Advertisement

ಬಲವಂತದ ಮತಾಂತರ: 9 ಮಂದಿ ವಿರುದ್ಧ ಎಫ್ಐಆರ್‌

07:48 PM Oct 29, 2022 | Team Udayavani |

ಮೀರತ್‌: ಬಲವಂತದ ಮತಾಂತರದ ಆರೋಪದ ಮೇರೆಗೆ ಮೂವರು ಮಹಿಳೆಯರು ಸೇರಿದಂತೆ 9 ಮಂದಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

Advertisement

ಈ ಬಗ್ಗೆ ಉತ್ತರ ಪ್ರದೇಶದ ಮೀರತ್‌ನ ಹಿಂದುಳಿದ ಮಂಗತಪುರಂ ಕಾಲೊನಿಯ ನಿವಾಸಿಗಳು ದೂರು ನೀಡಿದ್ದಾರೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಕೆಲವರು ಮಂಗತಪುರಂ ಕಾಲೊನಿಗೆ ಬಂದು ಆಹಾರ ಸಾಮಾಗ್ರಿಗಳು ವಿತರಿಸಿದರು. ಜತೆಗೆ ಸಹಾಯಕವಾಗಿ ನಿವಾಸಿಗಳಿಗೆ ಹಣವನ್ನು ನೀಡಿದರು. ನಂತರ ಆಮಿಷವೊಡ್ಡಿ ಕ್ರೈಸ್ಥ ಧರ್ಮಕ್ಕೆ ಮತಾಂತರಗೊಳಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಶನಿವಾರ ಪ್ರತಿಭಟನೆ ನಡೆಸಿದ ಮಂಗತಪುರಂ ಕಾಲೊನಿಯ ನಿವಾಸಿಗಳು, “ಕಾಲೊನಿಯ 100ಕ್ಕೂ ಹೆಚ್ಚ ಬಡವರನ್ನು ಕ್ರೈಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರಿಸಲಾಗಿದೆ. ಅಲ್ಲದೇ ಮನೆಗಳಿಗೆ ಬಂದು ಅಲ್ಲಿದ್ದ ಹಿಂದೂ ದೇವರ ಪೋಟೋಗಳನ್ನು ಹೊರಕ್ಕೆ ಎಸೆಯಲಾಯಿತು. ಮತಾಂತರ ವಿಷಯವಾಗಿ ದೂರು ಅಥವಾ ಪ್ರತಿಭಟನೆ ನಡೆಸಿದಂತೆ ಚಾಕು ಮತ್ತು ದೊಣ್ಣೆಗಳನ್ನು ತೋರಿಸಿ ನಮ್ಮನ್ನು ಹೆದರಿಸಲಾಯಿತು,’ ಎಂದು ಅವಲತ್ತುಕೊಂಡಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆ ಸಂಬಂಧ ಇನ್ನಷ್ಟು ಜನರ ಬಂಧನವಾಗುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next