Advertisement

ಬಂಡೀಪುರ ಆಯ್ತು;ಈಗ ರಾಜ್ಯದ ಹಲವು ಅರಣ್ಯಗಳಲ್ಲಿ ಬೆಂಕಿ, ಬೆಂಕಿ, ಬೆಂಕಿ

09:05 AM Feb 25, 2019 | Sharanya Alva |

ಬೆಂಗಳೂರು/ಮೈಸೂರು/ಶಿವಮೊಗ್ಗ: ದೇಶದ ಪ್ರಸಿದ್ಧ ಹುಲಿ ಸಂರಕ್ಷಿತ ಅಭಯಾರಣ್ಯ ಬಂಡೀಪುರದಲ್ಲಿ ಅಗ್ನಿ ಅನಾಹುತ ರುದ್ರನರ್ತನಗೈಯುತ್ತಿದ್ದರೆ, ಮತ್ತೊಂದೆಡೆ ಮಲೆನಾಡು ಅರಣ್ಯ, ಮೈಸೂರಿನ ಚಾಮುಂಡಿ ಬೆಟ್ಟ, ಬೆಂಗಳೂರಿ ವಿವಿ ಆವರಣ, ನಂದಿ ಬೆಟ್ಟ, ತೀರ್ಥಹಳ್ಳಿ, ನೆಲಮಂಗಲ, ಚಿಕ್ಕಮಗಳೂರುವಿನಲ್ಲಿ ಅಗ್ನಿಯ ರೌದ್ರಾವತಾರ ಜನರನ್ನು ಬೆಚ್ಚಿಬೀಳಿಸಿದೆ.

Advertisement

ಬಂಡೀಪುರ ಅಭಯಾರಣ್ಯದಲ್ಲಿ ಸುಮಾರು 8ಸಾವಿರ ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅಷ್ಟೇ ಅಲ್ಲ ಸಾವಿರಾರು ಕಾಡು ಪ್ರಾಣಿಗಳು ಭಸ್ಮವಾಗಿ ಹೋಗಿವೆ. ಏತನ್ಮಧ್ಯೆ ಬಂಡೀಪುರ ಅರಣ್ಯದಲ್ಲಿನ ಬೆಂಕಿಯನ್ನು ನಂದಿಸಲು ಸೇನಾ ಹೆಲಿಕಾಪ್ಟರ್ ಬಳಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಇದೀಗ ಬೆಂಗಳೂರಿನ ಬಂಡೀಪುರ, ನಂದಿಬೆಟ್ಟ, ಮೈಸೂರಿನ ಚಾಮುಂಡಿ ಬೆಟ್ಟ, ತೀರ್ಥಹಳ್ಳಿ, ಚಿಕ್ಕಮಗಳೂರಿನ ಎನ್ ಆರ್ ಪುರದಲ್ಲಿ ಅಗ್ನಿಯ ರುದ್ರನರ್ತನ ಹಬ್ಬಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಹಲವೆಡೆ ಬೆಂಕಿ ಹೊತ್ತುಕೊಂಡಿರುವುದು ಜನರಿಗೆ ಆತಂಕ ಮೂಡಿಸಿದೆ.

ಅಷ್ಟೇ ಅಲ್ಲ ಭಾರೀ ಅಗ್ನಿ ಕಂಟಕವನ್ನು ತಹಬದಿಗೆ ತರಲು ಅರಣ್ಯ ಸಿಬ್ಬಂದಿಗಳು, ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಮಧ್ಯಾಹ್ನದ ಹೊತ್ತು ಬೆಂಕಿಯ ಜ್ವಾಲೆ ಹೆಚ್ಚುತ್ತಿದ್ದು, ಇದರಿಂದ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ ಎಂದು ಅರಣ್ಯ ಸಿಬ್ಬಂದಿಗಳು ಅಲವತ್ತುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next