ರಾಯ್ಪುರ: ಇತ್ತೀಚೆಗಷ್ಟೇ ಛತ್ತೀಸ್‌ಗಢದ ಸರಕಾರಿ ಅಧಿಕಾರಿಯೊಬ್ಬ ತನ್ನ ದುಬಾರಿ ಫೋನ್ ಅಣೆಕಟ್ಟೆಯಲ್ಲಿ ಬಿದ್ದಿದ್ದಕ್ಕಾಗಿ 42 ಲಕ್ಷ ಲೀಟರ್ ನೀರನ್ನು ಅಣೆಕಟ್ಟೆಯಿಂದ ಹೊರಗೆಬಿಟ್ಟು ಪೋಲು ಮಾಡಿದ್ದು ವರದಿಯಾಗಿತ್ತು. ಆತನಿಗೆ 53 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಮೂಲಕ ಆತನಿಗೆ ಸೂಕ್ತ ಶಿಕ್ಷೆ ವಿಧಿಸಿದೆ. ರಾಜೇಶ್ ವಿಶ್ವಾಸ್ ಎನ್ನುವ ಪಡಿತರ ಅಧಿಕಾರಿ ಅಣೆಕಟ್ಟೆಯಲ್ಲಿ ಬಿದ್ದ ತನ್ನ ಫೋನ್ ಅನ್ನು ಪತ್ತೆಹಚ್ಚಲು ನೀರು ಪೋಲು ಮಾಡಿದ್ದರು, ಅದಕ್ಕಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೆ ಅವರಿಗೆ ಅನುಮತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲವೇಕೆ ಎಂಬ ಪ್ರಶ್ನೆ ಶುರುವಾಗುತ್ತಿದ್ದಂತೆ ಈ ಕ್ರಮ ಕೈಗೊಂಡಿದೆ.
Advertisement