Advertisement
10 ಲಕ್ಷ ರೂ. ನಷ್ಟ ಅಂದಾಜುಬೆಂಕಿ ಅವಘಡದಿಂದಾಗಿ ಸರ್ವರ್ ರೂಮ್ ಸಂಪೂರ್ಣ ಸುಟ್ಟುಕರಕಲಾಗಿದೆ. ಸುಮಾರು 10 ಲಕ್ಷ ರೂ. ಮೌಲ್ಯದ ಸೊತ್ತು ನಷ್ಟ ಅಂದಾಜಿಸಲಾಗಿದೆ.
ಬ್ಯಾಂಕ್‌ನ ಕಟ್ಟಡದಲ್ಲಿ ಬೆಂಕಿ ಕಂಡು ಬಂದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದರು. ತುರ್ತಾಗಿ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸ್ಥಳೀಯರು ಸಮಯ ಪ್ರಜ್ಞೆ ಮೆರೆದು ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಬ್ಯಾಂಕ್‌ನ ಎಜಿಎಂ ಕೆ. ಶ್ಯಾಮ್‌ಪ್ರಸಾದ್ ಶ್ಯಾನುಭೋಗ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ, ಹಾನಿ ಪರಿಶೀಲನೆ ನಡೆಸಿದೆ. ಎಲ್ಲಾ ವ್ಯವಸ್ಥೆಗಳನ್ನೂ ಶೀಘ್ರದಲ್ಲಿ ಸರಿಪಡಿಸಿ ಗ್ರಾಹಕರ ಸೇವೆಗೆ ಸನ್ನದ್ಧಗೊಳಿಸುವಂತೆ ಶಾಖಾಧಿಕಾರಿ ಮತ್ತು ಸಿಬಂದಿಗಳಿಗೆ ಸೂಚನೆ ನೀಡಿದ್ದಾರೆ.
Related Articles
ಬೆಂಕಿ ಅವಘಡದಿಂದ ಬ್ಯಾಂಕ್‌ನಲ್ಲಿರುವ ದಾಖಲೆ ಪತ್ರಗಳಿಗಾಗಲೀ, ಲಾಕರ್‌ಗಾಗಲೀ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಗ್ರಾಹಕರು ಯಾವುದೇ ಕಾರಣಕ್ಕೂ ಆತಂಕಿತರಾಗಬೇಕಿಲ್ಲ ಎಂದು ಶಾಖಾ ಪ್ರಬಂಧಕ ಅಂಕುರ್ ಕುಮಾರ್ ತಿಳಿಸಿದ್ದಾರೆ.
Advertisement