Advertisement

DySP ವಿರುದ್ಧ ರೋಷಾವೇಶ; ಸಂಸದ ಕರಡಿ,38 ಮಂದಿ ವಿರುದ್ಧ FIR

10:20 AM May 29, 2018 | |

ಕೊಪ್ಪಳ: ರೈತರ ರಾಷ್ಟ್ರೀಕೃತ ಹಾಗೂ ಖಾಸಗಿ ಸಾಲ ಮನ್ನಾಗೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಬಂದ್‌ ವೇಳೆ ಪೊಲೀಸರೊಂದಿಗೆ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ಸಂಗಣ್ಣ ಕರಡಿ, ಪುತ್ರ ಅಮರೇಶ್‌ ಕರಡಿ ಸೇರಿದಂತೆ 38 ಜನರ ವಿರುದ್ಧ  ಎಫ್ಐಆರ್‌ ದಾಖಲಿಸಲಾಗಿದೆ. 

Advertisement

 ಕೊಪ್ಪಳದಲ್ಲಿ ಬಿಜೆಪಿ ಪ್ರತಿಭಟನೆಯ ವೇಳೆ  ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್‌ ಮಾಡಿಸಲಾಗಿತ್ತು. ಈ ವೇಳೆ ಮೈಕ್‌ ಅಳವಡಿಸಿದ್ದ  ಆಟೋವನ್ನು ವಶಕ್ಕೆ ಪಡೆದಿದ್ದರು. ಆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಸಂಗಣ್ಣ ಕರಡಿ ಹಾಗೂ ಡಿವೈಎಸ್‌ಪಿ ಎಸ್‌.ಎಂ.ಸಂದಿಗವಾಡ ಅವರ ನಡುವೆ ಏಕ ವಚನ ಪದಪ್ರಯೋಗದ ತೀವ್ರ  ವಾಗ್ವಾದ ನಡೆದಿತ್ತು. ಪೊಲೀಸ್‌ ಅಧಿಕಾರಿಯನ್ನು ಎಳೆದಾಡಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. 

 ಸಿಪಿಐ ರವಿ ಉಕ್ಕುಂದ ಅವರು ನೀಡಿರುವ ದೂರಿನಂತೆ ಕೊಪ್ಪಳ ನಗರ ಠಾಣೆಯಲ್ಲಿ  ಸಂಸದ ಕರಡಿ ಮತ್ತು 38 ಜನರ ವಿರುದ್ಧ ಸೆಕ್ಷನ್‌‌143,147,149 341,353,504 ರ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next