Advertisement

ಹೆಬ್ರಿ: ಚಾರ ಗ್ರಾ.ಪಂ.ನಲ್ಲಿ ಅಗ್ನಿ ಅವಘಡ: ಸುಟ್ಟು ಕರಕಲಾದ ದಾಖಲೆ ಪತ್ರ

08:57 PM Sep 20, 2022 | Team Udayavani |

ಹೆಬ್ರಿ: ಹೆಬ್ರಿ ಸಮೀಪ ಚಾರ  ಗ್ರಾಮ ಪಂಚಾಯತ್‌ನಲ್ಲಿ  ಸೆ. 19ರ ರಾತ್ರಿ ಆಕಸ್ಮಿಕ ಅಗ್ನಿ  ಅವಘಡ ಸಂಭವಿಸಿದೆ. ಪರಿಣಾಮ ದಾಖಲೆ ಪತ್ರಗಳು,  ಕಂಪ್ಯೂಟರ್‌ ಪೀಠೊಪಕರಣಗಳು ಸುಟ್ಟು ಹೋಗಿದ್ದು ಅಪಾರ  ನಷ್ಟ ಸಂಭವಿಸಿದೆ.

Advertisement

ವಿಷಯ  ತಿಳಿದ ಪಂಚಾಯತ್‌ ಅಧ್ಯಕ್ಷೆ ಕುಸುಮಾ ಪ್ರಭು ಮತ್ತು ಸಿಬಂದಿ  ಮಂಗಳವಾರ ಬೆಳಗ್ಗೆ ಪಂಚಾಯತ್‌ ಬಾಗಿಲು ತೆರೆದು ನೋಡಿದಾಗ ರೆಕಾರ್ಡ್‌ ರೂಮಿನಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಕಂಡು  ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಲಾಯಿತು. ರಾತ್ರಿ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು ಬೆಳಗ್ಗೆ ತನಕ ಬೆಂಕಿ ಉರಿದು ಹಳೆಯ ದಾಖಲೆ ಪತ್ರಗಳೆಲ್ಲ ಸಂಪೂರ್ಣ ಸುಟ್ಟು ಕರಕಲಾಗಿವೆ.

ಕಪಾಟುಗಳು, ಕೆಲವೊಂದು ಕಂಪ್ಯೂಟರ್‌, ಪ್ರಿಂಟರ್‌ ಹಾಗೂ ಪ್ಲಾಸ್ಟಿಕ್‌ ಚೇರ್‌ಗಳು ಸುಟ್ಟುಹೋಗಿವೆ. ಸ್ಥಳಕ್ಕೆ ಹೆಬ್ರಿ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕೆ.ಜಿ., ಕಂದಾಯ ಅಧಿಕಾರಿಗಳು, ಮೆಸ್ಕಾಂ ಹಾಗೂ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್‌ ಸಮಸ್ಯೆ :

ಹಲವಾರು ದಿನಗಳಿಂದ ವಿದ್ಯುತ್‌ ತಂತಿಯಲ್ಲಿ ಸಮಸ್ಯೆ ಇದೆ ಎಂದು ಮೆಸ್ಕಾಂ ಗಮನಕ್ಕೆ ತರಲಾಗಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದ ದಾಖಲೆ ಪತ್ರ ಸಹಿತ ಕೆಲವೊಂದು ಕಂಪ್ಯೂಟರ್‌ ಪೀಠೊಪರಕರಣಗಳು ಸುಟ್ಟ ಪರಿಣಾಮ ಪಂಚಾಯತ್‌ಗೆ ಅಪಾರ ನಷ್ಟವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪಂಚಾಯತ್‌ ಅಧ್ಯಕ್ಷೆ ಕುಸುಮಾ ಪ್ರಭು ತಿಳಿಸಿದ್ದಾರೆ.

Advertisement

ಆತಂಕದಲ್ಲಿ ಗ್ರಾಮಸ್ಥರು :

ಮನೆ ನಿವೇಶನ, ಉದ್ಯೋಗ ಖಾತರಿ, ತೆರಿಗೆ ಪಾವತಿ ಮೊದಲಾದ ದಾಖಲೆ ಪತ್ರಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ದಾಖಲಾತಿ ಸುಟ್ಟು ಹೋದ ಕಾರಣ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಶಾರ್ಟ್‌ ಸರ್ಕ್ನೂಟ್‌ ಆಗಿರುವ ಸಂಭವ ಕಡಿಮೆ :

ವಿದ್ಯುತ್‌ಶಾರ್ಟ್‌ ಸರ್ಕ್ನೂಟ್‌ ಆಗಿದ್ದರೆ ಟ್ರಿಪ್‌ ಆಗುತ್ತಿತ್ತು. ಆದರೆ ಇಂತಹ ಯಾವುದೇ ಪ್ರಕರಣ ನಡೆದಿಲ್ಲ. ಕಟ್ಟಡದ ವಿದ್ಯುತ್‌ ವಯರಿಂಗ್‌ಗೆ ಯಾವುದೇ ಹಾನಿಯಾಗಿಲ್ಲ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next