ಕೊಟ್ಟಿಗೆಹಾರ: ಬೆಟ್ಟಗೆರೆ ಗ್ರಾಮದ ರತೀಶ್ ಬಿ.ಎನ್.ಎಂಬುವರಿಗೆ ಸೇರಿದ ಸುಮಾರು ಮೂರು ಎಕರೆ ಕೃಷಿಭೂಮಿಗೆ ಬೆಂಕಿ ಬಿದ್ದು ಬೆಳೆ ಸಂಪೂರ್ಣ ನಾಶವಾಗಿರುವ ಘಟನೆ ಶುಕ್ರವಾರ ನಡೆದಿದೆ.
Advertisement
ತೋಟದಲ್ಲಿ ಬೆಳೆದ ಅಡಿಕೆ, ಕಾಫಿ ಗಿಡಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕೃಷಿಭೂಮಿಯಲ್ಲಿ ಕೆಲವರ್ಷಗಳ ಹಿಂದೆಯಷ್ಟೆ ಗಿಡಗಳನ್ನು ನಾಟಿ ಮಾಡಲಾಗಿತ್ತು.