Advertisement
ತಿಮ್ಮಮ್ಮ, ವೆಂಕಟಲಕ್ಷ್ಮಮ್ಮ, ವೆಂಕಟೇಶ್, ಸಾಕಮ್ಮ ಎಂಬವರಿಗೆ ಸೇರಿದ ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಗುಡಿಸಲಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಮಂದಿಯೆಲ್ಲಾ ಊಟ ಮಾಡಿ ಮಲ ಗುವ ಸಮಯದಲ್ಲಿ ಇದ್ದಕ್ಕಿದ್ದಂತೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿನಾಲ್ಕು ಗುಡಿಸಲುಗಳಿಗೂ ಆವರಿಸಿಕೊಂಡು, ನೋಡು ನೋಡುತ್ತದ್ದಂತೆ ದಹಿಸಿ ಹೋಗಿವೆ. ಬೇಸಿಗೆಯ ಸಂದರ್ಭ ಹಾಗೂ ನಾಲ್ಕುಗುಡಿಸಲು ಹೊಂದಿಕೊಂಡಂತಿದ್ದುದರಿಂದಬೆಂಕಿ ಬೇಗನೆ ಗುಡಿಸಲುಗಳಿಗೆ ಆವರಿಸಿಕೊಂಡು ಉರಿಯಲಾರಂಭಿಸಿದೆ.
Related Articles
Advertisement
ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣ ಆವರಣದಲ್ಲಿ ನಡೆದ ಪ್ರತಿ ಭಟನೆಯಲ್ಲಿ ನಿವಾಸಿಗಳು ತಮಗೆ ವಸತಿ ಕಲ್ಪಿಸುವಂತೆ ಒತ್ತಾಯಿಸಿದರು.
ಮೂಲಕ ಸೌಕರ್ಯ ಒದಗಿಸಿ: ಧಮ್ಮ ದೀವಿಗೆ ನಾಗರೀಕರ ಹೋರಾಟ ವೇದಿಕೆ ಅಧ್ಯಕ್ಷ ಮಲ್ಲಿ ಕಾ ರ್ಜುನ ಮಾತನಾಡಿ, ರಾಜೀವ್ ಗಾಂಧಿಪುರದ ಗೋಮಾಳ ಸರ್ವೆ ನಂ.37/38ರಲ್ಲಿ ಹಲ ವಾರು ನಿವೇ ಶನ, ಮನೆ ರಹಿತ ನಿರ್ಗತಿಕ ಕುಟುಂಬ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾ ರೆ. ಇವರು ನೆಮ್ಮದಿ ಜೀವನ ನಡೆಸಲು ಅನುಕೂಲವಾಗು ವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಕನಿಷ್ಟ ಮೂಲಕ ಸೌಕರ್ಯ ಒದಗಿಸಬೇಕು ಎಂದರು.
ಸರ್ಕಾರಿ ಗೋಮಾಳದಲ್ಲಿ ವಾಸವಾಗಿರುವ ಅಷ್ಟು ನಿರ್ಗತಿಕ ಕುಟುಂಬ ಗ ಳಿಗೆ ಸರ್ಕಾರ ಶೀಘ್ರ ಹಕ್ಕು ಪತ್ರ ಒದಗಿಸಬೇಕು. ಶೌಚಾಲಯ, ವಿದ್ಯುತ್ ಸೌಲಭ್ಯ ಮತ್ತು ಮಕ್ಕಳಿಗೆ ಶಾಲೆ ನಿರ್ಮಿಸಬೇಕು. ಜೊತೆಗೆ ವಸತಿ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದರು.
ಪ್ರತಿಭಟನೆಗೂ ಮುನ್ನ ಸಂಘಟನೆ ಪದಾಧಿಕಾರಿಗಳು, ನಿವಾಸಿಗಳು ಆಂಜ ನೇ ಯ ಸ್ವಾಮಿ ಆರ್ಚ್ ಬಳಿಯಿಂದ ಜಿಲ್ಲಾ ಸರ್ಕಾರಿ ಕಚೇ ರಿಗಳ ಸಂಕಿರ್ಣ ದವರೆಗೆ ಪ್ರತಿ ಭ ಟನಾ ಮೆರವಣಿಗೆ ನಡೆಸಿದರು. ಸರಸ್ವತಿ ಹಾಜರಿದ್ದರು.