್ಯಾಕಾಶದಿಂದ ವೀಕ್ಷಿಸಿದರೆ ನಾಸಾಗೆ ಈ ಧೂಮಲೀಲೆ ಒಂದು ದೊಡ್ಡ ಪದರದಂತೆ ಕಾಣುತ್ತಿತ್ತಂತೆ! 

ಎಎಫ್ಪಿ 2016ರ ಸೆಪ್ಟೆಂಬರ್‌ 20ರಂದು ಒಂದು ಆತಂಕಕಾರಿ ವರದಿಯನ್ನು ಪ್ರಕಟಿಸಿದೆ. ಅದರಂತೆ ಈ ಮಹಾಮಾರಿ ಮಬ್ಬು , ಸುಮಾರು ಒಂದು ಲಕ್ಷ ಅಕಾಲಿಕ ಮರಣಗಳಿಗೆ ಕಾರಣವಾಗಿದೆ. 

ಹೊಣೆಗೇಡಿತನ, ಉಡಾಫೆ, ಅದು ತಂದ ದುರಂತ, ಕರುಣಿಸಿದ ಮಾಲಿನ್ಯ, ನಾಶ-ನಷ್ಟದ ಕತೆ ಹೀಗಿದೆಯಾದರೆ ಅದಕ್ಕೆ ಕಾರಣರಾದವರನ್ನು ಗುರುತಿಸಿ ಶಿಕ್ಷಿಸಿದ ಪರಿ ಇನ್ನೊಂದು. ಇಲ್ಲಿ ಎಲ್ಲವೂ ಗೋಜಲು ಗೋಜಲು. ಈ ದುರಂತದ ಹಿಂದಿರುವ ಯಾರನ್ನೂ ಬಂಧಿಸಿ ಜೈಲಿಗಟ್ಟಿದ ವರದಿಗಳಂತೂ ಎಲ್ಲೂ ಸ್ಪಷ್ಟವಾಗಿ ದಾಖಲಾಗಿಲ್ಲ.

ಒಂದು ವರದಿಯಂತೆ ಹಲವು ವರ್ಷಗಳಿಂದ ಅಲ್ಲಿನ ಸರ್ಕಾರವು ನೀಡುತ್ತ ಬಂದ ಭರವಸೆ ಅನುಸರಿಸಿ ಅಧ್ಯಕ್ಷರ ಉಸ್ತುವಾರಿಯಲ್ಲಿ ಕೊನೆಗೂ ನೇಮಿಸಿದ ಜಾರಿ ಸಮಿತಿ 10 ಕಂಪೆನಿಗಳನ್ನು ಸಂಶಯಿತ ಆರೋಪಿಗಳು ಎಂದು ಹೆಸರಿಸಿತು ಮತ್ತು 100 ಮಂದಿಯನ್ನು ತನಿಖೆಗೆ ಒಳಪಡಿಸಿತು. 2002ರÇÉೇ ಆಗ್ನೇಯ ಏಷ್ಯಾದ ಎÇÉಾ ದೇಶಗಳು, ಹೆಚ್ಚಿನ ಉಸ್ತುವಾರಿ ಮತ್ತು ಸುರಕ್ಷಿತ ಅಭಿವೃದ್ಧಿಗೆ ಇಂಬು ನೀಡಿ, ಈ ಸಮಸ್ಯೆಯನ್ನು ಪರಿಹರಿಸಲು ಒಂದು ಒಡಂಬಡಿಕೆಗೆ ಸಹಿಹಾಕಿದವು. ಸಹಿ ಹಾಕುವುದರಲ್ಲಿ ತೋರಿದ ಉತ್ಸಾಹ ಅದನ್ನು ಕಾರ್ಯಗತಗೊಳಿಸುವುದರಲ್ಲಿ ಇಲ್ಲದಾಯಿತು.

ಸುಮ್ಮನಲ್ಲ, ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ  ಇಂಡೋನೇಷ್ಯಾದ ಅಧ್ಯಕ್ಷ ಈ ಹೊಗೆಯನ್ನು ಮಣಿಸಲು, “ನಮ್ಮ ದೇಶಕ್ಕೆ ಕಡೇಪಕ್ಷ ಮೂರು ವರ್ಷ ತಗಲಬಹುದು, ಅಷ್ಟೊಂದು ಬೇಗನೆ ಪರಿಹಾರವಾಗಬಲ್ಲ ಸಮಸ್ಯೆ ಇದಲ್ಲ’ ಅಂದದ್ದು. 

ಕೆಲವು ಪ್ರಶ್ನೆಗಳು
ಈ ದಾರುಣ ಧೂಮಕಾಂಡದಿಂದ ಬೇಸತ್ತು ಹೋದ ನೆರೆಯ ರಾಷ್ಟ್ರಗಳು ಯಾಕೆ ತೆಪ್ಪಗಿವೆ? ಅವುಗಳು ಇಂಡೋನೇಷ್ಯಾಕ್ಕೆ ಎಚ್ಚರಿಕೆ ನೀಡಿಲ್ಲವೆ? ಹೋಗಲಿ, ಸ್ವತ್ಛತೆ, ನೈರ್ಮಲ್ಯಕ್ಕೆ ಹೆಸರುವಾಸಿಯಾದ ಸಿಂಗಾಪುರ ಸುಮ್ಮನಿದ್ದುದೇಕೆ? ಇತ್ಯಾದಿ ಪ್ರಶ್ನೆಗಳು ಏಳುವುದು ಸಹಜ. 

ಆದರೆ, ಇಂಡೋನೇಷ್ಯಾ ಹಾಗೂ ಅಲ್ಲಿನ ಪರಿಸರವಾದಿಗಳು ಹೇಳುವ ಕಥೆಯೇ ಬೇರೆ. ಸ್ವಾರಸ್ಯವಿರುವುದು ಅÇÉೇ! ಅವರನ್ನುತ್ತಾರೆ, ಇಡೀ ಆರೋಪ ನಮ್ಮ ಮೇಲೆ ಹೊರಿಸುವುದಲ್ಲ. ಏಕೆಂದರೆ, ಹೀಗೆ ಕಾನೂನುಬಾಹಿರವಾದ ಸುಡುವಿಕೆಯಲ್ಲಿ ನಿರತವಾಗಿರುವ ಕೆಲವು ಕಂಪೆನಿಗಳ ಹೂಡಿಕೆದಾರರು ಮಲೇಷ್ಯಾ ಹಾಗೂ ಸಿಂಗಾಪುರದವರು!

ಇನ್ನು ಈ ಹೂಡಿಕೆದಾರರೊಂದಿಗೆ ಸರ್ಕಾರಗಳಿಗೆ ಅಪವಿತ್ರ ಮೈತ್ರಿ ಇದ್ದಲ್ಲಿ, ಆ ಸರ್ಕಾರಗಳ ಕೈಕಟ್ಟಿ ಹಾಕಿದಂತಾಗದೆ? ಕೋಟಿ ಕೋಟಿ ಡಾಲರ್‌ ವ್ಯವಹಾರಗಳಲ್ಲಿ ಮುಳುಗಿರುವವರಿಗೆ ಹೊಗೆಯಂಥ ಕ್ಷುಲ್ಲಕ ವಿಷಯಗಳಿಗೆ ಮೀಸಲಿಡಲು ಸಮಯವೆಲ್ಲಿದೆ, ವ್ಯವಧಾನವೆಲ್ಲಿದೆ?

 ಸಿಂಗಾಪುರ ತೆಪ್ಪಗೆ ಕುಳಿತಿತ್ತು ಎನ್ನುವಂತೆಯೂ ಇಲ್ಲ. ಅದು 2014ರಲ್ಲಿಯೇ ಈ ಬಗ್ಗೆ ಕಾನೂನು ಜಾರಿಗೊಳಿಸಿತ್ತು ಎನ್ನಲಾಗಿದೆ. ಈ ಕಾನೂನಿನಂತೆ, ಇಂಥ ಹೊಗೆಗೆ ಕಾರಣವಾಗುವ ವ್ಯಕ್ತಿ ಹಾಗೂ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕು ಸರಕಾರಕ್ಕೆ ಇದೆ. ಮಾತ್ರವಲ್ಲ , ಕೆಲವು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ಅದು ಮುಂದಾಗಿತ್ತು ಕೂಡಾ! ಇದು ಸತ್ಯವೇ ಆಗಿದ್ದಲ್ಲಿ, 2015ರಲ್ಲಿ ಈ ಹೊಗೆ ಹೀಗೇ ಭೂತಾಕಾರವಾಗಿ ಕಾಡಿದ್ದರ ಹಿಂದಿರುವ ರಹಸ್ಯವೇನು? ಸರಕಾರಗಳ ಕಣ್ಣಿಗೆ ಕತ್ತಲೆ ಬರಿಸಿದ್ದು ಯಾವ ಹೊಗೆ?
ಈ ಕಾನೂನು ಅಕ್ಷರವಾಗಿ ಉಳಿಯಿತು, ಅನುಷ್ಠಾನದಲ್ಲಿ ಅಲ್ಲ ಎನ್ನದೆ ವಿಧಿಯಿಲ್ಲ!

ಇಂಡೋನೇಷ್ಯಾದಲ್ಲಿ  ಏÇÉೋ ಹುಟ್ಟಿ ಮರೆಯಾದ ಹೊಗೆಯ ಉಸಾಬರಿ ಇಂಡಿಯನ್ನರಾದ ನಮಗೇಕೆ ಅನಿಸುವುದು ಸಹಜ. ಆದರೆ ನಮ್ಮನ್ನು ಆಘಾತಕ್ಕೆ ಈಡುಮಾಡುವಂಥ ವಿಷಯವೊಂದು ಇದಕ್ಕೆ ಸಂಬಂಧಿಸಿದಂತೆ ಬೆಳಕಿಗೆ ಬಂದಿದೆ ಮತ್ತು ಇದು ಪ್ರಕಟವಾದದ್ದು “ದ ಇಂಟರ್‌ನ್ಯಾಷನಲ್‌ ನ್ಯೂಯಾರ್ಕ್‌ ಟೈಮ್ಸ್‌’ನಲ್ಲಿ ಎನ್ನವುದು ಅಷ್ಟೇ ಆತಂಕಕಾರಿ ಕೂಡಾ.

ನಮ್ಮ ದೇಶದ ರಾಜಧಾನಿ ದೆಹಲಿ ಮಾಡುವ ರಾಜಕೀಯ ಮಾಲಿನ್ಯ ನಮಗೆಲ್ಲ ಗೊತ್ತೇ ಇದೆ. ಇದಲ್ಲದೆ ವಾಯುಮಾಲಿನ್ಯದಲ್ಲಿ ವಿಶ್ವದಾಖಲೆ ಮಾಡಿದ ಹೆಗ್ಗಳಿಕೆ ಇದೆ ಈ ನಗರಕ್ಕೆ.

ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದಂತೆ ವಿಶ್ವದ ಅತ್ಯಂತ ಮಲಿನ ನಗರಗಳಲ್ಲಿ ದೆಹಲಿಗೆ ಎರಡನೇ ಸ್ಥಾನ. ಅಧಿಕಾರದ ಗದ್ದುಗೆ ಏರಿದಾಗ ಮೊದಲಿಗೆ ಆಮ್‌ ಆದ್ಮಿ ಸರ್ಕಾರವನ್ನು ಕಾಡಿದ ಸಮಸ್ಯೆಗಳಲ್ಲಿ ಇದೂ ಒಂದು. ಸಮ ಸಂಖ್ಯೆ ವಾಹನಗಳಿಗೆ ಒಂದು ದಿನ, ಬೆಸ ಸಂಖ್ಯೆ ವಾಹನಗಳಿಗೆ ಅದರ ಮರುದಿನ ಎಂಬಂಥ ಕ್ರಿಯೇಟಿವ್‌ ಐಡಿಯಾಗಳಿಗೂ ಈ ಧೂಮ ಇಂಬು ನೀಡಿತು. ಆದರೆ ದೆಹಲಿಯ ಮಾಲಿನ್ಯ ಇದ್ಯಾವುದಕ್ಕೂ ಜಗ್ಗಲಿಲ್ಲ. ಏಕೆಂದರೆ ಅಲ್ಲಿ ವಾಹನ, ಕೈಗಾರಿಕೆಗಳ ಮಾಲಿನ್ಯದ ಜೊತೆ ಸದ್ದಿಲ್ಲದೆ ಕೈಜೋಡಿಸಿತ್ತು ನೆರೆಯ ರಾಜ್ಯಗಳ ರೈತರ ಕೊಡುಗೆ! ಅದು ಬಯಲಾದದ್ದು  2016ರ ದೀಪಾವಳಿಯ ಸಮಯದಲ್ಲಿ.

ದೆಹಲಿಯ ನೆರೆಯ ರಾಜ್ಯಗಳಾದ ಪಂಜಾಬ್‌ ಹಾಗೂ ಹರಿಯಾಣದ ರೈತರು ಸಾಮಾನ್ಯವಾಗಿ ಚಳಿಗಾಲದಲ್ಲಿ ಗೋಧಿ ಉಳುಮೆಗೆ ಸಜ್ಜಾಗುತ್ತಾರೆ ಮತ್ತು ಇದಕ್ಕಾಗಿ ಈಗಾಗಲೇ ಭತ್ತದ ಬೆಳೆ ತೆಗೆದು ಕಟಾವು ಮಾಡಿದ ಗ¨ªೆಗಳನ್ನು ಸಿದ್ಧಪಡಿಸುತ್ತಾರೆ. ಹೊಲವನ್ನು ಆವರಿಸಿರುವ ನಿಷ್ಪ್ರಯೋಜಕ ಒಣ ಹುಲ್ಲನ್ನು ಕೀಳಲು ಅವರು ಕೂಡ ಇಂಡೋನೇಷ್ಯಾದ ರೈತರ ಕ್ರಮವನ್ನೇ ಅನುಸರಿಸುವುದು-ಕಡಿ ಮತ್ತು ಸುಡು ಪದ್ಧತಿಯನ್ನು! ಈ ಪದ್ಧತಿ ಎಷ್ಟೊಂದು ಸಾರ್ವತ್ರಿಕ ಅನ್ನುವುದಕ್ಕೆ ಇದೊಂದು ಉದಾಹರಣೆ ಸಾಕು! 

ಆದರೆ, ಈ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ವರುಷದ ಹಿಂದೆಯೇ ಎಚ್ಚರಿಕೆ ನೀಡಿತ್ತು ಎನ್ನುವುದು ಗಮನಾರ್ಹ. ರೈತರು ಈ ರೀತಿ ಭತ್ತದ ಒಣಹುಲ್ಲಿಗೆ ಬೆಂಕಿಯಿಕ್ಕುವುದನ್ನು ತಡೆಯಿರಿ ಎಂದು ಅದು ಸರ್ಕಾರಕ್ಕೆ ತಾಕೀತು ಮಾಡಿತ್ತಾದರೂ ರೈತರು ಯಾರ ಮಾತಿಗೂ ಕಿವಿಗೊಡಲಿಲ್ಲ. ಇದಕ್ಕೆ ಸಾಕ್ಷಿಯಾಯಿತು, ನಾಸಾದ ಉಪಗ್ರಹ ಪತ್ತೆ ಹಚ್ಚಿದ ದಟ್ಟಹೊಗೆ ಸೂಸುವ ಭೂಭಾಗ. ಅವರು ಸುಟ್ಟು ಭಸ್ಮ ಮಾಡಿದ್ದು ಅಂದಾಜು 3.2 ಕೋಟಿ ಟನ್‌ ಒಣಹುಲ್ಲನ್ನು-ಹೀಗಿರುವಾಗ ಹೊರಹೊಮ್ಮುವ ಹೊಗೆ ಎಷ್ಟಿರಬೇಡ? ನವದೆಹಲಿಯ ಚಳಿಗಾಲದಲ್ಲಿ ತಲೆದೋರುವ ಒಟ್ಟು ವಾಯುಮಾಲಿನ್ಯದಲ್ಲಿ, ಉತ್ತರಭಾರತದ ಈ ಹೊಲಗಳಿಂದ ಅಲ್ಲಿ ತಲುಪುವ ಈ ಅಪಾಯಕಾರಿ ಹೊಗೆಯ ಪಾಲು ಸುಮಾರು ಕಾಲು ಭಾಗದಷ್ಟು ಎನ್ನಲಾಗಿದೆ. (ಇದು ಗಾಳಿಯ ದಿಕ್ಕು ಹಾಗೂ ಬಲವನ್ನು ಅವಲಂಬಿಸಿದೆ ಎನ್ನುವುದನ್ನೂ ಪರಿಗಣಿಸಬೇಕು) ಆ ಹೊಗೆಯಲ್ಲಿ ದಟ್ಟವಾಗಿರುವ ಮಾರಕ 2.5 ಪಿಎಮ್‌ ಕಣಗಳು ದೆಹಲಿ ತನಕ ವ್ಯಾಪಿಸಿ ಅಲ್ಲಿನ ಪರಿಸರವನ್ನು ಹಾನಿ ಮಾಡುತ್ತವೆ. ಅಲ್ಲಿನವರ ಪುಪ್ಪುಸ ಸೇರುತ್ತವೆ. ಆ ದಿನಗಳಲ್ಲಿ ಒಂದು ರಾತ್ರೆ ದೆಹಲಿಯ ಆಸುಪಾಸಿನಲ್ಲಿ ಇಂತಹ ಕಣಗಳ ಸಾಂದ್ರತೆ ಒಂದು ಘನ ಮೀಟರ್‌ನಲ್ಲಿ 688 ಮೈಕ್ರೋ ಗ್ರಾಂ ತಲುಪಿತ್ತು.

ಇದು ಕೇಂದ್ರ ಸರ್ಕಾರ ನಿಗದಿಪಡಿಸಿದ ಆರೋಗ್ಯಕರ ಮಿತಿಗಿಂತ 10 ಪಟ್ಟು ಹೆಚ್ಚು ಎನ್ನುತ್ತದೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ವೆಬ್‌ಸೈಟ್‌. ದೆಹಲಿಯ ಆಸುಪಾಸಿನಲ್ಲಿ ದೊರೆತ ಅಂಕಿ ಅಂಶಗಳೆಲ್ಲವೂ ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕಿಂತ 4 ಪಟ್ಟು ಹೆಚ್ಚಿರುವುದನ್ನು ಸೂಚಿಸುತ್ತಿದ್ದವು. ಭಾರತ ನಿಗದಿಪಡಿಸಿದ ಮಾನದಂಡಗಳು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ್ದಕ್ಕಿಂತ ಸಡಿಲಾಗಿವೆಯಂತೆ. ಅಂದರೆ ಈ ಮಾಲಿನ್ಯದ ನಿಜವಾದ ಮಟ್ಟ ಊಹಾತೀತ ಅನ್ನಬಹುದು!   

ತಿಳಿಯದ ವಿಚಾರವೇನಲ್ಲ
ಈ ರೀತಿ ಹೊಗೆಯೆಬ್ಬಿಸುವುದು ಪರಿಸರಕ್ಕೆ ಮಾರಕವಾಗಬಲ್ಲುದು ಎಂಬುದು ಅಲ್ಲಿನ ರೈತರಿಗೆ ತಿಳಿದಿಲ್ಲವೆ? ತಿಳಿದಿದೆ! ಮಾತ್ರವಲ್ಲ ಪರ್ಯಾಯ ವಿಧಾನಗಳನ್ನು ಬಳಸಲು ತಾವೇನೋ ಸಿದ್ಧ. ಆದರೆ ಅದು ತಮ್ಮ ಕೈಗೆಟಕುವಂತಹುದಲ್ಲ  ಅನ್ನುತ್ತಾರೆ ಅವರು. ಅವರ ವಾದದಲ್ಲಿ ಹುರುಳಿದೆ. ಹೊಸ ತಂತ್ರಜ್ಞಾನವನ್ನು ನಾವು ಅಳವಡಿಸಿ ನೋಡಿದ್ದೇವೆ. ಅದರ ಬೆಲೆಯನ್ನು ನಾವೇ ಕೈಯ್ನಾರೆ ಪಾವತಿಸುವುದು ಅಸಾಧ್ಯ ಎಂದು ಮನಗಂಡಿದ್ದೇವೆ ಅನ್ನುತ್ತಾನೆ ಜಸ್ವಂತ್‌ ಸಿಂಗ್‌ ಎಂಬ ಕೃಷಿಕ. ಹೆಚ್ಚಿನವರು, ಸುಡುವುದಲ್ಲದೆ ಇನ್ಯಾವುದೇ ಅನ್ಯವಿಧಾನ ತಮಗೆ ತಿಳಿಯದು ಎಂದು ಕೈ ಚೆಲ್ಲುತ್ತಾರೆ. 

ಅಂದ ಹಾಗೆ ಸರ್ಕಾರ ಪ್ರೊತ್ಸಾಹಿಸಿರುವ ಪರ್ಯಾಯ ವಿಧಾನದ ಹೆಸರು ಅನ್ವರ್ಥ ನಾಮದಂತಿದ್ದು ಭಾರತದ ರೈತರ ದುಸ್ಥಿತಿಯನ್ನು ಗೇಲಿ ಮಾಡಿದಂತಿದೆ. ಏಕೆಂದರೆ ಅದರ ಹೆಸರು ಹ್ಯಾಪಿ ಸೀಡರ್‌ (ಬಿತ್ತನೆ ಯಂತ್ರ) ಮತ್ತು ಅದು ಅವರ ಬಾಳಲ್ಲಿ ವಿಶೇಷ ಸಂತಸವನ್ನು ಬಿತ್ತಲಿಲ್ಲ ಎನ್ನುವುದು ಒಂದು ವಿಪರ್ಯಾಸ. ಸುಮಾರು 1,22,000 ರೂಪಾಯಿ  ಬೆಲೆಬಾಳುವ ಈ ಹ್ಯಾಪಿ ಹೆಸರಿನ ಯಂತ್ರ ರೈತರ ಪಾಲಿಗೆ, ಸಂತಸ ಅನ್ನುವುದು ಹೇಗೋ ಹಾಗೆ, ಬರೀ ಗಗನ ಕುಸುಮ! ಇದು ಒಟ್ಟಾರೆ ಭತ್ತದ ಇಳುವರಿಯಿಂದ ಅವರು ಪಡೆವ ಆದಾಯಕ್ಕೆ ಸಮಾನವಂತೆ. ಹೀಗಿರುವಾಗ ಹ್ಯಾಪಿ ಖರೀದಿಸುವುದು ಕನಸಿನ ಮಾತಷ್ಟೆ!

ದೀಪಾವಳಿ ಬಂದು, ಮಾಲಿನ್ಯವನ್ನು ಬಿಟ್ಟು ಹೋಗಿದೆ. ಜೊತೆಯಲ್ಲಿ, ಕ್ಯಾಲಿಫೋರ್ನಿಯಾ, ಪೋರ್ಚುಗಲ್‌ ಹಾಗೂ ಸ್ಪೇನ್‌ನಲ್ಲಿ ಕಾಳಿYಚ್ಚು ಮಾಡಿರುವ ಹಾವಳಿಯ ಸುದ್ದಿಯೂ ಬೆಳಕಿಗೆ ಬಂದಿದೆ. ಈ ಬಾರಿ ಭಾರತದಲ್ಲಿ ಸುರಿದ ವರ್ಷಧಾರೆ, ಅಮೆರಿಕದಲ್ಲಿ ಚಂಡಮಾರುತ ತಂದ ಆಪತ್ತು ಮುಂಬರುವ ಹವಾಮಾನ ವೈಪರೀತ್ಯಕ್ಕೆ ಪೀಠಿಕೆಯಂತಿದೆ.
ಚಳಿಗಾಲದ ಜೊತೆಯಲ್ಲಿ ದಿಲ್ಲಿಯ ಹೊಗೆಯ ತಾಂಡವದ ಸುದ್ದಿ ಎಲ್ಲರನ್ನು ಕಂಗೆಡಿಸಿದೆ. ನಿಸ್ಸಹಾಯಕರಾದ ರೈತರು ಒಣಹುಲ್ಲಿಗೆ ಬೆಂಕಿಯಿಕ್ಕುವ ವಿಷಯ ಮತ್ತೆ ಎಲ್ಲರ ಗಮನ ಸೆಳೆದಿದೆ.   

ಜಾಗತಿಕ ತಾಪಮಾನದ ಬೇಗೆಗೆ, ಬಿರುಸಿಗೆ ಬಾರೀ ಗಾತ್ರದ ಮಂಜುಗಡ್ಡೆಗಳು ಕರಗುತ್ತಿವೆ. ಚಲಿಸುತ್ತಿವೆ. ಕಲ್ಲು ಬಂಡೆಯಂತಾಗಿರುವ ಮಾನವ ಮನಸ್ಸುಗಳು…. ಹಾಗೇ ಇವೆ.

– ಸತ್ಯಕಾಮ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next