ವಿಜಯಪುರ: ನಗರಕ್ಕೆ ಹೊಂದಿಕೊಂಡಿರುವ ಕರಾಡದೊಡ್ಡಿ, ಭೂತನಾಳ ಪರಿಸರದ ಮಾನವ ನಿರ್ಮಿತ ಅರಣ್ಯಕ್ಕೆ ಕಿಡಿಗೇಡಿಗಳು ಭಾನುವಾರ ರಾತ್ರಿ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ಆರಂಭಿಸಿದ್ದ ಕೋಟಿ ವೃಕ್ಷ ಅಭಿಯಾನದ ಫಲವಾಗಿ ಸುಮಾರು 5 ಎಕರೆ ಬಂಜರು ಪ್ರದೇಶದಲ್ಲಿ ಅರಣ್ಯ ನಿರ್ಮಿಸಲಾಗಿದೆ.
ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ಕೃಷ್ಣಾ ಭಾಗ್ಯ ಜಲ ನಿಗಮದ ಅನುದಾನದ ನೆರವಿನಿಂದ ಮಾನವ ನಿರ್ಮಿತ ಅರಣ್ಯ ಸೃಷ್ಟಿಗೆ ಮುಂದಾಗಿದ್ದರು. ಇದೀಗ ಸಸಿಗಳು ಗಿಡ-ಮರಗಳಾಗಿ ಬೆಳೆದಿದ್ದು, ಸುಂದರ ಪರಸರ ನಿರ್ಮಿಸಿದೆ.
ಇದನ್ನೂ ಓದಿ:ಲಖೀಂಪುರ ಖೇರಿ ಘರ್ಷಣೆ: ಪ್ರಿಯಾಂಕಾ ಗಾಂಧಿ ಭೇಟಿ, ಪೊಲೀಸರೊಂದಿಗೆ ವಾಗ್ವಾದ, ಗೃಹ ಬಂಧನ
ಹೀಗಾಗಿ ಐತಿಹಾಸಿಕ ಸ್ಮಾರಕಗಳ ನಗರಿ ವಿಜಯಪುರ ನೈಸರ್ಗಿಕ ಸೋಬಗು ನೋಡಲು ಸಾಧ್ಯವಾಗಿದೆ. ಈ ಪರಿಸರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಸೃಷ್ಟಿಯ ಸೊಬಗು ಸವಿಯಲು ಬಿದಿರು, ಕಟ್ಟಿಗೆಯ ಕಾವಲು-ವೀಕ್ಷಣಾ ಗೋಪುರ ನಿರ್ಮಿಸಿದ್ದು, ಈ ಕಾಷ್ಠ ಗೋಪುರಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಲೇ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.