Advertisement
ಕನ್ಯಾಡಿಯ ವಿನಾಯಕ ಇಂಡಸ್ಟ್ರೀಸ್‌ನ ಘಟಕದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವಘಡ ಸಂಭವಿಸಿತ್ತು. ಘಟಕದ ಬಾಯ್ಲರ್‌ನಿಂದ ಹಾರಿದ ಕಿಡಿಯು ಸ್ಥಳದಲ್ಲಿದ್ದ ಮರದ ತ್ಯಾಜ್ಯಕ್ಕೆ ತಗಲಿದ ಪರಿಣಾಮ ತ್ಯಾಜ್ಯ ಸುಟ್ಟು ಸಮೀಪದ ಅರಣ್ಯ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿತು. ಬೆಂಕಿ ನಂದಿಸಲು ಅಗ್ನಿಶಾಮಕ ತಂಡ ಹರಸಾಹಸ ಪಟ್ಟಿದ್ದು, ಮರದ ತ್ಯಾಜ್ಯ ಹಾಗೂ ಕಡ್ಡಿ ಸುಟ್ಟು ಹೋಗಿವೆ. ಸುಮಾರು ಎರಡು ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಕರಟಿದೆ.
ಸಂಬಂಧಿಯೊಬ್ಬರ ಸಾವಿನ ಕಾರಣದಿಂದ ಫ್ಯಾಕ್ಟರಿಗೆ ರಜೆ ಘೋಷಿಸಿದ್ದ ಮಾಲಕರು ಕೇರಳಕ್ಕೆ ತೆರಳಿದ್ದರು. ಬೆಳ್ತಂಗಡಿಯಲ್ಲಿ ಬುಧವಾರ 43 ಡಿಗ್ರಿ ಸೆಲಿÏಯಸ್ ತಾಪಮಾನವಿದ್ದುದು ಹಾಗೂ ಫ್ಯಾಕ್ಟರಿಯಲ್ಲಿ ಫೈರ್ ಆ್ಯಂಡ್ ಸೇಫ್ಟಿ ವ್ಯವಸ್ಥೆಯೂ ಇಲ್ಲದುದು ಬೆಂಕಿಯ ತೀವ್ರತೆಗೆ ಕಾರಣವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿ ನಂದಿಸಲು ಸ್ಥಳೀಯರೂ ಶ್ರಮಿಸಿದ್ದಾರೆ. ಸಮೀಪದಲ್ಲೇ ಇತ್ತು ಗ್ಯಾಸ್‌ಬಂಕ್
ದುರಂತ ಸಂಭವಿಸಿದ ಪ್ರದೇಶದ ಸಮೀಪದಲ್ಲೇ ಗ್ಯಾಸ್‌ಬಂಕ್ ಇದ್ದುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಅಗ್ನಿ ಶಾಮಕ ವಾಹನದಲ್ಲಿ ನೀರು ಖಾಲಿಯಾದಾಗ ಸ್ಥಳೀಯ ಪವಿತ್ರ ಕನ್‌ಸ್ಟ್ರಕ್ಷನ್‌ನವ ರು 2 ಟ್ಯಾಂಕರ್ ನಲ್ಲಿ 12 ಸಾ.ಲೀ. ನೀರು ಒದಗಿ ಸಿದರು. ಸಂಜೆ 5 ಗಂಟೆ ರವರೆಗೂ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿತ್ತು.