Advertisement

ಗರ್ಭಿಣಿ ಮಮ್ಮಿ ಪತ್ತೆ

01:10 AM May 02, 2021 | Team Udayavani |

ವಾರ್ಸೋ: ಈಜಿಪ್ಟ್ ಮಮ್ಮಿಗಳಿಗೆ ಪ್ರಸಿದ್ಧ. ಪೋಲೆಂಡ್‌ನ‌ ವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ ಇದೇ ಮೊದಲ ಬಾರಿಗೆ “ಗರ್ಭಿಣಿ’ ಯಾಗಿರುವ ಮಮ್ಮಿ ಇದೆ ಎಂದು ಕಂಡುಕೊಂಡಿದ್ದಾರೆ. ಇಂಥ ಬೆಳವಣಿಗೆ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಎಂದು ಪ್ರತಿ  ಪಾದಿಸಿ  ದ್ದಾರೆ. ಸುಮಾರು 2 ಸಾವಿರ ವರ್ಷಗಳ ಹಿಂದಿನದ್ದು ಎಂದು ಆ ವಿಜ್ಞಾನಿಗಳು ಪ್ರತಿ ಪಾದಿಸಿ ದ್ದಾರೆ. ಅದು ಕ್ರಿಸ್ತ ಪೂರ್ವ ಮತ್ತು ಕ್ರಿಸ್ತಶಕ ಮೊದಲನೇ ಶತಮಾನದಲ್ಲಿ ಜೀವಿಸಿದ್ದ ಪುರುಷ ನದ್ದು ಎಂದು ಮೊದಲಿಗೆ ಅಭಿ ಪ್ರಾಯಪಡಲಾಗಿತ್ತು.

Advertisement

ಅದರ ಅವಶೇಷ  ಗಳನ್ನು ಪೋಲಂಡ್‌ ರಾಜ ಧಾನಿ ವಾಸೋìದ ಮ್ಯೂಸಿಯಂನಲ್ಲಿ ಇರಿಸಲಾಗಿದೆ.ಈ ಬಗ್ಗೆ ಮಾತನಾಡಿದ ಪ್ರಾಚ್ಯ ವಸ್ತು ಸಂಶೋಧಕಿ ಮಜೇìನಾ ಒಝ ರೆಕ್‌ ಝಲೈಕ್‌ ಎಕ್ಸ್‌ರೇ ಮೂಲಕ ತೆಗೆದ ಚಿತ್ರಗಳನ್ನು ಗಮನಿಸಿದಾಗ ಅದು ಮಹಿಳೆಯ ದೇಹ ಮತ್ತು ಅದರಲ್ಲಿ 3 ಮಕ್ಕಳು ಇದ್ದ ಬಗ್ಗೆ ದೃಢ  ಪಟ್ಟಿದೆ ಎಂದು ಹೇಳಿದ್ದಾರೆ. ಆಕೆ ಸುಮಾರು 20-30 ವರ್ಷ ವಯೋಮಿತಿಯ ಮಹಿಳೆಯಾಗಿದ್ದಿರಬಹುದು. ಅಸುನೀಗುವ ಸಂದರ್ಭದಲ್ಲಿ 26-30 ವಾರ ಗಳ ಗರ್ಭಿಣಿಯಾಗಿದ್ದಿರಬಹುದು. ದೇಹದಿಂದ ಮಕ್ಕ  ಳನ್ನು ಯಾಕೆ ಹೊರ ತೆಗೆ  ಯದೇ ಬಿಟ್ಟಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next