Advertisement

ಚೆನ್ನೈ ನಲ್ಲಿ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾದ ನೂರಾರು ವಾಹನಗಳು

11:00 AM Feb 24, 2019 | Team Udayavani |

ಚೆನ್ನೈ: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಬೆಂಕಿ ಅವಗಢ ಸಂಭವಿಸಿ ದಿನ ಕಳೆಯುವಷ್ಟರಲ್ಲಿ ಚೆನ್ನೈನಲ್ಲಿ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಚೆನ್ನೈನ ಪೊರೂರು ಆಸ್ಪತ್ರೆಯ ಕಂಪೌಂಡ್ ನಲ್ಲಿ ನಿಲ್ಲಿಸಲಾಗಿದ್ದ ನೂರಾರು ಕಾರ್ ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿವೆ. 

Advertisement

ಆಸ್ಪತ್ರೆಯ ಬಳಿ ಕೆಮಿಕಲ್ ಕಸ ವಿಲೇವಾರಿ ಘಟಕ ಇದ್ದು, ಅದಕ್ಕೆ ಬೆಂಕಿ ತಗುಲಿ ಕಾರುಗಳಿಗೆ ಬೆಂಕಿ ಹಬ್ಬಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಖಾಸಗಿ ಕಂಪೆನಿಗೆ ಸೇರಿದ ನೂರಾರು ವಾಹನಗಳನ್ನು ಆಸ್ಪತ್ರೆ ಬಳಿ ಪಾರ್ಕ್ ಮಾಡಲಾಗಿದ್ದು, ಅವು ಸುಟ್ಟು ಕರಕಲಾಗಿವೆ. 

ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next