Advertisement

ಇನ್ನು ರೈಲಿಂದಲೇ ಎಫ್ಐಆರ್‌ 

06:00 AM Oct 16, 2018 | |

ನವದೆಹಲಿ: ಇನ್ನು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕಳ್ಳತನ, ದೌರ್ಜನ್ಯ ಸೇರಿದಂತೆ ಯಾವುದೇ ಅಪರಾಧದ ವಿರುದ್ಧ ಎಫ್ಐಆರ್‌ ದಾಖಲಿಸಬಹುದು. ಇದಕ್ಕಾಗಿ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಝೀರೋ ಎಫ್ಐಆರ್‌ ಎಂಬುದಾಗಿ ರೈಲ್ವೆ ಪೊಲೀಸ್‌ ಪಡೆ ದಾಖಲಿಸಿಕೊಳ್ಳಲಿದೆ. ತೊಂದರೆಗೆ ಸಿಲುಕಿರುವ ಮಹಿಳೆಯರಿಗಾಗಿ  ಆ್ಯಪ್‌ನಲ್ಲಿ 

Advertisement

ಪ್ಯಾನಿಕ್‌ ಬಟನ್‌ ಕೂಡಾ ಇರುತ್ತದೆ. ಸದ್ಯ ಇದರ ಪ್ರಾಯೋಗಿಕ ಪರೀಕ್ಷೆ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ದೇಶಾದ್ಯಂತ ಪರಿಚಯಿಸಲಾಗುತ್ತದೆ. ಇದರಿಂದಾಗಿ ಮುಂದಿನ ಸ್ಟೇಷನ್‌ನವರೆಗೂ ಸಂತ್ರಸ್ತರು ಕಾಯಬೇಕಿಲ್ಲ. ಮೊಬೈಲ್‌ ಮೂಲಕವೇ ದೂರು ದಾಖಲಿಸಿದರೆ, ಅವರ ಸಹಾಯಕ್ಕೆ ಆರ್‌ಪಿಎಫ್ ದೌಡಾಯಿಸಲಿದೆ ಎಂದು ಆರ್‌ಪಿಎಫ್ ಡಿಜಿ ಅರುಣ್‌ ಕುಮಾರ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next